• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sumalatha Ambareesh: ಜ್ಯೋತಿಷಿ ಕಥೆ ಹೇಳಿ ಕಾಂಗ್ರೆಸ್-ಜೆಡಿಎಸ್​ ಟಾಂಗ್ ನೀಡಿದ ಮಂಡ್ಯ ಸಂಸದೆ

Sumalatha Ambareesh: ಜ್ಯೋತಿಷಿ ಕಥೆ ಹೇಳಿ ಕಾಂಗ್ರೆಸ್-ಜೆಡಿಎಸ್​ ಟಾಂಗ್ ನೀಡಿದ ಮಂಡ್ಯ ಸಂಸದೆ

ಸುಮಲತಾ ಅಂಬರೀಶ್, ಮಂಡ್ಯ ಸಂಸದೆ

ಸುಮಲತಾ ಅಂಬರೀಶ್, ಮಂಡ್ಯ ಸಂಸದೆ

118 ಕಿಲೋಮೀಟರ್ ಅಷ್ಟು ಉದ್ದ ಹೈವೇ ಇದಾಗಿದೆ. ಎಲ್ಲಿ ಬೇಕಾದರೂ ‌ಉದ್ಘಾಟನೆ ಮಾಡಬಹುದಿತ್ತು. ಮಂಡ್ಯವನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಪ್ರಾಮುಖ್ಯತೆ ಏನು ಅಂತ ಪ್ರಧಾನ ಮಂತ್ರಿಗಳು ಗುರುತಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಉದ್ಘಾಟನೆ ಇಟ್ಕೊಂಡಿದ್ದಾರೆ, ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.

ಮುಂದೆ ಓದಿ ...
  • Share this:

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಡ್ಯಕ್ಕೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ರೋಡ್ ಶೋ‌ ಕೂಡ ಮಾಡಲಿದ್ದಾರೆ. ನಾನು ಗೆಜ್ಜಲಗೆರೆ ಕಾರ್ಯಕ್ರಮದಲ್ಲಿ ಭಾಗಿಯಾಗ್ತೇನೆ. ಮುಖ್ಯ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಮೋದಿ ಅವರನ್ನ ಸ್ವಾಗತ ಮಾಡುತ್ತೇವೆ ಎಂದು ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಹೇಳಿದರು. ಇದೇ ವೇಳೆ ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru-Mysuru Expressway) ಕುರಿತು ಮಾತನಾಡಿದ ಸಂಸದೆ ಸುಮಲತಾ, ಒಳ್ಳೆಯ ರಸ್ತೆ ನಿರ್ಮಾಣ ಆಗಿದೆ. ನಾನು ಇದೇ ರಸ್ತೆಯಲ್ಲಿ ಓಡಾಡ್ತಿದ್ದೇನೆ. ಮಂಡ್ಯಕ್ಕೆ (Mandya) ಮೊದಲೆಲ್ಲ ಎರಡು ಗಂಟೆ ಹಿಡಿಯುತ್ತಿತ್ತು. ಈಗ ಕಡಿಮೆ ಅವಧಿಯಲ್ಲಿ ನಾನೇ ಮಂಡ್ಯಕ್ಕೆ ಹೋಗಿ ಬರುತ್ತಿದ್ದೇನೆ. ಇದು ಎಲ್ಲರೂ ಮೆಚ್ಚುವಂತಹ ರಸ್ತೆ. ಮಂಡ್ಯ ಜಿಲ್ಲೆಗೆ ಇದು ಹೆಮ್ಮೆ ಎಂದು ಹೇಳಿದರು.


118 ಕಿಲೋಮೀಟರ್ ಅಷ್ಟು ಉದ್ದ ಹೈವೇ ಇದಾಗಿದೆ. ಎಲ್ಲಿ ಬೇಕಾದರೂ ‌ಉದ್ಘಾಟನೆ ಮಾಡಬಹುದಿತ್ತು. ಮಂಡ್ಯವನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಪ್ರಾಮುಖ್ಯತೆ ಏನು ಅಂತ ಪ್ರಧಾನ ಮಂತ್ರಿಗಳು ಗುರುತಿಸಿದ್ದಾರೆ. ಹಾಗಾಗಿ ಮಂಡ್ಯದಲ್ಲಿ ಉದ್ಘಾಟನೆ ಇಟ್ಕೊಂಡಿದ್ದಾರೆ, ಇದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.


ಪ್ರಧಾನಿಗಳ ಮಾತಿನಲ್ಲಿ ತೂಕ ಇರುತ್ತೆ


ಮೋದಿ ಅವರ ಮಾತುಗಳಲ್ಲಿ ಏನು ನಿರೀಕ್ಷೆ ಮಾಡ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್, ಮೋದಿ ಅವರ ಮಾತುಗಳನ್ನ ಹೊಸದಾಗಿ ನಾನು ಕೇಳುತ್ತಿಲ್ಲ. ಒಂದು ಮಾತು ಹೇಳ್ತಾರೆ ಕಾರ್ಯಕ್ರಮದಲ್ಲಿ 50 ಸಾವಿರ ಜನ ಇದ್ರೆ 45 ಸಾವಿರ ಜನ ಅವರ ಪರ ಕನ್ವರ್ಟ್ ಆಗ್ತಾರೆ. ಮೋದಿ ಮಾತುಗಳಲ್ಲಿ ನಿಜವಾಗಿಯೂ ತೂಕವಿರುತ್ತೆ ಎಂದು ಪ್ರಧಾನಿಗಳನ್ನು ಹೊಗಳಿದರು.


ನಾನು ಪಾರ್ಲಿಮೆಂಟ್​​​ನಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ ಮತ್ತು ಅವರಿಂದ ಸಾಕಷ್ಟು ಕಲಿತಿದ್ದೇನೆ. ಯಾವುದೇ ವಿಷಯ ಇದ್ದರೂ ಅದನ್ನು ಚೆನ್ನಾಗಿ ಆರ್ಥ ಮಾಡಿಕೊಂಡು ತೂಕವಾಗಿ ಮಾತನಾಡುತ್ತಾರೆ. ಎಲ್ಲೆಲ್ಲಿ ಪಂಚ್ ಕೊಡಬೇಕು ಎಲ್ಲೆಲ್ಲಿ ಸೀರಿಯಸ್ ಆಗಿ ಮಾತನಾಡಬೇಕು ಅನ್ನೋ ವಿಚಾರದಲ್ಲಿ ಮೋದಿ ಮಾಸ್ಟರ್ ಎಂದು ಹೇಳಿದರು.


ಕಾಂಗ್ರೆಸ್, ಜೆಡಿಎಸ್​​ಗೆ ಟಾಂಗ್


ಇದೇ ವೇಳೆ ದಶಪಥ ಹೆದ್ದಾರಿ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ಜೆಡಿಎಸ್​​ಗೆ ಟಾಂಗ್ ನೀಡಿದ ಸಂಸದೆ ಸುಮಲತಾ, ಜ್ಯೋತಿಷಿ ಒಬ್ಬರಿಗೆ ಕನಸು ಬಿತ್ತಂತೆ ನಿಮಗೆ ಮಗು ಆಗುತ್ತೆ ಅಂತ. ಅದೇ ರೀತಿ ತಂದೆ ತಾಯಿಗೆ ಜ್ಯೋತಿಷಿ ಹೇಳಿದ ಹಾಗೆ ಮಗು ಆಯಿತಂತೆ. ಈಗ ಕ್ರೆಡಿಟ್ ಜ್ಯೋತಿಷಿಗೆ ಹೋಗಬೇಕಾ? ಅಥವಾ ಆ ತಂದೆ ತಾಯಿಗೆ ಹೋಗಬೇಕಾ ಎಂದು ಲೇವಡಿ ಮಾಡಿದರು.
ಈ ರೀತಿ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ತುಂಬಾ ಜನ ಇರುತ್ತಾರೆ. ಈ ವಿಚಾರದಲ್ಲಿ ಕ್ರೆಡಿಟ್ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಯಾರಿಗೆ ಕ್ರೆಡಿಟ್ ಕೊಡಬೇಕು ಅನ್ನೋದು ಜನರಿಗೆ ಚೆನ್ನಾಗಿ ಗೊತ್ತಿದೆ. ಸಾಕಷ್ಟು ಯೋಜನೆಗಳು ನಮಗೆ ಬಂದಿದೆ. ನಮ್ಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು 20 ವರ್ಷ ಬೇಕಾಯ್ತು. ಆದ್ರೆ ಇಂತಹ ರಸ್ತೆಯೊಂದು ಕೇವಲ ನಾಲ್ಕು ವರ್ಷದಲ್ಲಿ ಮಾಡಲಾಗಿದೆ. ಈ ಕ್ರೆಡಿಟ್ ಯಾರಿಗೆ ತಲುಪಬೇಕು ಅವರಿಗೆ ತಲುಪುತ್ತೆ ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಟಾಂಗ್ ನೀಡಿದರು.
ಬೇರೆಯವರ ತರ ನಾನು ಕ್ರೆಡಿಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲ್ಲ. ಜನರಿಗೆ ಯಾವ ರೀತಿ ಅನುಕೂಲ ಆಗುತ್ತೆ ಅನ್ನೋ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ:  Narendra Modi ಸ್ವಾಗತಿಸಲು ಮಂಡ್ಯದಲ್ಲಿ ಹಾಕಿದ್ದ ಉರಿಗೌಡ-ನಂಜೇಗೌಡ ಹೆಸರಿನ ದ್ವಾರ ರಾತ್ರೋರಾತ್ರಿ ತೆರವು!


ಮಂಡ್ಯ ರಾಜಕೀಯ ಚಿತ್ರಣ ಬದಲಾಗಲಿದೆ


ಮುಂದೆ ಖಂಡಿತ ಮಂಡ್ಯದ ರಾಜಕೀಯ ಚಿತ್ರಣ ಬದಲಾಗುತ್ತದೆ. ಬದಲಾವಣೆಯ ಗಾಳಿ ನಿಮಗೆ ಮೇಲ್ನೋಟಕ್ಕೆ ಕಾಣದೇ ಇರಬಹುದು. ಆದರೆ ಒಳಗೊಳಗೆ ಸಾಕಷ್ಟು ಬದಲಾವಣೆ ಈಗಾಗಲೇ ಆಗಿದೆ. ಮಂಡ್ಯದಲ್ಲಿ ಬದಲಾವಣೆ ಈ ರೀತಿ ಅವಕಾಶ ಬೇಕು ಅಂತ ಜನ ಕಾಯ್ತಿದ್ದಾರೆ ಎಂದು ಹೇಳಿದರು.

Published by:Mahmadrafik K
First published: