HOME » NEWS » State » MANDYA MAN SEXUALLY HARASSED GIRL CHANDRALAYOUT POLICE ARREST ACCUSED SESR KMTV

ಕೆಲಸ ಕೊಡಿಸುವುದಾಗಿ ಯುವತಿ ಮೇಲೆ ದೌರ್ಜನ್ಯ; ಮಂಡ್ಯದ ಮೂಲದ ಆರೋಪಿ ಬಂಧನ

ನೊಂದ ಯುವತಿ ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಇದರ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. 

news18-kannada
Updated:December 25, 2020, 6:30 PM IST
ಕೆಲಸ ಕೊಡಿಸುವುದಾಗಿ ಯುವತಿ ಮೇಲೆ ದೌರ್ಜನ್ಯ; ಮಂಡ್ಯದ ಮೂಲದ ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 25): ಕೆಲಸ ಕೊಡಿಸುವ ನೆಪದಲ್ಲಿ ಯುವತಿಯ ಮೇಲೆ ದೌರ್ಜನ್ಯ ನಡೆಸಿ ಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯನ್ನು ಚಂದ್ರ ಲೇಔಟ್​ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಸಾಗರ್​ ಗೌಡ ಬಂಧಿತ ಆರೋಪಿ. ಆನ್​ಲೈನ್​ ಫುಡ್​ ಡೆಲಿವರಿ ಬಾಯ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ, ಯುವತಿ ಮೇಲೆ ದೌರ್ಜನ್ಯ ನಡೆಸಿ, ವಿಡಿಯೋ ಚಿತ್ರೀಕರಣ ನಡೆಸಿ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ. ಅಲ್ಲದೇ ಯುವತಿ ಮೇಲೆ ಪದೇ ಪದೇ ದೌರ್ಜನ್ಯ ಎಸಗುತ್ತಿದ್ದ. ಇದರಿಂದ ನೊಂದ ಯುವತಿ ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಇದರ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.  2018, ಸೆಪ್ಟೆಂಬರ್​ನಲ್ಲಿ ಆಕೆಯ ಸಂಬಂಧಿಕರೊಬ್ಬರ ಬರ್ತಡೇ ಪಾರ್ಟಿಯಲ್ಲಿ ಯುವತಿಗೆ ಆರೋಪಿ ಸಾಗರ್ ಗೌಡನ ಪರಿಚಯ ಆಗಿದೆ. ಈ ವೇಳೆ ಮೊಬೈಲ್​ ನಂಬರ್​ ಪಡೆದ ಈತ ಆಕೆಗೆ ಸಂದೇಶ ರವಾನಿಸುತ್ತಿದ್ದನಂತೆ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳದಿದೆ. 

2019ರಲ್ಲಿ ಆಗಸ್ಟ್​ 10ರಂದು ಯುವತಿಗೆ ಕೆಲಸ ಕೊಡಿಸುವುದಾಗಿ  ನಾಯಂಡಹಳ್ಳಿ ಬಸ್ ನಿಲ್ದಾಣಕ್ಕೆಆರೋಪಿ ಕರೆಸಿಕೊಂಡಿದ್ದಾನೆ. ಈ ವೇಳೆ ಆಕೆಗೆ ಮತ್ತುಬರುವ ಕೇಕ್​ ತಿನ್ನಿಸಿ, ವಿಶ್ರಾಂತಿ ಪಡೆಯಲು ಹತ್ತಿರದ ಅಕ್ಕನ ಮನೆಗೆ ಹೋಗೋಣ ಎಂದು ಕರೆದು ದೌರ್ಜನ್ಯ ನಡೆಸಿದ್ದಾನೆ. ಅಲ್ಲದೇ, ವಿಡಿಯೋ ಚಿತ್ರೀಕರಣ ನಡೆಸಿ, ಬ್ಲ್ಯಾಕ್​ ಮೇಲ್​ ಮಾಡಿ 1 ಲಕ್ಷ ಹಣ ವಸೂಲಿ ಮಾಡಿದ್ದಾನೆ.

ಇದನ್ನು ಓದಿ: ವೈಕುಂಠ ಏಕಾದಶಿ ಅಂಗವಾಗಿ ದೇವರ ದರ್ಶನ ಪಡೆದ ಸಿಎಂ, ಮಾಜಿ ಸಿಎಂ

ಇಷ್ಟೆ ಅಲ್ಲದೇ, ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾನೆ. ಅಲ್ಲದೇ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಮದುವೆಯಾಗದ ಹಿನ್ನಲೆ ಯುವತಿ,  ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಗ್ರಾಮದ ಸಾಗರ್​ ಗೌಡ  ಪೋಷಕರ ಬಳಿ ನ್ಯಾಯ ಕೇಳಲು ಹೋಗಿದ್ದಾಳೆ.

ಈ ವೇಳೆ ಈತ ಇದಕ್ಕೂ ಮುಂಚೆ 26 ಜನ ಯುವತಿಯರಿಗೆ ಇದೇ ರೀತಿ ಮೋಸ ಮಾಡಿದ್ದಾನೆ ಎಂದು ಆತನ ತಂದೆ  ರಾಮೇಗೌಡ ತಿಳಿಸಿದ್ದಾರೆ. ಅಲ್ಲದೇ, ದೌರ್ಜನ್ಯ ಎಸಗಿದ ಎಲ್ಲಾ ಯುವತಿಯರಿಗೂ ನನ್ನ ಮಗ ಬಾಳು ಕೊಡಲು ಆಗುತ್ತಾ? ನಿಮ್ಮ ಜಾತಿ ಬೇರೆ ನನ್ನ ಜಾತಿ ಬೇರೆ ಎಂದು ಹೇಳಿ ತಮಗೆ ಕೊಲೆ ಬೆದರಿಕೆ ಹಾಕಿದರೆಂದು ನೊಂದ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
Published by: Seema R
First published: December 25, 2020, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories