ಮಂಡ್ಯ(ಮಾ.10): ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ಯಾವ ಬಿಜೆಪಿ ನಾಯಕರೂ ಗೆದ್ದಿರಲಿಲ್ಲ. ಈಗ ಜನರ ಆಶೀರ್ವಾದದಿಂದ ನಾರಾಯಣಗೌಡರು ಗೆದ್ದಿದ್ದಾರೆ. ಅವರು ಮಂತ್ರಿಯಾಗಿದ್ದಾರೆ, ಉಸ್ತುವಾರಿ ಕೂಡ ಆಗಿದ್ದಾರೆ. ಅವರ ನೇತೃತ್ವದಲ್ಲೇ ಮುಂಬರುವ ಸ್ಥಳೀಯ ಚುನಾವಣೆ ಎದುರಿಸುತ್ತೇವೆ. ಪಕ್ಷದ ಆದೇಶದ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿಯಿಂದ ಶಾಸಕ, ಮಂತ್ರಿ ಅಂತ ಯಾರೂ ಇರಲಿಲ್ಲ. ಈಗ ನಾರಾಯಣಗೌಡರು ಸಚಿವರಾಗಿದ್ದಾರೆ ಎಂದರು. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರವಾಗಿ, ಮಾಜಿ ಪ್ರಧಾನಿ ದೇವೇಗೌಡರು ಹೋರಾಟ ಮಾಡಿ ಹೋಗಿದ್ದಾರೆ. ನಾರಾಯಣಗೌಡರ ಗಮನಕ್ಕೂ ಬಂದಿದೆ. ಅವರೇ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಯಡಿಯೂರಪ್ಪ ಇಲ್ಲದಿದ್ದಾಗ ಬಿಜೆಪಿ ಶೂನ್ಯ ಎಂಬ ವಿಚಾರವಾಗಿ, ಅದಕ್ಕೆ ತೇಜಸ್ವಿನಿ ರಮೇಶ್ ಉತ್ತರ ಕೊಟ್ಟಿದ್ದಾರೆ. ಆ ಒಂದು ಸಂಖ್ಯೆ ಎಡಭಾಗಕ್ಕೆ ಬಂದರೆ ಶೂನ್ಯ ಹಾಗೂ ಬಲ ಭಾಗಕ್ಕೆ ಬಂದರೆ 10 ಆಗುತ್ತೆ, 100 ಆಗುತ್ತೆ. ಯಡಿಯೂರಪ್ಪನವರ ಶಕ್ತಿ ಏನು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ ಹಾಗೂ ವಿರೋಧ ಪಕ್ಷದವರಿಗೂ ತಿಳಿದಿದೆ. ದೇಶದಲ್ಲಿ 75ವರ್ಷ ಆದವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಆದಂತಹ ಯಡಿಯೂರಪ್ಪರವರಿಗೆ ಮುಖ್ಯ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ 77ವರ್ಷ ಕಳೆದಿದೆ, ಆದರೆ ವಯಸ್ಸಿಗೂ ಇದಕ್ಕೂ ಸಂಬಂಧವಿಲ್ಲ. ಯಡಿಯೂರಪ್ಪನವರಿಗೆ ಶಕ್ತಿಯಿದೆ, ತಾಕತ್ತು ಇದೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು.
ದಿಢೀರ್ ಬೃಹತ್ ಕುಸಿತದ ನಂತರ ತೈಲ ಬೆಲೆಯಲ್ಲಿ ಸ್ವಲ್ಪ ಚೇತರಿಕೆ
ಬಜೆಟ್ನಲ್ಲಿ ಮಂಡ್ಯ ಜಿಲ್ಲೆ ಕಡೆಗಣಿಸಿದ್ದಾರೆ ಎಂಬ ವಿಚಾರಕ್ಕೆ ಇನ್ನು ಮುಖ್ಯಮಂತ್ರಿಗಳು ಉತ್ತರ ಕೊಡುವುದು ಬಾಕಿ ಇದೆ. ಮುಂದಿನ ತಿಂಗಳಲ್ಲಿ ಉತ್ತರ ಕೊಡುತ್ತಾರೆ. ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಏನು ಘೋಷಣೆ ಮಾಡಿರಲಿಲ್ಲ. ಆದರೂ ಮಂಡ್ಯಕ್ಕೆ ಅನುದಾನ ಕೊಟ್ಟಿದ್ದಾರೆ. ಈಗಲೂ ಕೂಡ ಕೊಡುತ್ತಾರೆ. ಈ ಬಗ್ಗೆ ನಾರಾಯಣಗೌಡರು ಚರ್ಚೆ ಮಾಡಿದ್ದಾರೆ ಎಂದರು.
ಮೈಶುಗರ್ ಪುನರ್ ಆರಂಭಿಸುವ ವಿಚಾರವಾಗಿ, ಇದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಇದು ಒಂದು ರೂಪಕ್ಕೆ ಬರುತ್ತದೆ ಎಂದು ಹೇಳಿದರು. ನಾರಾಯಣಗೌಡರು ಜೈಲಿಗೆ ಹೋದವರ ಜೊತೆ ವೇದಿಕೆ ಹಂಚಿಕೊಳ್ಳಲ್ಲವಂತೆ ಎಂಬ ವಿಚಾರವಾಗಿ, ಅದರ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ ತಿಳಿದುಕೊಳ್ಳುತ್ತೇನೆ ಎಂದರು.
ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಗೆ ಅನುದಾನ ತಡೆ ಹಿಡಿದಿದೆ ಎಂಬ ವಿಚಾರವಾಗಿ, ಮೈತ್ರಿ ಸರ್ಕಾರದ ಅನುದಾನ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಸಿಎಂ ಯಡಿಯೂರಪ್ಪನವರ ಸರ್ಕಾರದಲ್ಲಿ ಎಲ್ಲಾ ಜಿಲ್ಲೆಗಳಿಗೆ ಅನುದಾನ ನೀಡಲಾಗಿದೆ. ಎಲ್ಲಾ ಜಿಲ್ಲೆಗಳಿಗೂ ಅನುದಾನ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದ ತಡೆಹಿಡಿಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು; ಅಖಾಡಕ್ಕೆ ಎಂಟ್ರಿಕೊಟ್ಟ ಕರ್ನಾಟಕದ ಟ್ರಬಲ್ ಶೂಟರ್ ಡಿಕೆಶಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ