ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್​ ನಡುವೆ ಫೈಟ್!

news18
Updated:August 28, 2018, 4:10 PM IST
ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್​ ನಡುವೆ ಫೈಟ್!
ಮಂಡ್ಯ ಜಿಲ್ಲೆ
news18
Updated: August 28, 2018, 4:10 PM IST
ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ

ಮಂಡ್ಯ (ಆ.28): ಸಕ್ಕರೆ ಜಿಲ್ಲೆ ಮಂಡ್ಯದ 5 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 117 ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಲೋಕಲ್ ಎಲೆಕ್ಷನ್ ಅಖಾಡ ರಂಗೇರಿದೆ.

 

 

ಮಂಡ್ಯ ನಗರಸಭೆ, ಮದ್ದೂರು, ನಾಗಮಂಗಲ, ಪಾಂಡವಪುರ ಪುರಸಭೆ ಸೇರಿದಂತೆ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆಯುತ್ತಿದೆ‌. ಈಗಾಗಲೇ 5 ಸ್ಥಳೀಯ ಸಂಸ್ಥೆಗಳ 117 ಸ್ಥಾನಗಳಿಗೆ 393 ಅಭ್ಯರ್ಥಿಗಳು ಚುನಾವಣೆ ಎದುರಿಸಿಲು ಸಜ್ಜಾಗಿದ್ದು, ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ‌. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್ ಪಕ್ಷಕ್ಕೆ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಅಲ್ಲದೇ ಚುನಾವಣೆಗೂ ಮೊದಲೇ ಜೆಡಿಎಸ್ ಖಾತೆ ತೆರೆದಿದೆ. ಮದ್ದೂರು ಪುರಸಭೆಯ ಪ್ರಸನ್ನ ಎಂಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿ ಜೆಡಿಎಸ್ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿದೆ.‌ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವ ಬಗ್ಗೆ‌ ಜೆಡಿಎಸ್ ಶಾಸಕರು ಮತ್ತು‌ ಉಸ್ತುವಾರಿ ಸಚಿವರು ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ‌ ಅಸ್ತಿತ್ವ ಕಳೆದಿಕೊಂಡಿರುವ ಕಾಂಗ್ರೆಸ್ ಪಕ್ಷ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ಮೈ ಕೊಡವಿಕೊಂಡು‌ ಎದ್ದು ನಿಲ್ಲಲು ಸಕಲ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದು, 117 ಕ್ಷೇತ್ರಗಳಲ್ಲೂ ಜೆಡಿಎಸ್​ಗೆ ಎದುರಾಳಿಯಾಗಿ ಸ್ಪರ್ಧೆ ಮಾಡಿದೆ. ಈಗಾಗಲೇ ಪಕ್ಷದ ಪರವಾಗಿ‌ ಪ್ರಚಾರಕ್ಕೆ ಕೆಪಿಸಿಸಿ ಅಧ್ಯಕ್ಷರೇ‌ ಮುಂದಾಗಿದ್ದು , ಹಲವು ಕಾಂಗ್ರೆಸ್ ಸಚಿವರು‌ ಮತ್ತು‌ ಶಾಸಕರೊಂದಿಗೆ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ‌.ಇದರ ಜೊತೆ ಚಿತ್ರನಟ ರವಿಶಂಕರ್ ಕೂಡ ಕೈ ಅಭ್ಯರ್ಥಿಗಳ ಪರವಾಗಿ ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಇಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿದ್ದರೂ ನಮ್ಮ ಪಕ್ಷ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಪಾಂಡವಪುರ ಪುರಸಭೆಯಲ್ಲಿ ರೈತ ಸಂಘದೊಂದಿಗೆ ಮಾತ್ರ ಹೊಂದಾಣಿಕೆ ಮಾಡಿಕೊಂಡಿದ್ದು, ಈ ಬಾರಿ ಕೂಡ ಅಧಿಕಾರ ಹಿಡಿಯೋದಾಗಿ ಕೆಪಿಸಿಸಿ‌ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ವ್ಯಕ್ತಪಡಿಸಿದ್ದಾರೆ‌.

ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಡುವೆ ನೇರ ಹಣಾಹಣಿ ನಡೆಯಲಿದೆ. ಇನ್ನು‌ ಉಳಿದಂತೆ ಬಿಜೆಪಿ ಪಕ್ಷ 101 ವಾರ್ಡ್​ಗಳಲ್ಲಿ‌ ಸ್ಪರ್ಧೆ ಮಾಡಿದ್ದರೆ ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಒಡ್ಡಲು ಸಿದ್ದರಾಗಿದ್ದು, ಅಧಿಕಾರ ಹಿಡಿಯುವ ಪಕ್ಷಕ್ಕೆ ನಿರ್ಣಾಯಕರಾಗಲಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ