HOME » NEWS » State » MANDYA JDS MEMBER LAKSHMI ASHWINI GOWDA JOINS BJP TOMORROW SESR KGV

ಮಂಡ್ಯದಲ್ಲಿ ಜೆಡಿಎಸ್​ಗೆ ಬಿಗ್​ ಶಾಕ್​: ನಾಳೆ ಬಿಜೆಪಿ ಸೇರಲಿರುವ ಲಕ್ಷ್ಮಿ ಅಶ್ವಿನಿ ಗೌಡ

ನಾಗಮಂಗಲ ವಿಧಾನಸಭಾ ಬಳಿಕ ಲೋಕಸಭಾದಿಂದ ಕಣಕ್ಕೆ ಇಳಿಸುವ ಆಶ್ವಾಸನೆ ನೀಡಿದ್ದ ಜೆಡಿಎಸ್​ ಕಡೆಗೆ ಲಕ್ಷ್ಮಿ ಅಶ್ವಿನಿ ಗೌಡ ಅವರನ್ನೇ ಮರೆತಿತ್ತು

news18-kannada
Updated:January 15, 2021, 8:20 PM IST
ಮಂಡ್ಯದಲ್ಲಿ ಜೆಡಿಎಸ್​ಗೆ ಬಿಗ್​ ಶಾಕ್​: ನಾಳೆ ಬಿಜೆಪಿ ಸೇರಲಿರುವ ಲಕ್ಷ್ಮಿ ಅಶ್ವಿನಿ ಗೌಡ
ಲಕ್ಷ್ಮಿ ಅಶ್ವಿನಿ ಗೌಡ
  • Share this:
ಬೆಂಗಳೂರು (ಜ. 15): ಜೆಡಿಎಸ್​ ಟಿಕೆಟ್​ ಸಿಗುವ ವಿಶ್ವಾಸದೊಂದಿಗೆ ಎರಡು ಎರಡು ಬಾರಿ ನಿರಾಸೆಗೆ ಒಳಗಾದವರು ಮಾಜಿ ಐಆರ್​ಎಸ್​ ಅಧಿಕಾರಿ ಲಕ್ಷ್ಮಿ ಅಶ್ವಿನಿ ಗೌಡ. ನಾಗಮಂಗಲ ವಿಧಾನಸಭಾ ಬಳಿಕ ಲೋಕಸಭಾದಿಂದ ಕಣಕ್ಕೆ ಇಳಿಸುವ ಆಶ್ವಾಸನೆ ನೀಡಿದ್ದ ಜೆಡಿಎಸ್​ ಕಡೆಗೆ ಲಕ್ಷ್ಮಿ ಅಶ್ವಿನಿ ಗೌಡ ಅವರನ್ನೇ ಮರೆತಿತ್ತು. ಪಕ್ಷದ ವರಿಷ್ಠರ ಮಾತು ನಂಬಿ ಬಂದಿದ್ದ ಮಾಜಿ ಅಧಿಕಾರಿಯನ್ನು ತೆರೆಮರೆಗೆ ಸರಿಸಿ, ಕಡೆಗೆ ಮಂಡ್ಯ ರಾಜಕಾರಣದಲ್ಲಿ ಜನರಿಂದಲೇ ದೂರಾಗುವ ಸನ್ನಿವೇಶ ಎದುರಾಯಿತು. ಜೆಡಿಎಸ್​ ವರಿಷ್ಠರ ಈ ನಡುವಳಿಕೆಯಿಂದ ಬೇಸತ್ತ ಲಕ್ಷ್ಮಿ ಅಶ್ವಿನಿ ಗೌಡ ಈಗ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಜೆಡಿಎಸ್​ ತೊರೆದು ಬಿಜೆಪಿ ಸೇರಲು ಅವರು ತೀರ್ಮಾನಿಸಿದ್ದು, ನಾಳೆ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಮ್ಮುಖದಲ್ಲಿ ಸೇರ್ಪಡನೆಗೊಳ್ಳಲಿದ್ದಾರೆ. ಇವರ ಜೊತೆ ಅಕ್ಷಯ ಗೋಲ್ಡ್ ಸಂಸ್ಥೆಯ ಮಾಲೀಕರಾದ ಸತೀಶ್ ಕೂಡ ಸೇರ್ಪಡೆನೆಯಾಗಲಿದ್ದಾರೆ. ಈ ಮೂಲಕ ಬಿಜೆಪಿ ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.

ಈಗಾಗಲೇ ಕೆಆರ್​ ಪೇಟೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಿಜೆಪಿ ಮಂಡ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿಸಲು ಮುಂದಾಗಿದೆ. ಈಗ ಲಕ್ಷ್ಮಿ ಅಶ್ವಿನಿ ಗೌಡರ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂಬ ಮಾತು ಕೇಳಿ ಬಂದಿದೆ.

ಎಂಬಿಬಿಎಸ್​ ಪಧವೀಧರೆ, ಮಾಜಿ ಐಆರ್​ಎಸ್​ ಅಧಿಕಾರಿ: 

ಮಂಡ್ಯದ ಮಳವಳ್ಳಿ ತಾಲೂಕಿನ ನಿಟ್ಟೂರಿನ ಕೋಡಹಳ್ಳಿ ಗ್ರಾಮದ ಲಕ್ಷ್ಮಿ ಅಶ್ವಿನಿ ಗೌಡ ಎಂಬಿಬಿಎಸ್​ ಪದವೀಧರೆ. ಸಮಾಜಸೇವೆ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಲಕ್ಷ್ಮೀ 2013ರಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿಸಿ, 2015ರಲ್ಲಿ ಐಆರ್​ಎಸ್​ ಅಧಿಕಾರಿಯಾದರು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಬದುಕು ಸುಧಾರಿಸಬೇಕೆಂಬ ಉದ್ದೇಶದಿಂದ 2017ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ನಿರ್ಧಾರದ ಹಿಂದೆ ಜೆಡಿಎಸ್​ ನಾಯಕರು ಪಕ್ಷದಿಂದ ನಾಗಮಂಗಲ ಟಿಕೆಟ್ ನೀಡುವ​ ಆಶ್ವಾಸನೆ ಕೂಡ ಇತ್ತು.

ಇದನ್ನು ಓದಿ: ಯತ್ನಾಳ್​ಗೆ ನೀಡಿದ್ದ ಭದ್ರತೆ ದಿಢೀರ್​ ಹಿಂದಕ್ಕೆ; ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ

ಕಳೆದ ವಿಧಾನಸಭೆಯಲ್ಲಿ ನಾಗಮಂಗಲ ಟಿಕೆಟ್​ ಆಕಾಂಕ್ಷಿಯಾಗಿದ್ದ ಲಕ್ಷ್ಮೀಗೆ ಕಡೆ ಸಮಯದಲ್ಲಿ ಟಿಕೆಟ್​ ಕೈ ತಪ್ಪಿತು. ಕಾರಣ ಸುರೇಶ್​ ಗೌಡ. ಕಾಂಗ್ರೆಸ್​ ತೊರೆದು ಜೆಡಿಎಸ್​ಗೆ ಸೇರಿದ್ದ ಸುರೇಶ್​ ಗೌಡಗೆ ಟಿಕೆಟ್​ ನೀಡಿದ್ದ ನಾಯಕರ ನಡೆ ಬಗ್ಗೆ ಲಕ್ಷ್ಮೀ ಬೇಸರ ತೊಡಿಕೊಂಡಿದ್ದು ಇದೆ. ಪಕ್ಷದ ನಡುವಳಿಕೆ ಬಗ್ಗೆ ಅತೃಪ್ತಿ ತೊರಿದ ಅವರಿಗೆ ಖುದ್ದು ಅನಿತಾ ಅವರೇ ಮನವೊಲಿಸಿದರು ಎನ್ನಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಸೇವೆ ಅನುಭವಸ್ಥರಾಗಿರುವ ನಿಮಗೆ ಲೋಕಸಭೆ ಟಿಕೆಟ್​ ನೀಡಲಾಗುವುದು ಎಂಬ ಆಶ್ವಾಸನೆ ನೀಡಿದ್ದರು ಎನ್ನಲಾಗಿತ್ತು.

ಇದಾದ ಬಳಿಕ ಲೋಕಸಭೆಯ ಉಪ ಚುನಾವಣೆಯಲ್ಲಿ ಶಿವರಾಮೇಗೌಡಗೆ ಟಿಕೆಟ್​ ನೀಡಿತು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರ ಮೊಮ್ಮಗ ನಿಖಿಲ್​ ಕುಮಾರಸ್ವಾಮಿ ಅವರನ್ನೇ ಪಕ್ಷ ಕಣಕ್ಕೆ ಇಳಿಸಿ ಕುಟುಂಬ ರಾಜಕಾರಣದ ವ್ಯಾಮೋಹ ಮೆರೆದಿತ್ತು. ಈ ಮೂಲಕ ಜೆಡಿಎಸ್​  ಲಕ್ಷ್ಮಿ  ಅವರನ್ನು ಮತ್ತೊಮ್ಮೆ ಕಡೆಗಣಿಸಿತ್ತು. ಇದರಿಂದ ಅಸಮಾಧಾನಗೊಂಡ ಲಕ್ಷ್ಮಿ ಜೆಡಿಎಸ್​ ನಾಯಕರ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದರು
Published by: Seema R
First published: January 15, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories