HOME » NEWS » State » MANDYA INTERNATIONAL KABBADI PLAYER NEED HELP SESR RGM

ಅಂತರಾಷ್ಟ್ರೀಯ ಮಟ್ಟದ ಕಬ್ಬಡಿಯಲ್ಲಿ ಮಂಡ್ಯ ಹುಡುಗಿ ಸಾಧನೆ; ಕ್ರೀಡಾ ರತ್ನ ಪುರಸ್ಕೃತೆಗೆ ಬೇಕಿದೆ ನೆರವು

ಈ ಗ್ರಾಮೀಣ ಪ್ರತಿಭೆ  ಮತ್ತಷ್ಟು ಸಾಧನೆ ಮಾಡಲು ಸರ್ಕಾರದ ನೆರವು ಸಿಗುತ್ತಿಲ್ಲ. ಬೇರೆ ಕ್ರೀಡೆಗಳ ರೀತಿ ಕಬ್ಬಡಿಗೆ ಉತ್ತೇಜನ ಸಿಗುತ್ತಿಲ್ಲ. ಆದರಲ್ಲಿಯೂ ಮಹಿಳಾ ಕ್ರೀಡಾಪಟುಗಳಿಗೆ ಸರ್ಕಾರದ ಸರಿಯಾದ ಸಲವತ್ತು ಆಗಲಿ, ಪ್ರೋತ್ಸಾಹ ಆಗಲಿ ಸಿಗುತ್ತಿಲ್ಲ ಎನ್ನುವ ಕೊರಗಿದೆ.

news18-kannada
Updated:November 11, 2020, 7:33 AM IST
ಅಂತರಾಷ್ಟ್ರೀಯ ಮಟ್ಟದ ಕಬ್ಬಡಿಯಲ್ಲಿ ಮಂಡ್ಯ ಹುಡುಗಿ ಸಾಧನೆ; ಕ್ರೀಡಾ ರತ್ನ ಪುರಸ್ಕೃತೆಗೆ ಬೇಕಿದೆ ನೆರವು
ಕೌಶಲ್ಯ
  • Share this:
ಮಂಡ್ಯ (ನ.10): ಆಕೆ ಅಪ್ಪಟ ಗ್ರಾಮೀಣ ಪ್ರತಿಭೆ.‌ ಅಪ್ಪನ  ಆಸೆಯಂತೆ ಕಬ್ಬಡಿ ಕ್ರೀಡೆಗೆ ಒತ್ತು ಕೊಟ್ಟು ರಾಷ್ಟ್ರೀಯ ಕಬ್ಬಡಿ ಆಟಗಾರ್ತಿಯಾಗಿ ಸಾಧನೆ ಮಾಡಿದ್ದಾಳೆ. ಈಕೆಯ ಈ ಸಾಧನೆ ಗುರುತಿಸಿ ರಾಜ್ಯ ಸರ್ಕಾರ  ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ  ಈ  ಗ್ರಾಮೀಣ ಪ್ರತಿಭೆ  ಜಿಲ್ಲೆಯ ಗೌರವ ಹೆಚ್ಚಿಸಿದ್ದಾಳೆ. ಈಕೆಯ ಹೆಸರಯ ಕೌಶಲ್ಯ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಯುವತಿ.  ಸತತ 15 ವರ್ಷದಿಂದ ಕಬ್ಬಡಿ ಆಡುತ್ತಿರುವ ಕೌಶಲ್ಯ ಇದೀಗ ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ್ತಿಯಾಗಿ  ಗುರ್ತಿಸಿಕೊಂಡಿದ್ದಾರೆ.ಈಕೆಯ ಈ ಸಾಧನೆಗೆ ರಾಜ್ಯ ಸರ್ಕಾರ 2017 ನೇ ಸಾಲಿನ ರಾಜ್ಯ ಮಟ್ಟದ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಗ್ರಾಮೀಣ ಭಾಗದಿಂದ ಬಂದ ಈ ಕಬ್ಬಡಿ ಕ್ರೀಡಾಪಟು ಇದೀಗ ರಾಷ್ಟ್ರೀಯ  ಕಬ್ಬಡಿ ತಂಡದ ಆಟಗಾರ್ತಿಯಾಗಿ ಈಗಾಗಲೇ ಹಲವಾರುವ ಪ್ರಶಸ್ತಿ  ಹಾಗೂ ಪದಕಗಳನ್ನು ಪಡೆದಿದ್ದಾಳೆ. ಇಷ್ಟೆಲ್ಲಾ ಸಾಧನೆಗೆ ತಮ್ಮೂರಿನ ತರಬೇತಿದಾರರೊಬ್ಬರ ಪ್ರೋತ್ಸಾಹ ಮತ್ತು ಪೋಷಕರ ಸಹಕಾರ ಕಾರಣ ಎನ್ನುತ್ತಾಳೆ ಕೌಶಲ್ಯ.ಈಕೆಯ  ಸಾಮರ್ಥ್ಯ ಗುರುತಿಸಿ ಅನೇಕ ಪ್ರಶಸ್ತಿಗಳೇನೋ ಲಭಿಸಿದೆ. ಆದರೆ. ಈ ಗ್ರಾಮೀಣ ಪ್ರತಿಭೆ  ಮತ್ತಷ್ಟು ಸಾಧನೆ ಮಾಡಲು ಸರ್ಕಾರದ ನೆರವು ಸಿಗುತ್ತಿಲ್ಲ. ಬೇರೆ ಕ್ರೀಡೆಗಳ ರೀತಿ ಕಬ್ಬಡಿಗೆ ಉತ್ತೇಜನ ಸಿಗುತ್ತಿಲ್ಲ. ಆದರಲ್ಲಿಯೂ ಮಹಿಳಾ ಕ್ರೀಡಾಪಟುಗಳಿಗೆ ಸರ್ಕಾರದ ಸರಿಯಾದ ಸಲವತ್ತು ಆಗಲಿ, ಪ್ರೋತ್ಸಾಹ ಆಗಲಿ ಸಿಗುತ್ತಿಲ್ಲ ಎನ್ನುವ ಕೊರಗಿದೆ. . ಸರಿಯಾದ ಪ್ರೋತ್ಸಾಹ ಸಿಕ್ಕರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವ ಭರವಸೆ  ಇದೆ ಎನ್ನುತ್ತಾರೆ ಈ ಗ್ರಾಮೀಣ ಕಬ್ಬಡಿ ಪಟು.

ಇದನ್ನು ಓದಿ: ಕೊರೋನಾ ಹಿನ್ನಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಜಾತ್ರೆ, ರಥೋತ್ಸವ ರದ್ದು: ಭಕ್ತರ ಪ್ರವೇಶ ನಿಷೇಧ

ಕೌಶಲ್ಯ ತಂದೆ ಶಿವಕುಮಾರ್​ ಗೂಡ್ಸ್ ವಾಹನ ಓಡಿಸುವ ಕಾಯಕ ಮಾಡುತ್ತಿದ್ದು, ಮಗಳ ಸಾಧನೆಯ ಹಿಂದಿನ ಗುರುವಾಗಿದ್ದಾರೆ. ಇವರು ಕೂಡ ಓರ್ವ ಕಬ್ಬಡಿ ಪಟುವಾಗಿದ್ದ ಕಾರಣ ತಮ್ಮ  ಮಗಳಿಗೆ  ಚಿಕ್ಕಂದಿನಿಂದಲೇ ಕಬ್ಬಡಿ ಕಲಿಸಿ ಮಗಳಿಗೆ ಪ್ರೋತ್ಸಾಹಿಸಿದ್ದಾರೆ‌. ತಮ್ಮಿಂದ ಸಾಧ್ಯವಾಗದ ಸಾಧನೆಯನ್ನು ಮಗಳ ಮೂಲಕ   ಸಾಧಿಸಿ ಸಂಭ್ರಮಿಸುತ್ತಿದ್ದಾರೆ‌. ಇನ್ನು ಇವರ ತಾಯಿ ಕೂಡ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕೌಶಲ್ಯ ಸಾಧನೆಗೆ ಊರಿನವರು ತಮ್ಮೂರಿನ ಮಗಳಂತೆ ಬೆಂಬಲ ನೀಡುತ್ತಿದ್ದು, ಸ್ಪೂರ್ತಿ ತುಂಬುತ್ತಿದ್ದಾರೆ.  ಮಗಳು ಕೂಡ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ  ಹಾಗೂ   ಜಿಲ್ಲೆಗೆ  ಕೀರ್ತಿ  ತಂದಿರೋದು  ಸಂತಸ ತಂದಿದೆ ಎನ್ನುತ್ತಾರೆ‌.  ಇದರ ಜೊತೆಗೆ ಸರ್ಕಾರವು ಕೂಡ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕೊಡಬೇಕಿದೆ ಅನ್ನುವ ಆಶಯ ವ್ಯಕ್ತಪಡಿಸಿದ್ದಾರೆ‌.

ಸಕ್ಕರೆನಾಡಿನ ಮಗಳಾದ ಕೌಶಲ್ಯಳ ಸಾಧನೆಗೆ ರಾಜ್ಯ ಸರ್ಕಾರ ಈ ಬಾರಿ  ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸದ್ಯ ರಾಷ್ಟ್ರೀಯ ಕಬ್ಬಡಿ ತಂಡದಲ್ಲಿ ಆಲ್ ರೌಂಡರ್ ಆಗಿ ತನ್ನ ಪ್ರತಿಭಾ ಪ್ರದರ್ಶನ  ನೀಡುತ್ತಿದ್ದಾಳೆ. ಈ  ಕೌಶಲ್ಯಗೆ ಮತ್ತಷ್ಟು ಪ್ರೋತ್ಸಾಹ ದೊರೆತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಗ್ರಾಮೀಣ ಕಬ್ಬಡಿ ಪಟು ಮಿಂಚಲಿ ಎನ್ನುವುದು ಎಲ್ಲರ  ಆಶಯ ಕೂಡ‌
Published by: Seema R
First published: November 11, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories