HOME » NEWS » State » MANDYA GOLD FRAUD ACCUSED INVOLVED SEX CD ROCKET CASE SESR RGM

ಸಕ್ಕರೆ ನಾಡಿನ ಚಿನ್ನ ವಂಚನೆ ಪ್ರಕರಣದ ಆರೋಪಿಯ ಹೈಟೆಕ್ ಸೆಕ್ಸ್ ಸಿಡಿ ಕರಾಳ ದಂಧೆ ಬಯಲಿಗೆ

ಅಧಿಕ ಬಡ್ಡಿ ಕೊಡಿಸುವ ಆಸೆ ತೋರಿಸಿ ಕೆಜಿಗಟ್ಟಲೆ ಚಿನ್ನ ವಂಚಿಸಿದ್ದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕರಾಳದಂಧೆಯೊಂದು ಬೆಳಕಿಗೆ ಬಂದಿದೆ

news18-kannada
Updated:October 27, 2020, 5:00 PM IST
ಸಕ್ಕರೆ ನಾಡಿನ ಚಿನ್ನ ವಂಚನೆ ಪ್ರಕರಣದ ಆರೋಪಿಯ ಹೈಟೆಕ್ ಸೆಕ್ಸ್ ಸಿಡಿ ಕರಾಳ ದಂಧೆ ಬಯಲಿಗೆ
ಮಹಿಳೆಯರಿಗೆ ಚಿನ್ನದ ದೋಖಾ ಮಾಡಿದ ಆರೋಪಿ ಮಂಡ್ಯದ ಯುವಕ ಸೋಮಶೇಖರ್
  • Share this:
ಮಂಡ್ಯ (ಅ.27): ಚಿನ್ನಕ್ಕೆ ಅಧಿಕ ಬಡ್ಡಿ ಕೊಡಿಸುವ ಆಸೆ ತೋರಿಸಿ ಖಾಸಗಿ ಬ್ಯಾಂಕ್ ಉದ್ಯೋಗಿಯೋರ್ವ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಕೆಜಿಗಟ್ಟಲೆ ಚಿನ್ನ ವಂಚಿಸಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಜಿಲ್ಲೆಯಲ್ಲಿ ನಡೆಯುತ್ತಿದ್ದ  ಮತ್ತೊಂದು ಕರಾಳದಂಧೆ ಬೆಳಕಿಗೆ ಬಂದಿದೆ. ಈ  ಪ್ರಕರಣದ ಆರೋಪಿಯಾಗಿದ್ದ ಬ್ಯಾಂಕ್  ಉದ್ಯೋಗಿ ಸೋಮಶೇಖರ್​ ವಿಚಾರಣೆ ನಡೆಸಿದಾಗ ಆರೋಪಿಯ ಮೊಬೈಲ್ ನಲ್ಲಿದ್ದ ಸಂಭಾಷಣೆಗೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೋಮಶೇಖರ್​ ಕೇವಲ ಚಿನ್ನ ವಂಚನೆಯಲ್ಲಿ ಮಾತ್ರ ಭಾಗಿಯಾಗಿಲ್ಲ. ಈತ ನಗರದಲ್ಲಿ ಹೈಟೆಕ್​ ಸೆಕ್ಸ್​ ಸಿಡಿ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಈ ಕುರಿತು ಆತನ ಮೊಬೈಲ್​ನಲ್ಲಿದ್ದ ಆಡಿಯೋ ಪ್ರಮುಖ ಸಾಕ್ಷಿ ಒದಗಿಸಿದೆ.

ನಗರ ಸೇರಿದಂತೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಈ ದಂಧೆ ನಡೆಯುತ್ತಿರುವ ಕುರಿತು ಆಡಿಯೋ ಸಾಕ್ಷಿ ನೀಡಿದೆ.  ಚಿನ್ನ‌ ವಂಚನೆ ಪ್ರಕರಣ ಆರೋಪಿ ಸೋಮಶೇಖರ್​​ ಮಹಿಳೆಯೊಬ್ಬರ ಜೊತೆ ಮಾತನಾಡಿರುವ ಆಡಿಯೋ ಲಭ್ಯವಾಗಿದೆ. 18ನಿಮಿಷದ ಈ ಆಡಿಯೋದಲ್ಲಿ ದಂಧೆಯಿಂದ ಕೋಟಿ ಕೋಟಿ ಸಂಪಾದನೆ ಮಾಡುವ ಮಾರ್ಗ ಬಿಚ್ಚಿಟ್ಟಿದ್ದಾರೆ‌. ಅಲ್ಲದೇ ಕೊರೋನಾ ಮುಗಿದ ಬಳಿಕ ಮತ್ತೆ ಈ ದಂಧೆ ಯನ್ನು ಮುಂದುವರೆಸುವ ಮಾಹಿತಿ ಕೂಡ ಇದೆ.

ಇದನ್ನು ಓದಿ: ಚಿನ್ನದ ಮೇಲೆ ಬಡ್ಡಿ; ಮಂಡ್ಯದ ಬ್ಯಾಂಕ್ ಉದ್ಯೋಗಿ ಆಮಿಷಕ್ಕೆ ಕೋಟಿಗಟ್ಟಲೆ ಚಿನ್ನ ಕಳೆದುಕೊಂಡ ನಾರಿಯರು

ಈ ಹೈಟೆಕ್ ಸಿಡಿ ದಂಧೆ  ಪ್ರಕರಣದಲ್ಲಿ ಅನೇಕ ಹೆಂಗಸರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ  ಅನುಮಾನವಿದೆ. ಇವರನ್ನು ಹೆದರಿಸಿ ಬ್ಲಾಕ್ ಮೇಲ್ ಮಾಡಿ ಬಳಸಿಕೊಂಡಿರುವದಾಗಿ ಆರೋಪ ಕೇಳಿ ಬರುತ್ತಿದೆ‌. ಇದರ ಜೊತೆ ಈ ದಂಧೆಯಲ್ಲಿ ಬೃಹತ್ ಜಾಲವಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರು ಸೇರಿದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸ್ಥಳೀಯರು ಪತ್ರ ಬರೆದಿದ್ದಾರೆ.

ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡ ಈ ಪ್ರಕರಣ ನಡೆದಿರುವುದು ಸತ್ಯ ಎಂದಿದ್ದು ಇದು ಗಮನಕ್ಕೆ  ಬಂದಿದೆ. ಸದ್ಯ ಈಗ ಬಂಧಿತ ಆರೋಪಿ ಇದರಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Published by: Seema R
First published: October 27, 2020, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories