ಮಂಡ್ಯ: ಕೆ.ಆರ್. ಪೇಟೆ (KR Pete) ಮತದಾರರಿಗೆ (Voters) ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿರುವ ಬಗ್ಗೆ ಕೃತಜ್ಞತೆ ಸಭೆಯಲ್ಲಿ ಮಾಜಿ ಸಚಿವ ನಾರಾಯಣ ಗೌಡರಿಗೆ (Narayana Gowda) ಹೇಳಿಕೊಂಡಿದ್ದಾರೆ. ಹಣ ಹಂಚಿಕೆ ಮಾಡದೆ ಹಣ ಇಟ್ಟು ಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ ಅಂತ ಮನವಿ (Request) ಮಾಡಿದ್ದಾರೆ. ಕೆ.ಆರ್. ಪೇಟೆ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಹಿತಿ (Information) ಪಡೆದಿದ್ದೇನೆ, ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.
ಹೌದು, ಮಾಜಿ ಸಚಿವರಿಗೆ ಚುನಾವಣೆಯಲ್ಲಿ ಉಂಡೆ ನಾಮ ಹಾಕಿದ್ದಾರಾ ಎಂಬ ಪ್ರಶ್ನೆ ಮಂಡ್ಯ ರಾಜಕಾರಣದಲ್ಲಿ ಕೇಳಿ ಬಂದಿದೆ. ಕೋಟಿ ಕೋಟಿ ಖರ್ಚು ಮಾಡಿ ಮಾಜಿ ಸಚಿವರು ಮೋಸ ಹೋದರಾ ಎಂಬ ಪ್ರಶ್ನೆ ಎದುರಾಗಿದೆ.
ಕೆಆರ್ ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಸಿ ನಾರಾಯಣಗೌಡ ಕೃತಜ್ಞತ ಸಭೆಯನ್ನು ಏರ್ಪಡಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕೆಲವು ಕಡೆ ಕೊಟ್ಟ ಹಣವನ್ನು ಮತದಾರರಿಗೆ ನೀಡಿದೆ ಇಟ್ಟುಕೊಂಡಿದ್ದಾರೆ. ಆದ್ದರಿಂದ ಹಣವನ್ನು ವಾಪಸ್ ಕೊಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆದರೆ ನನಗೆ ಆ ಹಣ ಬೇಡ.
ಬಿಜೆಪಿ ಪಕ್ಷದ ಹೆಸರಿನಲ್ಲೇ ಒಂದು ಟ್ರಸ್ಟ್ ಮಾಡೋಣಾ, ಆ ಹಣವನ್ನು ಟ್ರಸ್ಟ್ ಮೂಲಕ ಜನರ ಸೇವೆ ನೀಡೋಣಾ. ಅಂದು ಚರ್ಚೆ ಮಾಡುವಾಗ ಅಷ್ಟು ಹಣ ಖರ್ಚು ಮಾಡಬೇಕು ಅಂತ ತೀರ್ಮಾನ ಆಯ್ತು. ಸಾಲನೋ ಏನೋ ಮಾಡಿ ಹಣ ತಂದಿದ್ದೆ. ನನಗೆ ಸಾಲ ತೀರಿಸುವ ಶಕ್ತಿ ಇದೆ, ಭಗವಂತನ ಆಶೀರ್ವಾದ ನನಗೆ ಇದೆ ಎಂದು ಹಣ ಪಡೆದು ಮೋಸ ಮಾಡಿದ ಮುಖಂಡರಿಗೆ ನಾರಾಯಣಗೌಡ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ