ಮಂಡ್ಯದಲ್ಲಿ 8ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ; ಇಂದು ಕೆಆರ್​ಎಸ್​ ಜಲಾಶಯಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ

ರೈತರು ಕೆಆರ್​ಎಸ್​ ಜಲಾಶಯಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಜಲಾಶಯದ ಮುಖ್ಯದ್ವಾರ ಹಾಗೂ ಸುತ್ತಲೂ ಬ್ಯಾರಿಕೇಡ್​ ಅಳವಡಿಸಿದ್ಧಾರೆ.

Latha CG | news18
Updated:June 28, 2019, 11:24 AM IST
ಮಂಡ್ಯದಲ್ಲಿ 8ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ; ಇಂದು ಕೆಆರ್​ಎಸ್​ ಜಲಾಶಯಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ
ರೈತರ ಪ್ರತಿಭಟನೆ
  • News18
  • Last Updated: June 28, 2019, 11:24 AM IST
  • Share this:
 ಮಂಡ್ಯ,(ಜೂ.28): ಸಕ್ಕರೆ ನಾಡಿನಲ್ಲಿ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ 8 ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯ ಅನ್ನದಾತರ ಬೆಂಬಲಕ್ಕೆ ಮೈಸೂರು ಭಾಗದ ರೈತರು ಕೂಡ ನಿಂತಿದ್ದು, ಪ್ರತಿಭಟನೆ ಮತ್ತಷ್ಟು ಶಕ್ತಿ ಪಡೆದುಕೊಂಡಿದೆ. ರೈತರೆಲ್ಲರೂ ಒಗ್ಗೂಡಿ ಇಂದು ಕೆಆರ್​ಎಸ್​ ಡ್ಯಾಂಗೆ ಮುತ್ತಿಗೆ ಹಾಕುವ ಸಂಭವವಿದ್ದು, ಜಲಾಶಯದ ಸುತ್ತಲೂ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ. 

ರೈತ ನಾಯಕ ದರ್ಶನ್​ ಪುಟ್ಟಣ್ಣಯ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಗೆ ಶಕ್ತಿಯಾಗಿ ನಿಂತಿದ್ದಾರೆ. ಬೃಹತ್​ ಬೈಕ್​ ಜಾಥಾ ಪ್ರಾರಂಭವಾಗಲಿದ್ದು, ಮಂಡ್ಯದ ಕಾವೇರಿ ಭವನದ ಬಳಿ ರೈತರು ಧರಣಿ ಕುಳಿತಿದ್ಧಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಮೈಸೂರಿನ ವರುಣಾ ನಾಲಾ ವ್ಯಾಪ್ತಿಯ ರೈತರು ಹಾಗೂ ಮಂಡ್ಯ ರೈತರು ಕೆಆರ್​ಎಸ್​ ಜಲಾಶಯ ತಲುಪಲಿದ್ದಾರೆ. ಕೆಆರ್​ಎಸ್​ ಜಲಾಶಯದ ಮುಖ್ಯದ್ವಾರದ ಬಳಿ ರೈತರು ಧರಣಿ ನಡೆಸಲಿದ್ಧಾರೆ. ಈ ಪ್ರತಿಭಟನೆ ವೇಳೆ ಮೈಸೂರು ಭಾಗದ ರೈತರು ವರುಣಾ ನಾಲೆಗೆ ನೀರು ಬಿಡುವಂತೆ ಆಗ್ರಹಿಸಲಿದ್ದಾರೆ.

ಇದನ್ನೂ ಓದಿ: ಗ್ರಾಮವಾಸ್ತವ್ಯ ಮುಗಿಯುತ್ತಿದ್ದಂತೆ ಅಮೆರಿಕ ಪ್ರವಾಸಕ್ಕೆ ಸಿದ್ಧರಾದ ಸಿಎಂ ಎಚ್​ಡಿಕೆ

ರೈತರು ಕೆಆರ್​ಎಸ್​ ಜಲಾಶಯಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಜಲಾಶಯದ ಮುಖ್ಯದ್ವಾರ ಹಾಗೂ ಸುತ್ತಲೂ ಬ್ಯಾರಿಕೇಡ್​ ಅಳವಡಿಸಿದ್ಧಾರೆ. ಮುತ್ತಿಗೆಗೂ ಮುನ್ನವೇ ರೈತರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರೈತರು ಜಲಾಶಯದೊಳಗೆ ಪ್ರವೇಶಿಸದಂತೆ ಎಲ್ಲಾ ದ್ವಾರಗಳಲ್ಲೂ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರೈತರ ಬಂಧನಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ಲಿಸಿಕೊಂಡು  ಪೊಲೀಸರು ಸಿದ್ದವಾಗಿದ್ದಾರೆ. ನಾಲ್ಕು ಬಸ್, ನಾಲ್ಕು ಡಿ.ಆರ್ ವಾಹನಗಳು ರೈತರ‌ ಬಂಧನಕ್ಕೆ ಸಿದ್ದವಾಗಿವೆ. ಜಲಾಶಯದ ಬಳಿ ಓರ್ವ ರೈತರು ಸುಳಿಯದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ.

First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...