ಎಲೆಕ್ಷನ್​ ಟೈಮಲ್ಲಿ ಬೇಡ ಅಂದ್ರೂ ನೀರು ಬಿಡ್ತಿದ್ರಲ್ಲ, ಈಗ ಬಿಡೋಕೇನು?; ಸಚಿವ ಡಿಕೆಶಿಗೆ ರೈತರಿಂದ ತರಾಟೆ

ಕಾವೇರಿ ನೀರಿಗಾಗಿ ರೈತರ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲು ರೈತರು ಯೋಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಕೂಡ ರೈತರನ್ನು ಭೇಟಿಯಾಗಿ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

Sushma Chakre | news18
Updated:June 24, 2019, 3:39 PM IST
ಎಲೆಕ್ಷನ್​ ಟೈಮಲ್ಲಿ ಬೇಡ ಅಂದ್ರೂ ನೀರು ಬಿಡ್ತಿದ್ರಲ್ಲ, ಈಗ ಬಿಡೋಕೇನು?; ಸಚಿವ ಡಿಕೆಶಿಗೆ ರೈತರಿಂದ ತರಾಟೆ
ಸಚಿವ ಡಿಕೆ ಶಿವಕುಮಾರ್
  • News18
  • Last Updated: June 24, 2019, 3:39 PM IST
  • Share this:
ಮಂಡ್ಯ (ಜೂ. 24): ಕಾವೇರಿ ನದಿಯ ನೀರನ್ನು ನಾಲೆಗೆ ಬಿಡುವಂತೆ ಒತ್ತಾಯಿಸಿ ಮಂಡ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರ ಕಾರನ್ನು ಅಡ್ಡಗಟ್ಟಿದ ರೈತ ಸಂಘಟನೆಗಳು ತರಾಟೆ ತೆಗೆದುಕೊಂಡಿದ್ದಾರೆ.

ಚುನಾವಣೆ ವೇಳೆ ಕೇಳದಿದ್ದರೂ ನೀರು ಹರಿಸಿದ್ದಿರಿ. ಆಗ ಪ್ರಾಧಿಕಾರ ಅಡ್ಡ ಬರಲಿಲ್ವಾ? ಈಗ ಸುಮ್ಮನೆ ಪ್ರಾಧಿಕಾರದತ್ತ ಬೆರಳು ತೋರಿಸುತ್ತಿದ್ದೀರ ಎಂದು ರೈತರು ಡಿ.ಕೆ. ಶಿವಕುಮಾರ್​ ವಿರುದ್ಧ ಹರಿಹಾಯ್ದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಚುನಾವಣೆಯಲ್ಲಿ ನೀರು ಬಿಟ್ಟ ವಿಚಾರ ನನಗೆ ಗೊತ್ತಿಲ್ಲ. ಆಗ ನಾವು ನೀರು ಬಿಡಲು ಹೇಳಿರಲಿಲ್ಲ. ನಿಮ್ಮ ಜಿಲ್ಲಾಡಳಿತ ಬಿಟ್ಟಿರಬೇಕು, ಅವರ ಬಳಿ ನಂತರ ಈ ಬಗ್ಗೆ ಮಾತಾಡುತ್ತೇನೆ. ಈಗ ನೀರು ಬಿಡುವ ವಿಚಾರವಾಗಿ ಮಾತನಾಡುತ್ತೇನೆ ಎಂದು ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಡಿದ್ದಾರೆ.

ಇಂದು ಸಿಎಂ ನೇತೃತ್ವದಲ್ಲಿ ಬಸ್ ಟಿಕೆಟ್​​ ದರ ಪರಿಷ್ಕರಣೆ ಕುರಿತಾದ ಮಹತ್ವದ ಸಭೆ

ರೈತರ ಪ್ರತಿಭಟನೆ ಜೋರಾಗಿದ್ದು ತಿಳಿಯುತ್ತಿದ್ದಂತೆ ಮನವೊಲಿಕೆಗೆ ಮುಂದಾಗಿರುವ  ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಕೂಡ ಆದಷ್ಟು ಶೀಘ್ರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ನೀರಿಗಾಗಿ ರಸ್ತೆಗಿಳಿದಿರುವ ರೈತರು ಕಳೆದ 4 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಮಂಡ್ಯದ ಕಾವೇರಿ ಭವನದ ಎದುರು ದರ್ಶನ್​ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ಆದಷ್ಟು ಬೇಗ ನೀರು ಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸಲು ರೈತಸಂಘಗಳು ನಿರ್ಧರಿಸಿವೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತಸಂಘಗಳು ನಿರ್ಧರಿಸಿವೆ.

ವರದಿ: ರಾಘವೇಂದ್ರ ಗಂಜಾಂ

First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ