ನಾಳೆಯಿಂದ ಸಕ್ಕರೆನಾಡಲ್ಲಿ ರೈತರ ಕಾವೇರಿ ಹೋರಾಟ; ಹೆದ್ದಾರಿ ತಡೆಯಲು ನಿರ್ಧಾರ

ಸರ್ಕಾರ ನಾಲೆಗೆ ನೀರು ಬಿಡುವವರೆಗೂ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೇ ಸರ್ಕಾರವೇ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ಮಾಡುವ ಕಾರ್ಯತಂತ್ರ ವನ್ನು ರೂಪಿಸಿಲಾಗಿದೆ.

Latha CG | news18
Updated:June 30, 2019, 4:54 PM IST
ನಾಳೆಯಿಂದ ಸಕ್ಕರೆನಾಡಲ್ಲಿ ರೈತರ ಕಾವೇರಿ ಹೋರಾಟ; ಹೆದ್ದಾರಿ ತಡೆಯಲು ನಿರ್ಧಾರ
ಸಾಂದರ್ಭಿಕ ಚಿತ್ರ
  • News18
  • Last Updated: June 30, 2019, 4:54 PM IST
  • Share this:
ಮಂಡ್ಯ,(ಜೂ.30): ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಕಾವೇರಿ ನೀರಿಗಾಗಿ ಹೋರಾಟ ಶುರುವಾಗಲಿದೆ. ಆದರೆ ಈ ಬಾರಿ ತಮಿಳುನಾಡು ಬದಲು ರಾಜ್ಯ ಸರ್ಕಾರದ ವಿರುದ್ದವೇ ಮಂಡ್ಯದ ರೈತರು ಕಾವೇರಿ ಹೋರಾಟ ಮಾಡಲು ಸಿದ್ದತೆ ನಡೆಸಿದ್ದಾರೆ. ಮಂಡ್ಯದಲ್ಲಿ ರೈತರು ಬೆಳೆದಿರುವ ಬೆಳೆಗೆ ನೀರು ಕೊಡದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿವಿಧ ರೀತಿ ಪ್ರತಿಭಟನೆಗಳ ಮೂಲಕ ನಾಳೆಯಿಂದ ಜಿಲ್ಲೆಯಲ್ಲಿ ರೈತರ ಕಾವೇರಿ ಹೋರಾಟಕ್ಕೆ ಕರೆ ನೀಡಿದ್ದಾರೆ.

ಮಂಡ್ಯದಲ್ಲಿ ಬೆಳೆದು ನಿಂತ ಬೆಳೆಗೆ ನೀರು ಕೊಡುವಂತೆ ಆಗ್ರಹಿಸಿ ಕಳೆದ ವಾರ 8 ದಿನಗಳ ಕಾಲ ಜಿಲ್ಲೆಯ ರೈತರು ಕಾವೇರಿ ನೀರಾವರಿ ನಿಗಮದ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದರು. ಅಲ್ಲದೇ ಹೋರಾಟದ ಕಡೆಯ ದಿನ ಕೆ.ಆರ್.ಎಸ್ ಗೆ ನೂರಾರು ರೈತರು ಮುತ್ತಿಗೆ ಹಾಕಿ ಸರ್ಕಾರಕ್ಕೆ ನೀರು ಬಿಡಲು ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ರಾಜ್ಯ ಸರ್ಕಾರ ನೀರು ಬಿಡಲು ಸಾಧ್ಯವಿಲ್ಲ. ಎಲ್ಲಾ ಕೇಂದ್ರದ ಕೈಯಲ್ಲಿದೆ ಅಂತಾ ಕೇಂದ್ರದ ಮೇಲಾಕಿ ಕೈ ತೊಳೆದುಕೊಂಡಿತ್ತು.

ಇದರಿಂದ ಕೆರಳಿರುವ ಮಂಡ್ಯದ ರೈತರು ಮತ್ತೆ ರಾಜ್ಯ ಸರ್ಕಾರಕ್ಕೆ ಮತ್ತೆ ಬಿಸಿ ಮುಟ್ಟಿಸಲು ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿ ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ರೈತ ಮುಖಂಡರೊಂದಿಗೆ ಸಭೆ ನಡೆಸಿ ರೈತರ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ನೀರಿಗಾಗಿ ಕಾವೇರಿ ಪ್ರಾಧಿಕಾರಕ್ಕೆ ಮೇಲ್ಮನವಿಯ ಕಾನೂನು ಹೋರಾಟ, ಮತ್ತು ರಾಜ್ಯಪಾಲರ ಬಳಿಗೆ ರೈತ ನಿಯೋಗದ ಮೂಲಕ ಮನವಿ ಕೊಡುವ ಕೆಲವೊಂದು ನಿರ್ಣಯಗೊಂಡಿದ್ದಾರೆ.

ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟಕ್ಕೆ ಕಂಗಾಲಾದ ಬಾಣಂತಿಯರು; ನ್ಯೂಸ್​ 18 ಕನ್ನಡ ವರದಿ ಬಳಿಕ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ

ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ರೈತರ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಪ್ರಮುಖರು ಮತ್ತು ಸಂಘಟನೆಯ ಕಾರ್ಯಕರ್ತರು ಹೋರಾಟ ತೀವ್ರಗೊಳಿಸುವ ಒಮ್ಮತ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾಳೆಯಿಂದ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದಾರೆ. ಇಡೀ ವಾರಪೂರ್ತಿ ವಿವಿಧ ಪ್ರತಿಭಟನೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ನಾಳೆಯಿಂದ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಹೆದ್ದಾರಿ ಬಂದ್ ಮಾಡುವುದು ಸೇರಿದಂತೆ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆಗಳ ಮೂಲಕ ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲು ಕಾರ್ಯಕ್ರಮ ರೂಪಿಸಿದ್ದು, ಸರ್ಕಾರ ನಾಲೆಗೆ ನೀರು ಬಿಡುವವರೆಗೂ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೇ ಸರ್ಕಾರವೇ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ಮಾಡುವ ಕಾರ್ಯತಂತ್ರ ವನ್ನು ರೂಪಿಸಿಲಾಗಿದೆ.

ಒಟ್ಟಾರೆ ಇದುವರೆಗೂ ಕಾವೇರಿ ವಿಚಾರದಲ್ಲಿ ಇದುವರೆಗೂ ತಮಿಳುನಾಡು ವಿರುದ್ದ ಪ್ರತಿಭಟನೆ ಮಾಡ್ತಿದ್ದ ಮಂಡ್ಯದ ರೈತರು, ಈ ಬಾರಿ ತಮ್ಮ ಬೆಳೆ ರಕ್ಷಣೆಗಾಗಿ ರಾಜ್ಯ ಸರ್ಕಾರದ ವಿರುದ್ದ ಕಾವೇರಿ ಹೋರಾಟ ಮಾಡಲು ಮುಂದಾಗಿದ್ದಾರೆ. ಮಂಡ್ಯ ರೈತರ ಈ ಕಾವೇರಿ ಪ್ರತಿಭಟನೆಯ ಕಾವು ಸರ್ಕಾರಕ್ಕೆ ಹೇಗೆ ಬಿಸಿ ಮುಟ್ಟಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Loading...

ವರದಿ: ರಾಘವೇಂದ್ರ ಗಂಜಾಮ್  
First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...