HOME » NEWS » State » MANDYA CRIME NEWS POLICE ARREST 5 ACCUSED WHO DOING CHAIN SNATCHING RGM LG

Mandya Crime: ಸರಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ

ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸರು 5 ಜನರ ಸರಗಳ್ಳರನ್ನು‌ ಬಂಧಿಸಿ ಎಡೆಮುರಿ ಕಟ್ಟಿದ್ದಾರೆ. ಈ ಮೂಲಕ ಜಿಲ್ಲೆಯ ವಿವಿಧೆಡೆಯಲ್ಲಿ ನಡೆದಿದ್ದ 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.

news18-kannada
Updated:March 22, 2021, 3:36 PM IST
Mandya Crime: ಸರಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ.
  • Share this:
ಮಂಡ್ಯ(ಮಾ.22): ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಸರಗಳ್ಳತನ‌ ಪ್ರಕರಣಗಳು ಹೆಚ್ಚಾಗಿತ್ತು. ಮಹಿಳೆಯರು ಮತ್ತು ವೃದ್ದೆಯರನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರ ತಂಡವೊಂದು ಜಿಲ್ಲೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ, ಇಲ್ಲವೇ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುವ ನೆಪದಲ್ಲಿ, ಇಲ್ಲವೆ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ವೇಳೆ ಹಿಂದೆಯಿಂದ ಬೈಕ್ ನಲ್ಲಿ ಬಂದು ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗುತ್ತಿದ್ದ ಪ್ರಕರಣಗಳು‌ ಮೇಲಿಂದ ಮೇಲೆ ನಡೆಯುತ್ತಿತ್ತು. ಇದು ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಈ ಸರಗಳ್ಳರ ತಂಡ ಒಂದಲ್ಲ ಒಂದು ಕಡೆ ತನ್ನ ಕೈಚಳಕ ತೋರುತ್ತಿದ್ದರು. ಹೀಗಾಗಿ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮನೆ ಮಾಡಿತ್ತು. ಕಡೆಗೂ ಜಿಲ್ಲೆಯ ಪೊಲೀಸ್ ತಂಡ ಇಂತಹ ಖತರ್ನಾಕ್​ ಕಳ್ಳರನ್ನು ತಮ್ಮ ಚಾಣಾಕ್ಷತನದಿಂದ ಸೆರೆ ಹಿಡಿದಿದ್ದಾರೆ. ಒಟ್ಟು 5 ಜನ ಕಳ್ಳರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,ಈ ಮೂಲಕ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವ ಹಾಗೆ ಮಾಡಿದ್ದಾರೆ.

ಹೌದು!  ಮಂಡ್ಯ ಜಿಲ್ಲೆಯಲ್ಲಿ ಕಳೆದ ಆರೇಳು ತಿಂಗಳಿನಿಂದ ಮೇಲಿಂದ ಮೇಲೆ ಸರಗಳ್ಳತನ ಪ್ರಕರಣಗಳು ನಡೆಯುತ್ತಿತ್ತು. ಇದು ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿತ್ತು. ಹೆಂಗಸರು‌ ಮತ್ತು ವೃದ್ದೆಯರು ಒಂಟಿಯಾಗಿ ಓಡಾಡಲು ಭಯಪಡುವಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಪೊಲೀಸರು ಎಷ್ಟೇ ಪ್ರ ಯತ್ನ ಪಟ್ಟರು ಸರಗಳ್ಳರ ತಂಡ ತಮ್ಮ ಚಾಣಾಕ್ಷತನದಿಂದ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ತಮ್ಮ ಕೈಚಳಕ ಪ್ರದರ್ಶನ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ರು. ಇದನ್ನ ಸವಾಲಾಗಿ ಸ್ಬೀಕರಿಸಿದ ಜಿಲ್ಲೆಯ ಪೊಲೀಸರುತಮ್ಮದೇ ಆದ ಕಾರ್ಯಾಚರಣೆ ಮೂಲಕ  ಈ ಚಾಣಾ ಕ್ಷ ಸರಗಳ್ಳರ ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Mission Paani: ನಾವು ಕುಡಿಯುವ ನೀರು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸರು 5 ಜನರ ಸರಗಳ್ಳರನ್ನು‌ ಬಂಧಿಸಿ ಎಡೆಮುರಿ ಕಟ್ಟಿದ್ದಾರೆ. ಈ ಮೂಲಕ ಜಿಲ್ಲೆಯ ವಿವಿಧೆಡೆಯಲ್ಲಿ ನಡೆದಿದ್ದ 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.

ಇನ್ನು ಬಂಧಿತ ಆರೋಪಿಗಳು ಮದ್ದೂರು ಪಟ್ಟಣದವರಾಗಿದ್ದು ಎಲ್ಲರೂ ಒಂದೇ ಕೋಮಿನವರಾಗಿರೋದು ವಿಶೇಷ. ಮದ್ದೂರು‌ ಪಟ್ಟಣದ ನಿವಾಸಿಗಳಾದ ರೂಹೀದ್ ಪಾಷ, ಅಶುಪಾಷ, ಇಮ್ರಾನ್ ಖಾನ್, ಮತೀನ್ವುಲ್ಲಾ ಖಾನ್, ನೂರ್ ಅಹಮದ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರು ಕಳುವು ಮಾಡಿದ್ದ ಸರಗಳನ್ನು ಮಾರಾಟ ಮಾಡಿಬಂದಿದ್ದ 3.55 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಸರಗಳ್ಳರು  ಜಿಲ್ಲೆಯ ವಿವಿಧೆಡೆ ಸುಮಾರು‌15 ಕ್ಕೂ ಹೆಚ್ಚು  ಪ್ರಕರಣಗಳಲ್ಲಿ ಸುಮಾರು 250 ಗ್ರಾಂ ನ  ಚಿನ್ನದ ಸರಗಳನ್ನು ಕದ್ದು ಮಾರಾಟ ಮಾಡಿದ್ದಾರೆ. ವಿಚಾರಣೆ ವೇಳೆ ಜಿಲ್ಲೆಯ ಹಲವಡೆ ನಡೆದ ಸರಗಳ್ಳತನ ಪ್ರಕ ರಣದಲ್ಲಿ ಭಾಗಿಯಾಗಿರೋ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ  ಕೃತ್ಯಕ್ಕೆ ಬಳಸಿದ್ದ 2 ಬೈಕ್  ಸೇರಿ ಒಟ್ಟು  13 ಲಕ್ಷದ ಮೌಲ್ಯದ ಪದಾರ್ಥಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಸರಗಳ್ಳತನ‌ ನಡೆಸಿ ಜನರಲ್ಲಿ ಆತಂಕ ಮೂಡಿಸಿದ್ದ ಸರಗಳ್ಳರನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿರೋದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸಿದೆ. ಜನರಲ್ಲಿ‌ ಆತಂಕ ಮೂಡಿಸಿದ್ದ‌ ಸರಗಳ್ಳರನ್ನು ಬಂಧಿಸಿದ ಕೆ.ಎಂ. ದೊಡ್ಡಿ ಪೊಲೀಸರ ಕಾರ್ಯ ಕ್ಕೆ ಮಂಡ್ಯ ಜಿಲ್ಲೆಯ  S.P ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದಏ  ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡ ಕ್ಕೆ ನಗದು ಬಹುಮಾನ  ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Published by: Latha CG
First published: March 22, 2021, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories