HOME » NEWS » State » MANDYA CRIME NEWS LAWYER MURDER AT NAVILE VILLAGE IN MANDYA LG

ಮಂಡ್ಯದಲ್ಲಿ ವಕೀಲನ ಬರ್ಬರ ಹತ್ಯೆ; ಶವವನ್ನು ನೀರಿನಲ್ಲಿ ಮುಳುಗಿಸಿ ಚಪ್ಪಡಿ ಹೇರಿದ್ದ ದುಷ್ಕರ್ಮಿಗಳು

ಸಂಜೆ6 ಗಂಟೆ ಸಮಯದಲ್ಲಿ ಸ್ಥಳೀಯರೊಬ್ಬರು ನದಿಯಲ್ಲಿ ಯಾವುದೋ ಶವ ಇರುವ ಬಗ್ಗೆ ಮಾಹಿತಿ ನೀಡಿದ್ರಿಂದ ಸ್ಥಳಕ್ಕೆ ಹೋಗಿ ನೋಡಿದಾಗ ವಕೀಲನ ರವೀಂದ್ರ ಶವ ಬೆತ್ತಲೆಯಾಗಿದ್ದು, ಶವದ ಮೇಲೆ ಕಲ್ಲು ಚಪ್ಪಡಿ ಇಟ್ಟು ಶವ ಮುಳುಗಿಸಿರುವುದು ಕಂಡು ಬಂದಿದೆ.

news18-kannada
Updated:January 3, 2021, 2:40 PM IST
ಮಂಡ್ಯದಲ್ಲಿ ವಕೀಲನ ಬರ್ಬರ ಹತ್ಯೆ; ಶವವನ್ನು ನೀರಿನಲ್ಲಿ ಮುಳುಗಿಸಿ ಚಪ್ಪಡಿ ಹೇರಿದ್ದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ(ಜ.03): ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಕೀಲನೋರ್ವನ ಬರ್ಬರ ಹತ್ಯೆ ನಡೆದಿದೆ. ದುಷ್ಕರ್ಮಿಗಳು ವಕೀಲನನ್ನು ಕೊಲೆಗೈದು ಶವವನ್ನು ಶಿಂಷಾ ನದಿಯಲ್ಲಿ ಮುಳುಗಿಸಿಟ್ಟು ಶವದ ಮೇಲೆ ಚಪ್ಪಡಿ ಹೇರಿ‌ ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಕಂಡು ಗ್ರಾಮದ ಜನರು ಬೆಚ್ಚಿ ಬಿಚ್ಚಿದ್ದಾರೆ. ಮೃತ ವಕೀಲನ‌ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಗ್ರಾಮದಲ್ಲಿ ಬಿಗುವಿನ‌ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಪೊಲೀಸ್ ಭದ್ರತೆ ಕೂಡ ಹಾಕಲಾಗಿದೆ.

ಹೌದು! ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ  ರಾತ್ರಿ ವಕೀಲನೋರ್ವನನ್ನು ದುಷ್ಕ ರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಜಮೀನಿನ ಕೆಲಸಕ್ಕೆಂದು ನಿನ್ನೆ ಬೆಳಿಗ್ಗೆ  ಜಮೀನಿನ ಬಳಿ ಹೋಗಿದ್ದ ವಕೀಲ ರವೀಂದ್ರ(45)ರ ಶವ ರಾತ್ರಿ ಶಿಂಷಾ ನದಿಯ ನೀರಿನಲ್ಲಿ ಪತ್ತೆಯಾಗಿದೆ. ಶಿಂಷಾ ನದಿಯ ಪಕ್ಕದಲ್ಲಿ  ಇದ್ದ ಜಮೀನಿನಲ್ಲಿ ದುಷ್ಕರ್ಮಿಗಳು ವಕೀಲನ ತಲೆಗೆ ಹೊಡೆದು ಹತ್ಯೆ ಮಾಡಿ ಬಳಿಕ ಶವವನ್ನು ಶಿಂಷಾ ನದಿಯಲ್ಲಿ ಮುಳುಗಿಸಿ ಶವದ ಮೇಲೆ ಭಾರೀ ಗಾತ್ರದ ಕಲ್ಲು ಚಪ್ಪಡಿ ಹೇರಿ ಪರಾರಿಯಾಗಿದ್ದಾರೆ.

ಜಮೀನಿಗೆ ಹೋಗಿ ದ್ದ ವಕೀಲ ರವೀಂದ್ರ  ತಿಂಡಿಗೆ ಊಟಕ್ಕೆ ಮನೆಗೆ ಬರದೆ ಇದ್ದಾಗ ಆತಂಕಗೊಂಡು ಕುಟುಂಬದವರು ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಗಿತ್ತು. ಇದ್ರಿಂದ ಆತಂಕಗೊಂಡ ಕುಟುಂಬದವರು ಜಮೀನಿನ ಬಳಿ ರವೀಂದ್ರಗಾಗಿ  ಹುಡುಕಾಟ  ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಅಲ್ಲದೇ ವಕೀಲ ರವೀಂದ್ರನ ಬೈಕ್ ಮಾತ್ರ ಜಮೀನಿನ ಬಳಿ  ಬಿದ್ದಿತ್ತು. ಇದರಿಂದ ಅನುಮಾನ ಮತ್ತು ಆತಂಕದಿಂದ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಸಂಜೆ6 ಗಂಟೆ ಸಮಯದಲ್ಲಿ ಸ್ಥಳೀಯರೊಬ್ಬರು ನದಿಯಲ್ಲಿ ಯಾವುದೋ ಶವ ಇರುವ ಬಗ್ಗೆ ಮಾಹಿತಿ ನೀಡಿದ್ರಿಂದ ಸ್ಥಳಕ್ಕೆ ಹೋಗಿ ನೋಡಿದಾಗ ವಕೀಲನ ರವೀಂದ್ರ ಶವ ಬೆತ್ತಲೆಯಾಗಿದ್ದು, ಶವದ ಮೇಲೆ ಕಲ್ಲು ಚಪ್ಪಡಿ ಇಟ್ಟು ಶವ ಮುಳುಗಿಸಿರುವುದು ಕಂಡು ಬಂದಿದೆ.

ಮನಿವಾದ ಅನುಸರಿಸುತ್ತಿರುವ ಬಿಜೆಪಿಗರೆಲ್ಲರೂ ಡೋಂಗಿಗಳೇ; ರಾಮಲಿಂಗಾ ರೆಡ್ಡಿ ವಾಗ್ದಾಳಿ

ಇನ್ನು  ನದಿಯಲ್ಲಿ ಶವ ಇರೋ ಬಗ್ಗೆ ಮಾಹಿತಿ ಪಡೆದ ಕೆಸ್ತೂರು ಪೊಲೀಸರು  ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ತಡರಾತ್ರಿಯೇ ನದಿಯಿಂದ ಹೊರ ತೆಗೆದಿದ್ದಾರೆ‌. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿದ್ದಾರೆ.  ಮೃತ ವಕೀಲನ‌ ಕೊಲೆಯ ಹಿಂದೆ ಮರಳು ಮಾಫಿಯಾದವರ ಕೈವಾಡವಿರೋ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ.

ತಮ್ಮ ಜಮೀನಿನ‌ ಬಳಿಯ ಶಿಂಷಾ ನದಿಯಲ್ಲಿ ಕೆಲವರು ಅಕ್ರಮವಾಗಿ ಮರಳುಗಾರಿಕೆ ನಡೆಸ್ತಿದ್ದು ಇದರ ಬಗ್ಗೆ ಮೃತ ರವೀಂದ್ರ ಆಕ್ಷೇಪ ವ್ಯಕ್ತಪಡಿಸಿ ಮರಳು ದಂಧೆಯವರ ವಿರೋಧ ಕೂಡ ಕಟ್ಟಿಕೊಂಡಿದ್ರು ಎಂದು ಹೇಳಲಾಗ್ತಿದೆ. ಅಲ್ಲದೇ ಈ ಹಿಂದೆ ಗ್ರಾಮದಲ್ಲಿ ಮಹಿಳೆಯೋರ್ವರ ಕೊಲೆಯ ವಿಚಾರವಾಗಿ ಪೊಲೀಸರಿಗೆ ದೂರು ನೀಡಿ ಊರಿನವರ ವಿರೋಧ ಕೂಡ ಕಟ್ಟಿಕೊಂಡಿದ್ದು ಈ ಬಗ್ಗೆ ಕೂಡ ಇವರ ವಿರುದ್ದ ಪ್ರಕರಣ ದಾಖಲಾಗಿತ್ತು.ಇತ್ತೀಚೆಗೆ ಈ ಪ್ರಕರಣದಲ್ಲಿ ರವೀಂದ್ರ ಖುಲಾಸೆಯಾಗಿದ್ದರು. ಅಲ್ಲದೇ ವಕೀಲರಾಗಿ ಸಾಕಷ್ಟು ದಲಿತಪರ ಹೋರಾಟಗಳಲ್ಲಿ ಭಾಗಿಯಾಗಿದ್ದು  ಈ ಹಿನ್ನೆಲೆಯಲ್ಲಿ ವಕೀಲ ರವೀಂದ್ರ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ.

ವಕೀಲನ ಕೊಲೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್  ಭದ್ರತೆ ಹಾಕಿ ಒಂದು ಪೊಲೀಸ್ ತುಕಡಿಯನ್ನು ಬಂದೋಬಸ್ತ್ ಮಾಡಲಾಗಿದೆ.
Youtube Video

ಒಟ್ಟಾರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ. ವಕೀಲನ ಕೊಲೆಯ ಹಿಂದೆ  ಹಲವು ಕಾರಣಗಳಿರೋ ಬಗ್ಗೆ ಮಾಹಿತಿ ಪಡೆದಿರೋ ಪೊಲೀಸರು ಇದೀಗ ತನಿಖೆ‌ ಆರಂಭಿಸಿದ್ದಾರೆ. ಶೀಘ್ರವಾಗಿ ಪ್ರಕರಣ ಭೇದಿಸಿ ವಕೀಲನ ಕೊಲೆಯ ರಹಸ್ಯ ಭೇದಿಸಿ ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸುವ  ಕೆಲಸಕ್ಕೆ ಮುಂದಾಗಿದ್ದಾರೆ.
Published by: Latha CG
First published: January 3, 2021, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories