HOME » NEWS » State » MANDYA CRIME NEWS A LADY KILLED HER BROTHERS WIFE AND HANGED HERSELF AT MANDYA LG

Mandya Crime News: ಅಣ್ಣನ ಕೈಲಿ ಮನೆ ಕೆಲಸ ಮಾಡಿಸುತ್ತಾಳೆಂದು ಗರ್ಭಿಣಿ ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ

ಕಳೆದ ಕೆಲ ವರ್ಷಗಳಿಂದ ಎರಡು ಬಾರಿ ಗರ್ಭವತಿಯಾಗಿದ್ದ ಪ್ರಿಯಾಂಕಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರ ನಡುವೆ ಈಗ ಮತ್ತೆ ಪ್ರಿಯಾಂಕ ಗರ್ಭವತಿಯಾಗಿದ್ದಳು.

news18-kannada
Updated:June 13, 2021, 8:40 AM IST
Mandya Crime News: ಅಣ್ಣನ ಕೈಲಿ ಮನೆ ಕೆಲಸ ಮಾಡಿಸುತ್ತಾಳೆಂದು ಗರ್ಭಿಣಿ ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ(ಜೂ.13): ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಗೆ ಕೊಲೆಗಳೇ ನಡೆದು ಹೋಗುತ್ತವೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಇಂತಹ ದುರಂತ ಸಂಭವಿಸಿದೆ.  ಕ್ಷುಲ್ಲಕ ಕಾರಣಕ್ಕೆ ಅತ್ತಿಗೆ ಮತ್ತು ನಾದಿನಿ ನಡುವೆ ಮಾರಾಮಾರಿ ನಡೆದು ಅತ್ತಿಗೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಮಂಡ್ಯದ ಕಂಬದಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 32 ವರ್ಷದ ಪ್ರಿಯಾಂಕ ನಾದಿನಿಯಿಂದ ಹತ್ಯೆಯಾದ ಮಹಿಳೆ. ಈಕೆ ಮತ್ತು ಈಕೆಯ ನಾದಿನಿ ಗಿರಿಜಾ ನಡುವೆ ಕಲ ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತಿತ್ತು. ಆದ್ರೆ ಶನಿವಾರ ಆ ಜಗಳ ವಿಕೋಪಕ್ಕೆ ತಿರುಗಿ ಅತ್ತಿಗೆ ಮೇಲೆ ಗಿರಿಜಾ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾಳೆ.

ನಾದಿನಿ ಕೊಲೆಗೆ ಪ್ರಯತ್ನಿಸಿದ್ದಳಾ ಅತ್ತಿಗೆ..?

ಅತ್ತಿಗೆ ಮೇಲೆ ಹಲ್ಲೆ ನಡೆಸಿ ಆಕೆಯನ್ನ ಕೊಲೆ ಮಾಡಿದ ಗಿರಿಜಾ ಮನೆಯ ಬೋರ್ಡ್ ಒಂದರಲ್ಲಿ ಡೆತ್ ನೋಟ್ ಒಂದನ್ನು ಬರೆದಿದ್ದಾಳೆ. ತನ್ನ ಅತ್ತಿಗೆ ತನ್ನನ್ನ ಕೊಲ್ಲಲು ಊಟದ ಜೊತೆಗೆ ವಿಷ ಬೆರೆಸಿದ್ದಾಗಿ ಆರೋಪಿಸಿದ್ದಾಳೆ. ಇದಕ್ಕೆ ಪುಷ್ಟಿ ನೀಡುವಂತೆ ಊಟದ ತಟ್ಟೆ ಜೊತೆಗೆ ವಿಷದ ಬಾಟಲ್ ಕೂಡ ಸಿಕ್ಕಿದೆ. ಇದರ ಜೊತೆಗೆ ಗಿರಿಜಾ ಒಂದೆರಡು ಬಾರಿ ವಾಂತಿಯನ್ನ ಕೂಡ ಮಾಡಿಕೊಂಡಿದ್ದಾಳೆ. ಇನ್ನು ಇದಾದ ಬಳಿಕ ಗಿರಿಜಾ ಮನೆಯ ಹಾಲಿನಲ್ಲಿ ತೊಲೆಗೆ ಸೀರೆಯಿಂದ ಕುಣಿಕೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:ಬಿಜೆಪಿಯವರು ಹೆಣ, ಔಷಧಿ, ಬೆಡ್​​ನಲ್ಲೂ ಹಣ ಮಾಡುತ್ತಿದ್ದಾರೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ

ಎರಡು ಬಾರಿ ಗರ್ಭಪಾತವಾಗಿ ಮೂರನೆ ಬಾರಿ ಗರ್ಭವತಿಯಾಗಿದ್ದ ಪ್ರಿಯಾಂಕ....

ಕಳೆದ ಕೆಲ ವರ್ಷಗಳಿಂದ ಎರಡು ಬಾರಿ ಗರ್ಭವತಿಯಾಗಿದ್ದ ಪ್ರಿಯಾಂಕಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರ ನಡುವೆ ಈಗ ಮತ್ತೆ ಪ್ರಿಯಾಂಕ ಗರ್ಭವತಿಯಾಗಿದ್ದಳು. ಹೀಗಾಗಿ ಪ್ರಿಯಾಂಕ ಪತಿ ಗಿರೀಶ್ ಈ ಬಾರಿ ಗರ್ಭಪಾತವಾಗಬಾರದೆಂದು ತನ್ನ ಪತ್ನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಇದರಿಂದ ಪ್ರಿಯಾಂಕ ಮತ್ತು ಈಕೆಯ ನಾದಿನಿ ಗಿರಿಜಾ ನಡುವೆ ಗಲಾಟೆ ನಡೆಯುತ್ತಲೇ ಇತ್ತು.

ಕಳೆದ ಒಂದು ತಿಂಗಳ ಹಿಂದೆಯಷ್ಟೆ ಅಣ್ಣನ ಮನೆಗೆ ಬಂದಿದ್ದ ಗಿರಿಜಾ...ಗಿರಿಜಾಗೆ ಈಗಾಗಲೇ ಮದುವೆಯಾಗಿದ್ದು, ಈಕೆಯ ಪತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಗಿರಿಜಾ, ಕಳೆದ ಒಂದು ತಿಂಗಳ ಹಿಂದೆ ಕಂಬದಳ್ಳಿಯಲ್ಲಿದ್ದ ಅಣ್ಣ ಗಿರೀಶ್ ಮನೆಗೆ ಬಂದಿದ್ದಳು. ಇನ್ನು ಇಲ್ಲಿಗೆ ಬರುವ ಮುಂಚೆ ಗಿರಿಜಾಳ ಮಗ ಕೂಡ ಸಾವನ್ನಪ್ಪಿದ್ದ‌. ಹೀಗಾಗಿ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದಳು. ಕೆಲಸದ ವಿಚಾರವಾಗಿ ಅತ್ತಿಗೆ ಮತ್ತು ನಾದಿನಿ ನಡುವೆ ಜಗಳವಾಗುತ್ತಲೇ ಇತ್ತು. ಅಣ್ಣನ ಕೈಯಲ್ಲಿ ಬಟ್ಟೆ ಹೊಗೆಸಿ ಮನೆ ಕೆಲಸ ಮಾಡಿಸುತ್ತಿದ್ದಾಳೆ ಅಂತ ಗಿರಿಜಾ ಪ್ರಿಯಾಂಕ ಜೊತೆ ಜಗಳ ಮಾಡುತ್ತಿದ್ದಳು. ಈ ಜಗಳವೇ ದುರಂತಕ್ಕೆ ಕಾರಣವಾಗಿರಬಹುದು ಅಂತ ಅಂದಾಜಿಸಲಾಗಿದೆ.

ಇದನ್ನೂ ಓದಿ:Bengaluru Crime: ಹೆಚ್ಚಿನ ಬಡ್ಡಿ ಆಸೆಯಿಂದ ಹಣ ಹೂಡಿಕೆ ಮಾಡಿದ್ರೆ ಪಂಗನಾಮ; ಚೀನಿ ಆ್ಯಪ್​ಗಳಿವೆ ಎಚ್ಚರಿಕೆ..!
Youtube Video

ಇಷ್ಟೆಲ್ಲಾ ನಡೆದರೂ ಯಾರಿಗೂ ವಿಚಾರ ಗೊತ್ತಾಗಿಲ್ಲ

ಇನ್ನು ಇಷ್ಟೆಲ್ಲಾ ಜೋರು ಗಲಾಟೆ ನಡೆದು ಹತ್ಯೆ ನಡೆದರೂ ನೆರೆ ಹೊರೆಯವರಿಗೆ ವಿಚಾರ ಗೊತ್ತಾಗಿರಲಿಲ್ಲ. ಬಳಿಕ ಪ್ರಿಯಾಂಕ ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಅಕ್ಕ ಪಕ್ಕದವರ ಸಹಾಯದಿಂದ‌ ಮನೆಯ ಬಾಗಿಲನ್ನ‌ ತೆಗೆದು ನೋಡಿದಾಗ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಬಳಿಕ ಬಸರಾಳು ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಮಂಡ್ಯ ಎಸ್ಪಿ ಡಾ. ಅಶ್ವಿನಿ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ವರದಿ: ಸುನೀಲ್ ಕುಮಾರ್

Published by: Latha CG
First published: June 13, 2021, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories