Mandya Crime: ಫಾದರ್ಸ್​ ಡೇ ದಿನವೇ ಮಂಡ್ಯದಲ್ಲಿ ದುರಂತ; ಮಗಳ ಸಾವಿನ ಸುದ್ದಿ ಕೇಳಿ ತಂದೆಗೆ ಹೃದಯಾಘಾತ

ಕಾಲೇಜಿಗೆ ಸೇರಿಸುವ ವಿಚಾರಕ್ಕೆ ಮಗಳು ಮತ್ತು ತಂದೆ ನಡುವೆ ಮನಸ್ತಾಪ  ಉಂಟಾಗಿತ್ತು. ಈ ವಿಚಾರಕ್ಕೆ ಮನನೊಂದ ಮಗಳು ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. 

ಅಪ್ಪ-ಮಗಳು

ಅಪ್ಪ-ಮಗಳು

  • Share this:
    ಮಂಡ್ಯ(ಜೂ.20): ಇಂದು ವಿಶ್ವ ಅಪ್ಪಂದಿರ ದಿನಾಚರಣೆ.  ಪ್ರತಿಯೊಬ್ಬರ ಬದುಕಿನಲ್ಲಿಯೂ ಅಪ್ಪ ವಿಶೇಷ ಪಾತ್ರ ವಹಿಸುತ್ತಾನೆ. ತನ್ನೆಲ್ಲಾ ತ್ಯಾಗದ ಹಿಂದೆ ಪ್ರೀತಿ ಇರುತ್ತದೆ. ಯಾಕೆಂದರೆ ಅಪ್ಪ ಅಂದರೆ ಆಕಾಶ. ಇಂತಹ ಅಪ್ಪನಿಗೆ ಧನ್ಯವಾದ ಹೇಳಲೆಂದೇ ಪ್ರತೂ ವರ್ಷ ಜೂನ್​ 20ನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳ ಖುಷಿಯಲ್ಲಿ ತನ್ನ ಖುಷಿ ಕಾಣುವ ತಂದೆ, ತ್ಯಾಗಮಯಿಯೂ ಹೌದು. ಇಂತಹ ಅಪ್ಪ ತನ್ನ ಮಕ್ಕಳ ಖುಷಿಗೆ ಏನು ಬೇಕಾದರೂ ಮಾಡಲು ಸಿದ್ದ ಇರುತ್ತಾನೆ. ಮಕ್ಕಳಿಗೂ ಅಪ್ಪ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪ ಅಂದ್ರೆ ಅವರ ಜೀವನದ ಮೊದಲ ಹೀರೋ ಕೂಡ ಹೌದು. ಅಪ್ಪ-ಮಗಳ ಬಾಂಧ್ಯವಕ್ಕೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಫಾದರ್ಸ್​ ಡೇ ದಿನದಂದೇ ಮಂಡ್ಯದಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ.

    ಅಪ್ಪ-ಮಗಳ ನಡುವೆ ಜಗಳವಾದರೂ ಅದು ಸಾಮಾನ್ಯ. ಕ್ಷಣಿಕ ಕೂಡ ಹೌದು. ಅಪ್ಪಂದಿರು ತಮ್ಮ ಮಕ್ಕಳ ಆಸೆ -ಕನಸುಗಳಿಗೆ ನೀರೆರೆಯುತ್ತಾರೆಯೇ ವಿನಹಃ, ಕಲ್ಲು ಹಾಕುವುದಿಲ್ಲ. ಯಾಕೆಂದರೆ ಮಕ್ಕಳ ಖುಷಿಯಲ್ಲೇ ಅವರ ಖುಷಿಯೂ ಅಡಗಿರುತ್ತದೆ. ಅವರ ಭವಿಷ್ಯ ರೂಪಿಸಲೆಂದೇ ಪೋಷಕರು ಪಣತೊಟ್ಟಿರುತ್ತಾರೆ. ಇದೇ ರೀತಿ ಮಂಡ್ಯದ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಅಪ್ಪ-ಮಗಳ ಬಾಂಧವ್ಯವೂ ಇತ್ತು. ಆದರೆ ಈ ಅಪ್ಪ-ಮಗಳ ಈ ಬಂಧಕ್ಕೆ ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ. ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದುರಂತವೇ ನಡೆದು ಹೋಗಿದೆ.

    ಇದನ್ನೂ ಓದಿ:M. Manikandan Arrest: ನಟಿ ಮೇಲೆ ಅತ್ಯಾಚಾರ ಆರೋಪ; ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಅರೆಸ್ಟ್​

    ಹೌದು, ಈ ದುರಂತದಲ್ಲಿ ಅಪ್ಪ-ಮಗಳು ಇಬ್ಬರೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.  ತಳಗವಾದಿ ಗ್ರಾಮದ 17 ವರ್ಷದ ಬಾಲಕಿ ಹಾಗೂ 46 ವರ್ಷದ ರಾಜು ಮೃತ ದುರ್ದೈವಿಗಳು. ಕಾಲೇಜಿಗೆ ಸೇರಿಸುವ ವಿಚಾರಕ್ಕೆ ಮಗಳು ಮತ್ತು ತಂದೆ ನಡುವೆ ಮನಸ್ತಾಪ  ಉಂಟಾಗಿತ್ತು. ಈ ವಿಚಾರಕ್ಕೆ ಮನನೊಂದ ಮಗಳು ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.  ಮಗಳು ನೇಣಿಗೆ ಶರಣಾದ ವಿಚಾರ ಕೇಳಿದ ತಂದೆ ರಾಜುಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

    ಅಪ್ಪ-ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಈ ಸಂಬಂಧ  ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: