Mandya: ಕಂದಮ್ಮಗೆ ವಿಷವುಣಿಸಿ, ದಂಪತಿ ಆತ್ಮಹತ್ಯೆಗೆ ಶರಣು: ಮಗುವಿಗೆ ಹೊಸ ಬಟ್ಟೆ ಹಾಕಿ ಅಂತ್ಯಕ್ರಿಯೆ ಮಾಡೆಂದ ತಾಯಿ
ಇನ್ನು ಮೊದಲು ಮಗುವಿಗೆ ವಿಷ ನೀಡಿ, ಮಗು ಸಾವನ್ನಪ್ಪುತ್ತಿದ್ದಂತೆ ನಂತರ ತನುಶ್ರೀ ಮತ್ತು ರಘು ನೇಣಿಗೆ ಶರಣಾಗಿದ್ದಾರೆ. ಆದ್ರೆ ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳೋ ಮೊದಲು ಡೆತ್ ನೋಟ್ ಒಂದನ್ನ ಬರೆದಿದ್ದಾಳೆ.
Mandya: ಅವರು ಇಬ್ಬರು ಹೆತ್ತವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ (Love Marriage_ ಆಗಿದ್ದರು. ಇವರ ಪ್ರೀತಿಗೆ ಮುದ್ದಾದ ಒಂದು ಹೆಣ್ಣು ಮಗು (Baby) ಕೂಡ ಆಗಿತ್ತು. ಆದ್ರೆ ಕ್ಷುಲ್ಲಕ ಕಾರಣಕ್ಕೆ ಹೆತ್ತ ಅಪ್ಪ ಅಮ್ಮನೇ ಮಗುವಿಗೆ ವಿಷ ನೀಡಿ, ತಾವು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಸಕ್ಕರೆ ನಾಡು ಮಂಡ್ಯ (Mandya)ದಲ್ಲಿ. ಬದುಕಿ ಬಾಳಬೇಕಿದ್ದ ಮುದ್ದು ಕಂದಮ್ಮ ಸಹ ಸಾವನ್ನಪ್ಪಿದೆ. ಮೃತರ ಮನೆಯಲ್ಲಿ ಡೆತ್ ನೋಟ್ (Death Note) ಲಭ್ಯವಾಗಿದ್ದು, ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ. ಆದ್ರೆ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.
ಹೆತ್ತ ತಾಯಿ ಮತ್ತು ತಂದೆಯಿಂದಲೇ ಮಗುವಿಗೆ ವಿಷ ಪ್ರಾಷಾಣ
ಎಷ್ಟೋ ಜನ ತಮಗೆ ಮಕ್ಕಳಿಲ್ಲ ಅಂತ ಕಂಡ ಕಂಡ ದೇವರಿಗೆ ಕೈ ಮುಗಿತಾ ಇರ್ತಾರೆ. ಅದೆಷ್ಟೋ ಜನ ಒಂದೇ ಒಂದು ಮಗು ಆದ್ರೆ ಸಾಕು ಅಂತ ಕಂಡ ಕಂಡ ಆಸ್ಪತ್ರೆಗಳ ಮೆಟ್ಟಿಲು ಹತ್ತಿರ್ತಾರೆ. ಆದ್ರೆ ಈ ದಂಪತಿಗೆ ಅದ್ಯಾವ್ದು ತೊಂದರೆ ಆಗದ ಹಾಗೆ ಮುದ್ದಾದ ಒಂದು ಹೆಣ್ಣು ಮಗುವನ್ನ ಕರುಣಿಸಿದ್ದ ಆದ್ರೆ ಅದ್ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆ, ತಾಯಿಯೇ ಏನು ಅರಿಯದ ಆ ಕಂದನನ್ನ ಕೊಂದುಬಿಟ್ಟಿದ್ದಾರೆ. ಇದಾದ ಬಳಿಕ ಪತಿ ಮತ್ತು ಪತ್ನಿ ಇಬ್ಬರು ನೇಣು ಬಿಗಿದುಕೊಂಡು ತಾವು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು.., ಇಂತಾದ್ದೊಂದು ಮನಕಲಕುವ ದುರ್ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ. ಇದೇ ಗ್ರಾಮದ 24 ವರ್ಷದ ತನುಶ್ರೀ ಮತ್ತು 28 ವರ್ಷದ ಈಕೆಯ ಗಂಡ ರಘು ಹಾಗೂ ಇವರ ಮಗು 1 ವರ್ಷದ ಸಿರಿ ಸಾವನ್ನಪ್ಪಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ನಾಗಮಂಗಲ ತಾಲ್ಲೂಕಿನ ಗಂಗವಾಡಿ ಗ್ರಾಮದ ತನುಶ್ರೀ ಮತ್ತು ಮಂಡ್ಯ ನಗರದ ಶುಗರ್ ಟೌನ್ ನಿವಾಸಿ ರಘು ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಇವರ ಸಂಸಾರ ಕೂಡ ಚೆನ್ನಾಗೆ ಇತ್ತು. ಹಿಗಾಗಿ ಇವರ ಪ್ರೀತಿಗೆ ಒಂದು ವರ್ಷದ ಹಿಂದೆ ಮುದ್ದಾದ ಒಂದು ಹೆಣ್ಣು ಮಗು ಕೂಡ ಹುಟ್ಟಿತು. ಆದ್ರೆ ಇವರ ಪ್ರೀತಿಗೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಈಗ ಈ ಮೂವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಮೂವರ ಅಂತ್ಯಕ್ರಿಯೆ ಒಂದೆ ಕಡೆ ಮಾಡುವಂತೆ ಡೆತ್ ನೋಟ್ ಬರೆದಿದ್ದ ತನುಶ್ರೀ!
ಇನ್ನು ಮೊದಲು ಮಗುವಿಗೆ ವಿಷ ನೀಡಿ, ಮಗು ಸಾವನ್ನಪ್ಪುತ್ತಿದ್ದಂತೆ ನಂತರ ತನುಶ್ರೀ ಮತ್ತು ರಘು ನೇಣಿಗೆ ಶರಣಾಗಿದ್ದಾರೆ. ಆದ್ರೆ ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳೋ ಮೊದಲು ಡೆತ್ ನೋಟ್ ಒಂದನ್ನ ಬರೆದಿದ್ದಾಳೆ.
ತಮ್ಮ ಸಾವಿಗೆ ಯಾರು ಕಾರಣರಲ್ಲ. ನಮ್ಮ ಸಾವಿಗೆ ನಾವೆ ಕಾರಣ ಅಂತ. ಅಲ್ಲದೆ ತಾನು ತಂದ ಹೊಸ ಬಟ್ಟೆಯನ್ನೆ ತನ್ನ ನಗುವಿಗೆ ಹಾಕಿ ಮೂವರನ್ನ ಒಂದೆ ಕಡೆ ಮಣ್ಣು ಮಾಡಿ ಅಂತ ಕೇಳಿಕೊಂಡಿದ್ದಾಳೆ. ಸದ್ಯ ಇವರ ಸಾವಿಗೆ ನಿಕರ ಕಾರಣ ಗೊತ್ತಾಗದೆ ಇದ್ರು. ಡೆತ್ ನೋಟ್ ನಲ್ಲಿ ಮಾತ್ರ ತಮ್ಮ ಸಾವಿಗೆ ಯಾರು ಕೂಡ ಜಗಳವಾಡಬೇಡಿ ಅಂತ ತನುಶ್ರೀ ವಿನಂತಿಸಿಕೊಂಡಿದ್ದಾಳೆ.
ಸದ್ಯ ವಿಚಾರ ಅದೇನೆ ಇರಲಿ ಇನ್ನೂ ಪ್ರಪಂಚವನ್ನೆ ನೋಡದ ಆ ಒಂದು ವರ್ಷದ ಮಗುವಿನ ಉಸಿರು ನಿಲ್ಲಿಸಿದ್ದು ಮಾತ್ರ ದುರಂತ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ