ಮಂಡ್ಯದಲ್ಲಿ ಟಿಕೆಟ್ ಫೈಟ್; ಹೆಚ್​ಡಿಕೆ ಮತ್ತು ಅಂಬರೀಷ್ ಪುತ್ರರ ಹೆಸರು ಚಾಲನೆಯಲ್ಲಿ

ಅತ್ತ ಜೆಡಿಎಸ್​ನಿಂದ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೀತಿದ್ರೆ, ಇತ್ತ ಕೈ ಕಾರ್ಯಕರ್ತರು ಕ್ಷೇತ್ರ ಬಿಟ್ಟುಕೊಡಲು ಒಪ್ಪದೆ ಅಂಬಿ ಪುತ್ರ ಅಭಿಷೇಕ್ಗೆ ಟಿಕೇಟ್ ಕೊಡುವಂತೆ ಒತ್ತಾಯಿದ್ದಾರೆ.

Vijayasarthy SN | news18
Updated:January 12, 2019, 7:15 PM IST
ಮಂಡ್ಯದಲ್ಲಿ ಟಿಕೆಟ್ ಫೈಟ್; ಹೆಚ್​ಡಿಕೆ ಮತ್ತು ಅಂಬರೀಷ್ ಪುತ್ರರ ಹೆಸರು ಚಾಲನೆಯಲ್ಲಿ
ಹೆಚ್​​ಡಿಕೆ ಮತ್ತು ನಿಖಿಲ್ ಕುಮಾರಸ್ವಾಮಿ
Vijayasarthy SN | news18
Updated: January 12, 2019, 7:15 PM IST
- ರಾಘವೇಂದ್ರ ಗಂಜಾಮ್,

ಮಂಡ್ಯ(ಜ. 12): ಲೋಕಸಭೆಯ ಚುನಾವಣೆ ಘೋಷಣೆಗೂ ಮೊದಲೇ ಸಕ್ಕರೆ ನಾಡಿನಲ್ಲಿ ಚುನಾವಣಾ ಕಾವು ಏರ ತೊಡಗಿದೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡುವಂತೆ  ಜೆಡಿಎಸ್​ನ ವರಿಷ್ಠರು ಪಟ್ಟು ಹಾಕಿದ್ದಾರೆ. ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ ಜಯಗಳಿಸಿ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್​ನಿಂದ ದೇವೇಗೌಡರ ಕುಟುಂಬ ಸದಸ್ಯರೇ ಸ್ಪರ್ಧೆ ಮಾಡುವಂತೆ ಒತ್ತಡ ಹೆಚ್ಚಾಗ್ತಿದೆ. ಈಗಾಗಲೇ ಮಂಡ್ಯ ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಸದಸ್ಯರು ಸಿಎಂ ಪುತ್ರ ನಿಖಿಲ್ ಸ್ಪರ್ಧೆ ಮಾಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ನಿನ್ನೆ ‌ಮಂಡ್ಯಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ದೇವೇಗೌಡ್ರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ ಅವ್ರನ್ನ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿರೋದು ಜಿಲ್ಲೆಯಲ್ಲಿ ದೇವೇಗೌಡ್ರ ಅಥವಾ ಅವ್ರ ಕುಟುಂಬದವರು ಸ್ವರ್ಧೆ ಮಾಡೋದು ಖಚಿತ ಅಂತ ಹೇಳೆಲಾಗ್ತಿದೆ.

ಇದನ್ನೂ ಓದಿ: ಸೀತೆ ಜಿಂಕೆ, ಹಸು ಮಾಂಸ ತಿಂದಿದ್ದಳು; ಪೆರಿಯಾರ್​ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ

ಇನ್ನು ಜೆಡಿಎಸ್ ಪಕ್ಷ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಿರುವುದು ಕಾಂಗ್ರೆಸ್  ಪಕ್ಷಕ್ಕೆ‌ ನುಂಗಲಾರದ ತುತ್ತಾಗಿದೆ. ಅದ್ರಲ್ಲೂ ಜಿಲ್ಲೆಯ ಕೈ ಕಾರ್ಯಕರ್ತರು ಜೆಡಿಎಸ್ ವರಿಷ್ಠರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡದಂತೆ ವರಿಷ್ಠರ ಮೂಲಕ ಒತ್ತಡ ಹಾಕಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಅಂಬಿ ಪುತ್ರ ಅಭಿಷೇಕ್​ಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದು, ಮೈತ್ರಿ ಸರ್ಕಾರದ ಸಿಎಂ ಕೂಡ ಅಂಬಿ‌ ಅಭಿಮಾನಿಯಾಗಿದ್ದು ಅಂಬರೀಶ್ ಮೇಲಿನ ಅಭಿಮಾನಕ್ಕೆ ಅಂಬಿ ಪುತ್ರ ನಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಏನೇ ಆದರೂ ಜಿಲ್ಲೆಯಿಂದ ಜಿಲ್ಲೆಯ ವ್ಯಕ್ತಿಗೆ ಕೈ ಟಿಕೇಟ್ ನೀಡುವಂತೆ ಕೈ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 'ನಿವೃತ್ತಿ ಬಳಿಕ ಮತ್ತೆಂದೂ ಬ್ಯಾಟ್​ ಎತ್ತಲಾರೆ' ವಿರಾಟ್​ ಕೊಹ್ಲಿ ಅಚ್ಚರಿಯ ಹೇಳಿಕೆ

ಒಟ್ಟಾರೆ ಸಕ್ಕರೆನಾಡು‌ ಮಂಡ್ಯದಲ್ಲಿ ಲೋಕಸಮರಕ್ಕೂ ಮೊದಲೇ ಕೈ ಮತ್ತು ತೆನೆ ಪಕ್ಷಗಳ ನಡುವೆ ಮಂಡ್ಯ ಕ್ಷೇತ್ರ ಟಿಕೇಟ್​ಗಾಗಿ ಶೀತಲ ಸಮರ ಆರಂಭವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವ ಕಾರಣಕ್ಕೆ ಮಂಡ್ಯ ಕ್ಷೇತ್ರ ಯಾರ ಪಾಲಾಗುತ್ತೆ ಅನ್ನೋದ್ನ ಕಾದು ನೋಡಬೇಕಿದೆ.
Loading...

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...