‘ಎಲ್ಲಕ್ಕಿಂತ ಹೆಚ್ಚಾಗಿ ನಾನೊಬ್ಬ ಕಾಡು ಮನುಷ್ಯ’; ಜಾತಿ ಬಗ್ಗೆ ಟೀಕೆ ಮಾಡುವವರಿಗೆ ದರ್ಶನ್ ಗುನ್ನಾ

Darshan Campaign Highlights: ಸುಮಲತಾ ಪರ ನಿಂತಿರುವ ದರ್ಶನ್​, ರಾಕ್​ಲೈನ್​ ವೆಂಕಟೇಶ್​ ಅವರು ನಾಯ್ಡು ಕುಟುಂಬದವರು. ಇಡೀ ಮಂಡ್ಯವನ್ನು ಅವರು ನಾಯ್ಡುಮಯವಾಗಿ ಮಾಡಲು ಹೊರಟಿದ್ದಾರೆ ಎಂದು ಸಂಸದ ಶಿವರಾಮೇಗೌಡ ಟೀಕಿಸಿದ್ದರು. ಇದಕ್ಕೆ ದರ್ಶನ್​ ಉತ್ತರಿಸಿದ್ದಾರೆ.

Rajesh Duggumane | news18
Updated:April 3, 2019, 12:05 PM IST
‘ಎಲ್ಲಕ್ಕಿಂತ ಹೆಚ್ಚಾಗಿ ನಾನೊಬ್ಬ ಕಾಡು ಮನುಷ್ಯ’; ಜಾತಿ ಬಗ್ಗೆ ಟೀಕೆ ಮಾಡುವವರಿಗೆ ದರ್ಶನ್ ಗುನ್ನಾ
ದರ್ಶನ್​
  • News18
  • Last Updated: April 3, 2019, 12:05 PM IST
  • Share this:
ಮಂಡ್ಯ (ಏ.3): ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್​ ಅವರ ಜಾತಿ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡ ವ್ಯಂಗ್ಯವಾಡಿದ್ದರು. ಜೊತೆಗೆ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ ಜಾತಿ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಈ ಹೇಳಿಕೆಗೆ ದರ್ಶನ್ ಖಡಕ್​ ಉತ್ತರ ನೀಡಿದ್ದಾರೆ.

‘ಸುಮಲತಾ ನಾಯ್ಡು ಸಮುದಾಯದವರು. ಹೀಗಿರುವಾಗ ಅವರು ಮಂಡ್ಯ ಗೌಡ್ತಿ ಹೇಗಾಗುತ್ತಾರೆ,’ ಎಂದು ಪ್ರಶ್ನಿಸಿದ್ದರು ಶಿವರಾಮೇಗೌಡ. ನಂತರ ಒಂದು ಹೆಜ್ಜೆ ಮುಂದೆ ಹೋಗಿದ್ದ ಅವರು, “ಸುಮಲತಾ ಪರ ನಿಂತಿರುವ ದರ್ಶನ್​, ರಾಕ್​ಲೈನ್​ ವೆಂಕಟೇಶ್​ ಅವರು ನಾಯ್ಡು ಕುಟುಂಬದವರು. ಇಡೀ ಮಂಡ್ಯವನ್ನು ಅವರು ನಾಯ್ಡುಮಯವಾಗಿ ಮಾಡಲು ಹೊರಟಿದ್ದಾರೆ,” ಎಂದು ಟೀಕಿಸಿದ್ದರು.

ಈ ವಿಚಾರವಾಗಿ ಮಾಧ್ಯಮದವರು  ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ದರ್ಶನ್​, “ನಾನು ಕ್ರೈಸ್ತ, ಮುಸ್ಲಿಂ, ಹಿಂದು. ಎಲ್ಲಕ್ಕಿಂತ ಮಿಗಿಲಾಗಿ ನಾನೊಬ್ಬ ಕಾಡು ಮನುಷ್ಯ. ಹೌದು, ನಾನು ನಾಯ್ಡು ಸಮುದಾಯದವನು. ಅದರಲ್ಲಿ ತಪ್ಪೇನಿದೆ,” ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಶಿವರಾಮೇ ಗೌಡ ಅವರಿಗೆ ಖಡಕ್​ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 'ನಾಯ್ಡುಗಳ ಕೈಯಲ್ಲಿ ಅಧಿಕಾರ ಕೊಟ್ರೆ ಗೌಡ್ರ ಕತೆಯೇನ್ರೋ?'; ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಶಿವರಾಮೇಗೌಡ

ದರ್ಶನ್​ ಪ್ರಚಾರ ಮಾಡಿದ ಕಡೆ ಮತ ಬರುವುದಿಲ್ಲ ಎಂದು ಜಿ.ಟಿ. ದೇವೇಗೌಡ ಹೇಳಿದ್ದರು. ಇದಕ್ಕೂ ದರ್ಶನ್​ ತಿರುಗೇಟು ನೀಡಿದ್ದಾರೆ. “100 ಮತಗಳು ಬರದಿದ್ದರೂ ತೊಂದರೆ ಇಲ್ಲ. 50 ಮತವಾದರೂ ಬರಲಿ. ಅದು ನನಗೆ ಸಂತಸವೇ,” ಎಂದಿದ್ದಾರೆ.

ಯಶ್​ ಹಾಗೂ ದರ್ಶನ್​ ಅವರು ನಟ ಅಂಬರೀಶ್​ ಅವರನ್ನು ಅಪ್ಪಾಜಿ ಎಂದು ಸ್ವೀಕರಿಸಿದ್ದರು. ಅಂಬರೀಶ್​ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಇಬ್ಬರೂ, ಎಲ್ಲ ಕೆಲಸಗಳನ್ನು ತಾವೇ ಮುಂದೆ ನಿಂತು ನಿರ್ವಹಿಸಿದ್ದರು. ಸುಮಲತಾ ಚುನಾವಣೆಗೆ ನಿಲ್ಲುತ್ತೇನೆ ಎಂದಾಗ, “ನಾವು ಸುಮಲತಾ ಮನೆ ಮಕ್ಕಳಾಗಿ ಬಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೇವೆ,” ಎಂದು ಹೇಳಿದ್ದರು. ಅಂತೆಯೇ ದರ್ಶನ್​ ಹಾಗೂ ಯಶ್​ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಎಲ್ಲಿಯೇ ಹೋದರೂ ಮಂಡ್ಯ ಅಂದ್ರೆ ಅಂಬರೀಶ್ ಎನ್ನುತ್ತಿದ್ದರು; ಸುಮಲತಾ ಪರ ಪ್ರಚಾರದಲ್ಲಿ ಅಂಬಿ ನೆನೆದ ಯಶ್​ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

First published: April 3, 2019, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading