• Home
  • »
  • News
  • »
  • state
  • »
  • Mohammed Nalapad: ಏಯ್, ಇದು ಬೆಂಗ್ಳೂರು ಅಲ್ಲ; ನಲಪಾಡ್​ಗೆ ಮಂಡ್ಯ ಕಾರ್ಯಕರ್ತನ ಅವಾಜ್; ವಿಡಿಯೋ ಫುಲ್ ವೈರಲ್

Mohammed Nalapad: ಏಯ್, ಇದು ಬೆಂಗ್ಳೂರು ಅಲ್ಲ; ನಲಪಾಡ್​ಗೆ ಮಂಡ್ಯ ಕಾರ್ಯಕರ್ತನ ಅವಾಜ್; ವಿಡಿಯೋ ಫುಲ್ ವೈರಲ್

ನಲಪಾಡ್

ನಲಪಾಡ್

ಜನರು ಇಷ್ಟು ಹೇಳಿದಂತೆ ಕೈ ಮುಗಿದ ನಲಪಾಡ್, ನಿಧಾನವಾಗಿ ಹಿಂದಕ್ಕೆ ಹೆಜ್ಜೆ ಹಾಕಿದರು. ಜನರತ್ತ ಕೈ ಮುಗಿದ ನಲಪಾಡ್ ಗಲಾಟೆ ನಡೆಯುತ್ತಿರುವ ಸ್ಥಳದಿಂದ ದೂರ ಬಂದ್ರು.

  • Share this:

ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ಐದನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನ ಅಂದ್ರೆ ಸೋಮವಾರ ರಾಜ್ಯ ಯುವ  ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್​ ನಲಪಾಡ್​ಗೆ (Mohammed Nalapad) ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.  ಭಾರತ್ ಜೋಡೊ ಯಾತ್ರೆಯಲ್ಲಿ ಜನರ ನಿಯಂತ್ರಣ ಮಾಡುವ ಸಂದರ್ಭದಲ್ಲಿ ಜನರು (People) ಮತ್ತು ಪೊಲೀಸರ (Police) ನಡುವೆ ವಾಗ್ವಾದ ಉಂಟಾಗಿತ್ತು. ಗಲಾಟೆ ಗಮನಿಸಿ ಓಡೋಡಿ ಬಂದ ನಲಪಾಡ್, ಜನರನ್ನು ನಿಯಂತ್ರಣ ಮಾಡಲು ಮುಂದಾಗಿದ್ದರು. ಈ ವೇಳೆ ಅಲ್ಲಿದ್ದ ಜನರು ಏ..ಇದು ಬೆಂಗಳೂರು (Bengaluru) ಅಲ್ಲಾ ಎಂದು ಅವಾಜ್ ಹಾಕಿದರು. ಜನರು ಇಷ್ಟು ಹೇಳಿದಂತೆ ಕೈ ಮುಗಿದ ನಲಪಾಡ್, ನಿಧಾನವಾಗಿ ಹಿಂದಕ್ಕೆ ಹೆಜ್ಜೆ ಹಾಕಿದರು. ಜನರತ್ತ ಕೈ ಮುಗಿದ ನಲಪಾಡ್ ಗಲಾಟೆ ನಡೆಯುತ್ತಿರುವ ಸ್ಥಳದಿಂದ ದೂರ ಬಂದ್ರು.


ಕೆಲವು ದಿನಗಳ ಹಿಂದೆ ಬಳ್ಳಾರಿಯಲ್ಲಿಯೂ ನಲಪಾಡ್ ಮತ್ತು ರೈತರೊಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಕಾಂಗ್ರೆಸ್ ರೈತರ ಜೊತೆಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹ್ಯಾರಿಸ್ ನಲಪಾಡ್ (Mohammed Haris Nalapad)​ ಮತ್ತು ರೈತರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.


ಯಾವನೋ, ಗೀವನೋ ಅಂದ್ರೆ ಸರಿ ಇರಲ್ಲ


ರೈತ ಸಂವಾದಲ್ಲಿ ಮಾತನಾಡುತ್ತಿದ್ದ ನಲಪಾಡ್, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂಬ ಮಾತಿಗೆ ರೈತರೊಬ್ಬರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ರೈತನಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ನಲಪಾಡ್ ಏಕವಚನದಲ್ಲಿಯೇ ಮಾತನಾಡಿದರು. ಇದರಿಂದ ಕೋಪಗೊಂಡ ರೈತ ಯಾವನೋ, ಗೀವನೋ ಅಂದ್ರೆ ಸರಿ ಇರಲ್ಲ ಮರು ಉತ್ತರ ನೀಡಿದರು.


ಬಿಜೆಪಿ ಸರ್ಕಾರ ಕಮಿಷನ್ ಪಡೆಯುತ್ತಿದೆ ಎಂದು ನಾವು ಹೇಳುತ್ತಿಲ್ಲ. ಹೀಗೆ ಹೇಳಿದ್ದು ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ. 40 ಪರ್ಸೆಂಟ್ ಕಮಿಷನ್ ನಿಂದ ಜೀವ ಕಳೆದುಕೊಂಡಿದ್ದು ಬಿಜೆಪಿಯ ಕಾರ್ಯಕರ್ತ ಎಂದರು.


ಇದನ್ನೂ ಓದಿ:  BJP Tweet: ಮುಳುಗುವ ಹಡಗಿಗೆ ಅಮ್ಮ ಬಂದ್ರೂ ಅಷ್ಟೇ, ತಂಗಿ ಬಂದ್ರೂ ಅಷ್ಟೇ!


ಕಾರ್ಯಕ್ರಮದಲ್ಲಿಯೇ ತಿರುಗೇಟು


ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಯಾವನೋ ಅವನು ಕುಡಿದು ಬಿಟ್ಟು ಹೇಳುವುದನ್ನು ಕೇಳಿ. ನೀವು ಟೆನ್ಷನ್ ತೆಗೆದುಕೊಳ್ಳಬೇಡಿ, ನಾನು ಹೇಳುವದನ್ನು ಕೇಳಿ ಎಂದು ಹೇಳುತ್ತಾರೆ. ನಲಪಾಡ್ ಮಾತಿಗೆ ಸಂವಾದದಲ್ಲಿಯೇ ಕೋಪಗೊಂಡ ರೈತ ಯಾವನೋ ,ಗೀವನೋ ಅಂದ್ರೆ ಸರಿ ಇರಲ್ಲ ಎಂದು ತಿರುಗೇಟು ನೀಡಿದರು.
ಭಾರತ್ ಜೋಡೋ ಯಾತ್ರೆಗೆ ಎರಡು ದಿನ ವಿರಾಮ


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರೋ ‘ಭಾರತ್ ಜೋಡೋ’ 4ನೇ ದಿನದ ಪಾದಯಾತ್ರೆ ಪಾಂಡವಪುರದಲ್ಲಿ ಮುಕ್ತಾಯವಾಗಿದೆ. ಅಲ್ಲೇ ಕೆಲ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಿದ್ದಾರೆ.  ಮಂಡ್ಯದ ಪಾಂಡವಪುರದ ಬಳಿ ಮಹಿಳೆಯರು ರಾಹುಲ್ ಗಾಂಧಿಗೆ ಬೆಲ್ಲದ ಆರತಿ ಬೆಳಗಿ ಶುಭಕೋರಿದ್ರು. ಇಂದು ಹಾಗೂ ನಾಳೆ ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆ ಭಾರತ್ ಜೋಡೋ ಯಾತ್ರೆಗೆ ಎರಡು ದಿನಗಳ ವಿರಾಮ ಇರಲಿದೆ.


ಇದನ್ನೂ ಓದಿ:  Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


ಕರ್ನಾಟಕಕ್ಕೆ ಸೋನಿಯಾ ಗಾಂಧಿ


ಇನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿನ್ನೆ ಕರ್ನಾಟಕಕ್ಕೆ ಆಗಮಿಸಿದ್ರು. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಾಥ್ ನೀಡಲಿದ್ದಾರೆ. ಸದ್ಯ ಮಡಿಕೇರಿಯ ರೆಸಾರ್ಟ್​​ನಲ್ಲಿ ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ.

Published by:Mahmadrafik K
First published: