ಮಂಡ್ಯ: ಕಬ್ಬು (Sugarcane Price) ಹಾಗೂ ಹಾಲಿನ ದರ (Milk Price) ಹೆಚ್ಚಳ ಮಾಡುವಂತೆ ಮಂಡ್ಯ ರೈತರು (Mandya Farmer) ನಡೆಸಿದ ಹೋರಾಟಕ್ಕೆ ಸರ್ಕಾರ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ, ಆ ಭಾಗದ ರೈತರು ಮತ್ತೊಂದು ಸುತ್ತಿನ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಾರಿ ಮಂಡ್ಯ ನಗರದ (Mandya City) ಬಂದ್ಗೆ ಕರ್ನಾಟಕ ರಾಜ್ಯ ರೈತ ಸಂಘ (Karnataka Rajya Raitha Sangha) ಕರೆ ಕೊಟ್ಟಿದ್ದು, ಡಿಸೆಂಬರ್ 19ರಂದು ಸಂಪೂರ್ಣವಾಗಿ ಮಂಡ್ಯ ನಗರ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ. ಕಳೆದ 36 ದಿನಗಳಿಂದಲೂ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೂ ಸರ್ಕಾರದಿಂದ ಯಾವುದೇ ಸ್ಪಂಧನೆ ಬಂದಿಲ್ಲ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
36 ದಿನಗಳಿಂದ ಆಹೋರಾತ್ರಿ ಧರಣಿ
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನೂರಾರು ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದು, ವೈಜ್ಞಾನಿಕವಾಗಿ ಕಬ್ಬು ಹಾಗೂ ಹಾಲಿಗೆ ಬೆಲೆಯನ್ನು ನಿಗದಿ ಪಡಿಸಿಬೇಕು. ಆ ಮೂಲಕ ಸರ್ಕಾರ ಟನ್ ಕಬ್ಬಿಗೆ 4, 500ರೂ, ಹಾಲಿಗೆ 40 ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಸರ್ಕಾರ ತಮನ್ನು ಭಿಕ್ಷುಕರ ರೀತಿ ಕಾಣುತ್ತಿದೆ. ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂಧಿಸುವ ಕೆಲಸ ಮಾಡುತ್ತಿಲ್ಲ. ರೈತರನ್ನು ಕೀಳಾಗಿ ಕಂಡು ಬರಿ ಸುಳ್ಳು ಭರವಸೆ ಕೊಡುತ್ತಿದ್ದಾರೆ. ತಕ್ಷಣವೇ ನಮ್ಮ ಬೇಡಿಕೆ ಈಡೇರಿಸುವ ಕೆಲಸವನ್ನ ಸರ್ಕಾರ ಮಾಡಬೇಕು. ಇಲ್ಲ ಎಂದರೇ ನಮ್ಮ ಹೋರಾಟ ಮುಂದಿನ ದಿನಗಳಲ್ಲಿ ತೀವ್ರಗೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಎಚ್ಚರಿಕೆ ನೀಡಿದ್ದಾರೆ.
ಮಾತು ತಪ್ಪಿದ ಸಿಎಂ ಎಂದು ಧಿಕ್ಕಾರ
ಕಳೆದ 36 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ರೈತರು ನಿರಂತವಾಗಿ ಭಾಗಿಯಾಗುತ್ತಿದ್ದು, ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಯಾವುದೇ ಕಾರಣಕ್ಕೂ ನಾವು ಹೋರಾಟವನ್ನು ಹಿಂಪಡೆಯೋದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ಸರ್ಕಾರ ಅಣುಕು ಶವಯಾತ್ರೆ ನಡೆಸಿದ್ದ ರೈತರು, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಮಾಡಿದ್ದರು. ಈ ವೇಳೆ ಮಾತು ತಪ್ಪಿದ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದರು.
ಸಿಹಿ ಸುದ್ದಿ ಕೊಡ್ತೀವಿ ಅಂತ ಹೇಳುತ್ತಲೇ ಮೋಸ
ಸರ್ಕಾರದ ನಮ್ಮ ಬೇಡಿಕೆ ಈಡೇಸಿರೋವರೆಗೂ ಪ್ರತಿಭಟನೆ ಕೈಬಿಡೋದಿಲ್ಲ ಅಂತ ಹಠಕ್ಕೆ ಬಿದ್ದಿರೋ ರೈತರು, ರಕ್ತದಾನ ಮಾಡೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆ ಸ್ಥಳದಲ್ಲೇ ರಕ್ತದಾನ ಶಿಬಿರ ಆಯೋಜಿಸಿ ನೂರಾರು ರೈತರು ರಕ್ತದಾನದಲ್ಲಿ ಭಾಗಿಯಾಗಿದ್ದರು. ಸರ್ಕಾರ ಇವತ್ತು, ನಾಳೆ ಸಿಹಿ ಸುದ್ದಿ ಕೊಡ್ತೀವಿ ಅಂತ ಹೇಳುತ್ತಲೇ ಬರುತ್ತಿದೆ. ಆದರೆ ನಾವು ಕೇಳಿತ್ತಿರೋದೆ ಬೇರೆ, ಸರ್ಕಾರ ನೀಡುತ್ತಿರೋದೆ ಬೇರೆ.
ಸರ್ಕಾರಕ್ಕೆ ಹಣ ಕೊರತೆ ಇದ್ದರೇ, ನಮ್ಮ ಕಬ್ಬು ಹಣದಲ್ಲೇ 50 ರೂಪಾಯಿಗಳನ್ನು ಕಡಿತ ಮಾಡಿಕೊಳ್ಳಿ. ಕಬ್ಬಿಗೆ ವೈಜ್ಞಾನಿಕವಾಗಿ ಎಸ್ಎಪಿ ದರ ನಿಗದಿ ಮಾಡಿ ಬೆಲೆ ಹೆಚ್ಚಳ ಮಾಡ್ಬೇಕು. ನಾವು ರೈತರು ದೇಶಕ್ಕೆ ಅನ್ನ ಮಾತ್ರ ನೀಡೋದಿಲ್ಲ, ರಕ್ತವನ್ನು ನೀಡಲು ಸಿದ್ಧ ಅಂತ ರಕ್ತದಾನದಲ್ಲಿ ಭಾಗಿಯಾಗಿದ್ದೇವೆ ಅಂತ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ