• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MP Sumalatha: ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಬಾಲಕಿಗೆ ನ್ಯಾಯ ಕೊಡಿಸಿ; ಕಣ್ಣೀರು ಹಾಕಿ ಸಿಎಂ ಬಳಿ ಸುಮಲತಾ ಮನವಿ

MP Sumalatha: ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಬಾಲಕಿಗೆ ನ್ಯಾಯ ಕೊಡಿಸಿ; ಕಣ್ಣೀರು ಹಾಕಿ ಸಿಎಂ ಬಳಿ ಸುಮಲತಾ ಮನವಿ

ಸಂಸದೆ ಸುಮಲತಾ

ಸಂಸದೆ ಸುಮಲತಾ

ಮಳವಳ್ಳಿಯ ಬಾಲಕಿ ದಿವ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • , India
  • Share this:

ಮಳವಳ್ಳಿಯ ಬಾಲಕಿ ದಿವ್ಯಾ (Divya) ಅತ್ಯಾಚಾರ ಮತ್ತು ಕೊಲೆ ಪ್ರಕರಣ (Rape And Murder Case) ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಬಗ್ಗೆ ಮಂಡ್ಯ ಜಿಲ್ಲೆ ಕೆ ಆರ್​ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ  ಸಂಸದೆ ಸುಮಲತಾ ಅಂಬರೀಶ್ (MP Sumalatha Ambarish)​ ಮಾತಾಡಿದ್ದಾರೆ. ಪುಟ್ಟ ಬಾಲಕಿ ಸಾವು ನನಗೆ ತೀವ್ರವಾದ ನೋವುಂಟು ಮಾಡಿದೆ ಎಂದು ಸುಮಲತಾ ಭಾವುಕರಾದ್ರು. ನಾನು ಒಬ್ಬ ತಾಯಿಯಾಗಿ, ಹೆಣ್ಣಾಗಿ ಬಾಲಕಿಗೆ ಆದ ಸ್ಥಿತಿ ಕಂಡು ತುಂಬಾ ಬೇಸರವಾಗಿದೆ. ಮೃತ ಬಾಲಕಿ ಸಾವಿಗೆ ನ್ಯಾಯ (Justice) ಸಿಗಲೇಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ. 


ಸಿಎಂ ಅವರೇ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು


ಮಳವಳ್ಳಿಯ ಬಾಲಕಿ ದಿವ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವು ಯಾರು ಭರಿಸಲು ಆಗಲ್ಲ. ಪೋಕ್ಸೋ ಅಥವಾ ಯಾವುದಾದರೂ ಸೆಕ್ಷನ್ ಹಾಕಿ. ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಕಠಿಣ ಶಿಕ್ಷೆ ವಿಧಿಸುವ ಜವಾಬ್ದಾರಿ ಸಿಎಂ ಹೊತ್ತು ಕೊಳ್ಳಬೇಕು ಎಂದು ಗದ್ಗದಿತರಾಗಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.


ಇದನ್ನೂ ಓದಿ: Murugha Mutt: ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ; ಬಸವಪ್ರಭು ಶ್ರೀಗಳಿಗೆ ಪೂಜಾ ಕೈಂಕರ್ಯದ ಉಸ್ತುವಾರಿ


ಮಳವಳ್ಳಿಯಲ್ಲಿ ಬಾಲಕಿ ಮೇಲೆ‌ ಅತ್ಯಾಚಾರವೆಸಗಿ ಕೊಲೆಗೈದಿರುವ ಘಟನೆ ಅಮಾನವೀಯವಾಗಿದೆ. ಮಾನವೀಯತೆ ಇರೋ ಯಾರೂ ಈ ರೀತಿ ನಡೆದುಕೊಳ್ಳಲ್ಲ. ಈ ಘಟನೆಯನ್ನ ನಾನು ತೀವ್ರ ರೀತಿಯಲ್ಲಿ ಖಂಡಿಸ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇನ್ನು ಇದೇ ವೇಳೆ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಸಹ ಘೋಷಣೆ ಮಾಡಿದ್ದಾರೆ.


ಆರೋಪಿಗೆ ತಕ್ಕ ಶಿಕ್ಷೆಯಾಗಲಿ

 ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಟ್ಯೂಷನ್​ ಮಾಸ್ಟರ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಾಲಕಿ ಕುಟುಂಬಸ್ಥರು ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ​




ನಿಖಿಲ್ ಕುಮಾರಸ್ವಾಮಿ ಭೇಟಿ


ಮೃತ ಬಾಲಕಿ ಮನೆಗೆ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮಗಳನ್ನು ಕಳೆದುಕೊಂಡು ಕುಗ್ಗಿರುವ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಇದೇ ವೇಳೆ ಬಾಲಕಿ ಪೋಷಕರು ನಿಖಿಲ್ ಕುಮಾರಸ್ವಾಮಿ ಕಾಲಿಗೆ ಬಿದ್ದು ಗೋಳಾಡಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವಂತೆ ಕೇಳಿಕೊಂಡಿದ್ದಾರೆ.


ಅತ್ಯಾಚಾರವೆಸಗಿ ಕೊಂದವರಿಗೆ ಗಲ್ಲುಶಿಕ್ಷೆ ವಿಧಿಸಬೇಕು


ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ನಿಖಿಲ್​ ಕುಮಾರಸ್ವಾಮಿ, ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದವರಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ವಿಚಾರವಾಗಿ ಅಸೆಂಬ್ಲಿಯಲ್ಲಿ ಮಾತನಾಡ್ತುತ್ತೇನೆ. ಕೇಂದ್ರ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಕ್ರಮವಹಿಸಬೇಕು ಎಂದು ಹೇಳಿದ್ದರು.


ಇದನ್ನೂ ಓದಿ: Sri Ramulu Tweet: ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್


ಟ್ಯೂಷನ್​ಗೆ ತೆರಳಿದ್ದ ಬಾಲಕಿ ಶವವಾಗಿ ಪತ್ತೆ


ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​ನಲ್ಲಿ ಬಾಲಕಿ ಶವಪತ್ತೆಯಾಗಿತ್ತು. ದಿವ್ಯಾ ಮಧ್ಯಾಹ್ನ ಟ್ಯೂಷನ್​ಗೆ ತೆರಳಿದ್ದಳು. ಎಷ್ಟು ಸಮಯ ಕಳೆದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್​​ನಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಶವಾಗಾರಕ್ಕೆ ರವಾನಿಸಿದ್ದರು. ಇದರ ನಡುವೆ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆಗೈದಿರುವ ಬಗ್ಗೆ ಪೋಷಕರು ಆರೋಪ ಮಾಡಿದ್ದರು. ಸದ್ಯ ಈಗ ಪೊಲೀಸರ ವಿಚಾರಣೆ ವೇಳೆ ಸತ್ಯ ಬಯಲಾಗಿದೆ.


ಬಾಲಕಿಯನ್ನ ಕೊಂದು ಸಂಪಿನಲ್ಲಿ ಎಸೆಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿದ್ದರು. ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದರು.



Published by:ಪಾವನ ಎಚ್ ಎಸ್
First published: