ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ

ಮಂಡ್ಯ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವೂ ಇದೆ. ಪ್ರಸನ್ನ ಅವರು ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಅವರ ಬದಲು ಪಕ್ಷದ ಕಾರ್ಯಕರ್ತರಿಗೆ ಅಥವಾ ಅಧ್ಯಕ್ಷರಿಗೆ ಅವಕಾಶ ನೀಡಿ. ಪಕ್ಷದ ಜಿಲ್ಲಾ ಸಮಿತಿ  ಸೂಚಿಸಿದ ಹೆಸರನ್ನು ಪರಿಗಣಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್​​​ ಅವರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.

G Hareeshkumar | news18-kannada
Updated:September 13, 2019, 2:57 PM IST
ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ
sಸಿಎಂ ಬಿ ಎಸ್ ಯಡಿಯೂರಪ್ಪ
  • Share this:
ಮಂಡ್ಯ(ಸೆ. 13): ಬಿಜೆಪಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೆಲ ಆರೋಪಗಳಿಗೆ ಪುಷ್ಟಿ ನೀಡುವಂತೆ ಮಂಡ್ಯದ ಸ್ಥಳೀಯ ಬಿಜೆಪಿ ಮುಖಂಡರು ಹಾಲು ಒಕ್ಕೂಟದ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮನ್​ಮುಲ್​​ಗೆ ಸಿಎಂ ನಾಮ ನಿರ್ದೇಶನ ಮಾಡಿರುವ ಹೆಸರನ್ನು ತಡೆ ಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.

ಮಂಡ್ಯದ ಮನಮುಲ್​​​​​ಗೆ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರು ತಮ್ಮ ಬೆಂಬಲಿಗ ಪ್ರಸನ್ನ ಎಂಬುವರಿಗೆ ನಾಮ ನಿರ್ದೇಶನ  ಮಾಡುವಂತೆ ಸಿಎಂ ಬಿಎಸ್​ವೈ ಗೆ ಮನವಿ ಮಾಡಿದ್ದರು. ಸಿಎಂ ಬಿಎಸ್​ವೈ ಅವರು ಸೆಪ್ಟೆಂಬರ್​ 11 (ಬುಧವಾರ) ಪ್ರಸನ್ನ ಅವರ ಹೆಸರನ್ನು ಅನುಮೋದನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮಂಡ್ಯ ಬಿಜೆಪಿಯಲ್ಲಿ ಅಸಮದಾನದ ಹೊಗೆ ಭುಗಿಲೆದ್ದಿದೆ ಎನ್ನಲಾಗಿದೆ.

latter
ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರು


ಮಂಡ್ಯ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವೂ ಇದೆ. ಪ್ರಸನ್ನ ಅವರು ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಅವರ ಬದಲು ಪಕ್ಷದ ಕಾರ್ಯಕರ್ತರಿಗೆ ಅಥವಾ ಅಧ್ಯಕ್ಷರಿಗೆ ಅವಕಾಶ ನೀಡಿ. ಪಕ್ಷದ ಜಿಲ್ಲಾ ಸಮಿತಿ  ಸೂಚಿಸಿದ ಹೆಸರನ್ನು ಪರಿಗಣಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್​​​ ಅವರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.

ಕಟೀಲ್​​ ವಿರುದ್ದಸಿಎಂ ಬಿಎಸ್​ ವೈ  ಗರಂ ಆಗಿದ್ದರು

ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಎಸ್ ಯಡಿಯೂರಪ್ಪ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವಂತಿದೆ. ಯಡಿಯೂರಪ್ಪ ಅವರಿಗೆ ಅಂಕೆ ಹಾಕಲೆಂದೇ ಕಟೀಲ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ ಎಂಬ ಮಾತುಗಳಿವೆ. ಕಟೀಲ್ ವಿರುದ್ಧ ಬಿಎಸ್​ವೈ ಕೆಂಡಕಾರಿದ ಘಟನೆಗಳು ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದ್ದವು. ನಿಗಮ ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಮೂಗುದಾರ ಹಾಕಲು ಕಟೀಲ್ ಪ್ರಯತ್ನಿಸಿದ್ದರು. ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಳ್ಳುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬೇಡಿ. ಪಕ್ಷದ ಗಮನಕ್ಕೆ ತನ್ನಿ ಎಂದು ಕಟೀಲ್ ಅವರು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯೊಂದರಲ್ಲಿ ಸಿಎಂಗೆ ಸೂಚಿಸಿದ್ದರು.

ಇದು ಯಡಿಯೂರಪ್ಪ ಅವರಿಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ. ಎಲ್ಲವನ್ನೂ ಪಕ್ಷದ ಗಮನಕ್ಕೆ ತಂದು ನೇಮಕ ಮಾಡಲು ಆಗಲ್ಲ. ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತರು ಬಹಳ ಜನ ಇದ್ದಾರೆ. ಅವರನ್ನು ನಿಗಮ ಮಂಡಳಿಗಳ ನೇಮಕಕ್ಕೆ ಪರಿಗಣಿಸಬೇಕಾಗುತ್ತೆ ಎಂದು ಬಿಎಸ್​ವೈ ತಿರುಗೇಟು ನೀಡಿದ್ದರು.ಇದನ್ನೂ ಓದಿ :  ಬಿಜೆಪಿ ಪಕ್ಷ ಒಕ್ಕಲಿಗ ಸಮುದಾಯದ ವಿರುದ್ದವಾಗಿಲ್ಲ; ಕಾನೂನು ಸಚಿವ ಮಾಧುಸ್ವಾಮಿ

ಹಾಗೆಯೇ, ಪಕ್ಷದ ಪದಾಧಿಕಾರಿಗಳ ನೇಮಕತಾತಿ ಮಾಡುವಾಗ ಅದನ್ನು ತಮ್ಮ ಗಮನಕ್ಕೂ ತನ್ನಿ ಎಂದೂ ಬಿಎಸ್​ವೈ ತಾಕೀತು ಮಾಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಹೇಶ್ ತೆಂಗಿನಕಾಯಿ ನೇಮಕ ಮಾಡಿದ್ದಕ್ಕೆ ಗರಂ ಆಗಿದ್ದ ಬಿಎಸ್ ಯಡಿಯೂರಪ್ಪ, ಯಾರ ಗಮನಕ್ಕೂ ಬಾರದೇ ಪ್ರಧಾನ ಕಾರ್ಯದರ್ಶಿ ಹೇಗೆ ಮಾಡಿದಿರಿ ಎಂದು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಡ್ಯದ ಹಾಲು ಒಕ್ಕೂಟ ಅಧ್ಯಕ್ಷರ ನಾಮ ನಿರ್ದೇಶನದ ವಿಚಾರದಲ್ಲಿ ಮಂಡ್ಯದ ಬಿಜೆಪಿ ನಾಯಕರು ಯಡಿಯೂರಪ್ಪ ಬದಲು ನೇರವಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಪರ್ಕ ಮಾಡಿರುವುದು ಅಚ್ಚರಿ ಮೂಡಿಸಿದೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading