• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಾಳೆ ವಿಶ್ವಪ್ರಸಿದ್ದ ಮೇಲುಕೋಟೆ ವೈರ ಮುಡಿ ಉತ್ಸವ; ಸರಳ, ಸಾಂಪ್ರದಾಯಿಕ ಆಚರಣೆಗೆ ಸಿದ್ಧತೆ

ನಾಳೆ ವಿಶ್ವಪ್ರಸಿದ್ದ ಮೇಲುಕೋಟೆ ವೈರ ಮುಡಿ ಉತ್ಸವ; ಸರಳ, ಸಾಂಪ್ರದಾಯಿಕ ಆಚರಣೆಗೆ ಸಿದ್ಧತೆ

 ಕೋವಿಡ್ 19 ಆತಂಕದ ಹಿನ್ನೆಲೆ ಭಕ್ತರ ಹೆಚ್ಚಿನ ಜನಜಂಗುಳಿ ಸೇರದಂತೆ‌ ನೋಡಿ ಕೊಳ್ಳಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಕೋವಿಡ್ 19 ಆತಂಕದ ಹಿನ್ನೆಲೆ ಭಕ್ತರ ಹೆಚ್ಚಿನ ಜನಜಂಗುಳಿ ಸೇರದಂತೆ‌ ನೋಡಿ ಕೊಳ್ಳಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಕೋವಿಡ್ 19 ಆತಂಕದ ಹಿನ್ನೆಲೆ ಭಕ್ತರ ಹೆಚ್ಚಿನ ಜನಜಂಗುಳಿ ಸೇರದಂತೆ‌ ನೋಡಿ ಕೊಳ್ಳಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

  • Share this:

ಮಂಡ್ಯ (ಮಾ. 23):  ಕೊರೋನಾ ಎರಡನೇ ಅಲೆಯ ಆತಂಕದ ನಡುವೆ ನಾಳೆ  ವಿಶ್ವಪ್ರಸಿದ್ದ ಮೇಲುಕೋಟೆಯ ವೈರ ಮುಡಿ ಉತ್ಸವ ಜರುಗಲಿದೆ. ಕೊರೋನಾ ಆತಂಕದ  ಕಾರಣದಿಂದ   ಜಿಲ್ಲಾಡಳಿತ ಈ‌ ಬಾರಿ ವೈರಮುಡಿ ಉತ್ಸವವನ್ನು ಸಾಂಪ್ರದಾಯಿಕವಾಗಿ ಮತ್ತು ಬಹಳ ಸರಳವಾಗಿ ಆಚರಿಸಲು ನಿರ್ಧರಿಸಿದೆ. ಇದಕ್ಕಾಗಿ ಮೇಲುಕೋಟೆಯಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ಈ ಬಾರಿ ಭಕ್ತರಿಲ್ಲದೆ ವೈರಮುಡಿ ಉತ್ಸವ ನಡೆಯಲಿದೆ.‌  ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದು, ಉತ್ಸವದಲ್ಲಿ ಕೇವಲ 200 ಜನರಿಗಷ್ಟೆ ದೇವಾಲಯದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲಾಡಳಿತ ಸರಳ ವೈರಮುಡಿ ಉತ್ಸವ ಆಚರಣೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ಹೊರ ಜಿಲ್ಲೆಯ ಮತ್ತು ಹೊರ ರಾಜ್ಯದ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ  ಈ ಬಾರಿ ಪ್ರವೇಶ ನಿರ್ಬಂಧಿಸಿದ್ದು, ಸ್ಥ ಳೀಯ ಸಾರ್ವಜನಿಕರು ಹಾಗೂ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.


ದೇಗುಲಕ್ಕೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರಕಾಯ್ದು ಕೊಳ್ಳಲು ಸೂಚನೆ ನೀಡಲಾಗಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ತರಲು ಸೂಚನೆ ನೀಡಲಾಗಿದೆ. ಅಲ್ಲದೇ, ಈ ಬಾರಿಯ ವೈರಮುಡಿ ಉತ್ಸವ ಕೂಡ ಕೇವಲ 3 ಗಂಟೆಯಲ್ಲಿ ಮುಗಿಸುವಂತೆ ನಿರ್ದೇಶನ‌ ನೀಡಿದ್ದು, ರಾತ್ರಿ 8-30 ಕ್ಕೆ ಆರಂಭಗೊಂಡು ಮಧ್ಯರಾತ್ರಿ12 ಗಂಟೆಗೆ ಮುಗಿಸುವಂತೆ ಅರ್ಚಕರಿಗೆ ಸೂಚನೆ‌ ನೀಡಲಾಗಿದೆ. ನಾಳಿನ ಪೂಜಾ ಕೈಂಕರ್ಯ ಕೂಡ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ನಡೆಯಲಿರುವುದಾಗಿ ಜಿಲ್ಲಾಧಿಕಾರಿ ಡಾ.ಅಶ್ಚಥಿ ತಿಳಿಸಿದ್ದಾರೆ.


ಇನ್ನು ಕೋವಿಡ್ 19 ಆತಂಕದ ಹಿನ್ನೆಲೆ ಭಕ್ತರ ಹೆಚ್ಚಿನ ಜನಜಂಗುಳಿ ಸೇರದಂತೆ‌ ನೋಡಿ ಕೊಳ್ಳಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗೆಂದು 4ಡಿವೈಎಸ್​ಪಿ,  16ಸಿಪಿಐ ,31 ಪಿಎಸ್​ಐ, 100 ಎಎಸ್​ಐ, 432 ಕಾನ್ಸ್ಟೇಬಲ್​ ಸೇರಿದಂತೆ ಒಟ್ಟು 650 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.  ಜೊತೆಗೆ 2 ಕೆಎಸ್​ಆರ್​ಪಿ, 9 ಡಿಆರ್​ ವ್ಯಾನ್, ಕ್ಯೂಆರ್​​ 2, ನಿಯೋಜಿಸಲಾಗಿದೆ. ಇದರ ಜೊತೆಗೆ ದೇವಸ್ಥಾನದ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿ,  ದೇಗುಲದ ಪ್ರವೇ ಶಕ್ಕೆ ಪಾಸ್ ವಿತರಣೆ ಮಾಡಲಾಗಿದೆ.


ಇದನ್ನು ಓದಿ: ಕೊರೋನಾ ಲಸಿಕೆ ಪಡೆದ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ


ಮೇಲುಕೋಟೆಯ ಎಲ್ಲಾ ಸಂಪರ್ಕ ರಸ್ತೆಯನ್ನು ಪೊಲೀಸ ರು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ.  ಇದರ ಜೊತೆಗೆ ಮೇಲುಕೋ ಟೆಗೆ ತೆರಳುವ ಪ್ರತಿಯೊಬ್ಬರ ಜನರ ಆರೋಗ್ಯ ತಪಾ ಸಣೆ ಮಾಡಲು ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗ ಳನ್ನು‌ ಕೂಡ ನಿಯೋಜಿಸಲಾಗಿದೆ .ಜೊತೆಗೆ ಮೇಲುಕೋಟೆಯ ಪ್ರವೇಶ ದ್ವಾರದಲ್ಲಿ ಕಟ್ಟು ನಿಟ್ಟಿ ಭದ್ರತೆಯನ್ನು ತಾಲೂಕು ಆಡಳಿತದ ವತಿಯಿಂದ ಕೈಗೊಳ್ಳಲಾಗಿದ್ದು,  ಪಾಂಡವಪುರ ತಹಶೀಲ್ದಾರ್ ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆ  ಪರಿಶೀಲನೆ ನಡೆಸಿದ್ದಾರೆ. ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆಗೆ  ಬಣ್ಣ ಬಣ್ಣ ವಿದ್ಯುತ್ ದೀಪದ ಅಲಂಕಾರ ಮಾಡಿದ್ದು ಮೇಲುಕೋಟೆ ಇದೀಗ ಬಣ್ಣದ ದೀಪದ ಅಲಂಕಾರ ದಲ್ಲಿ ಕಂಗೊಳಿಸ್ತಿದೆ. ಮೇಲುಕೋಟೆಯ ಪ್ರಮುಖ ರಾಜಬೀದಿ,ಕಲ್ಯಾಣಿ, ಸೇರಿದಂತೆ ಯೋಗ ನರಸಿಂಹ ಬೆಟ್ಟಕ್ಕೆ ಕೂಡ ಬಣ್ಣದ ವಿದ್ಯುತ್  ದೀಪದ ಅಲಂಕಾರ ಮಾಡಲಾಗಿದೆ.


ರಾಜ್ಯದಲ್ಲಿ ಕೊರೋನಾ ಎರಡನೆ ಅಲೆಯ ಭೀತಿಯ ನಡುವೆ ಕೂಡ ಮಂಡ್ಯ ಜಿಲ್ಲಾಡಳಿತ ಸಾಕಷ್ಟು ಅಗತ್ಯ  ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವಿಶ್ವ ಪ್ರಸಿದ್ದ ಮೇ ಲುಕೋಟೆಯ ವೈರಮುಡಿ ಉತ್ಸವವನ್ನ ನಡೆಸಲು ಸಿದ್ದತೆ ಮಾಡಿಕೊಂಡಿದೆ‌.

First published: