ಬೆಂಗಳೂರು (ಜೂ 24): ಮಂಡ್ಯದಲ್ಲಿ 5 ರೂಪಾಯಿ ಡಾಕ್ಟರ್ (Doctor) ಎಂದೇ ಖಾತ್ಯರಾಗಿರೋ ಡಾ. ಶಂಕರೇಗೌಡ (Shankaregowda) ಅವರು 1 ತಿಂಗಳ ಹಿಂದೆ ಹೃದಯಾಘಾತಕ್ಕೆ (Heart attack) ಒಳಗಾಗಿದ್ರು. ಇದೀಗ ಅವರ ಆರೋಗ್ಯ ಸುಧಾರಿಸಿದೆ. ಹೀಗಾಗಿ ಇವತ್ತು ಫೋರ್ಟಿಸ್ ಆಸ್ಪತ್ರೆಯಿಂದ ಡಾ. ಶಂಕರೇಗೌಡ ಅವರನ್ನು ಡಿಸ್ಚಾರ್ಜ್ (Discharged) ಮಾಡಲಾಯಿತು. ಡಿಸ್ಚಾರ್ಜ್ ಬಳಿಕ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ (Press Meet) ಮಾತಾಡಿದ ಅವರು, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ (Hospital) ದಾಖಲಾಗಿದ್ದೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗವಾಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ವೈದ್ಯರಿಗೆ ಧನ್ಯವಾದ ಎಂದ್ರು ಶಂಕರೇಗೌಡ
ಫೋರ್ಟಿಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತಾಡಿದ ಡಾ. ಶಂಕರೇಗೌಡ, ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದರು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು ಎಂದ್ರು. ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿಯಾಗಿರುತ್ತೇನೆ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು , ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರೆಸುವುದಾಗಿದೆ ಡಾ.ಶಂಕರೇಗೌಡ ಹೇಳಿದ್ದಾರೆ.
42 ವರ್ಷದ ನನ್ನ ಸೇವೆ ನನಗೆ ಆತ್ಮತೃಪ್ತಿ ನೀಡಿದೆ
ನಾನು ವೃತ್ತಿ ಆರಂಭಿಸಿ 42 ವರ್ಷ ಕಳೆದಿದೆ. ಅಂದಿನಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ. ಮುಂದೆಯೂ ಕೂಡ ಈ ವೃತ್ತಿ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಡಾ ಶಂಕರೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: Pregnant: ಒಂದೇ ಆಸ್ಪತ್ರೆಯ 14 ನರ್ಸ್ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋಸ್
ಕೃಷಿಕನಾಗಿಯೂ ಕೆಲಸ ಮಾಡ್ತಿದ್ದೇನೆ
ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ. 2010 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ಆದರೆ ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಟ್ಟಿಲ್ಲ ಎಂದು ಹೇಳಿದರು. ಹಾರ್ಟ್ ಅಟ್ಯಾಕ್ಗೂ ಮುನ್ನ ನಾನು 200 ಜನರಿಗೆ ಚಿಕಿತ್ಸೆ ನೀಡಿದ್ದೆ ಅದು ಸಂತೋಷ ನೀಡಿದೆ ಎಂದರು. ಈಗ ನಾನು ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದು, ಕೆಲ ದಿನಗಳ ಬಳಿಕ ಮತ್ತೆ ನನ್ನ ಸೇವೆ ಹಾಗೂ ಕೃಷಿ ಎರಡನ್ನು ಮುಂದಿವರೆಸಿಕೊಂಡು ಹೋಗುವುದಾಗಿ ಡಾ ಶಂಕರೇಗೌಡ ಅವರು ಹೇಳಿದ್ರು.
ಕಳೆದ ತಿಂಗಳು ಮೇ 24 ರಂದು ಡಾ.ಶಂಕರೇಗೌಡ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗವಾಣೆ ಮಾಡಿದರು. ಇದೀಗ ಡಾ. ಶಂಕರೇಗೌಡ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: New Rules: ಜನಸಾಮಾನ್ಯರೇ ಗಮನಿಸಿ, ಜುಲೈ 1ರಿಂದ ಈ ಎಲ್ಲಾ ರೂಲ್ಸ್ ಚೇಂಜ್ ಆಗುತ್ತೆ!
ಸಕ್ಕರೆ ನಾಡಲ್ಲಿ ಫುಲ್ ಫೇಮಸ್
ಸಕ್ಕರೆ ಜಿಲ್ಲೆಯಲ್ಲಿ ಚರ್ಮ ರೋಗ ವೈದ್ಯ ಶಂಕರೇಗೌಡ್ರು ಫುಲ್ ಫೇಮಸ್ ಆಗಿದ್ದಾರೆ. ಇವರು ಕೇವಲ ತಮ್ಮ ಚಿಕಿತ್ಸೆಯ ಶುಲ್ಕವಾಗಿ ತಮ್ಮ ಮಂಡ್ಯದಲ್ಲಿರುವ ತಾರಾ ಕ್ಲೀನಿಕ್ ನಲ್ಲಿ 5 ರುಪಾಯಿ ಪಡೆದ್ರೆ ತಮ್ಮ ಊರಾದ ಶಿವಳ್ಳಿಗೆ ಬಂದ ರೋಗಿಗಳಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿಯೇ ಇವ್ರು ಮಂಡ್ಯ ಜಿಲ್ಲೆಯಲ್ಲಿ ಐದ್ರುಪಾಯಿ ಡಾಕ್ಟ್ರು ಅಂತಲೇ ಪ್ರಸಿದ್ದಿ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ