HOME » NEWS » State » MANDAY KIKKERI POLICE INVESTIGATE GRAND SON KILLED HIS GRANDPA BY ACCIDENT CASE RGM SESR

Crime: ಸಿನೀಮಿಯ ಶೈಲಿಯಲ್ಲಿ ತಾತನ ಸಾಯಿಸಿದ ಮೊಮ್ಮಗ; ಪ್ರಕರಣ ಭೇದಿಸಿದ ಕಿಕ್ಕೇರಿ ಪೊಲೀಸರಿಗೆ ಪ್ರಶಂಸೆ

ತಾತ  ಸ್ನೇಹಿತರ ಜೊತೆ ಸೇರಿ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕಾರ್ ನಿಂದ ಗುದ್ದಿಸಿ ಅಪಘಾತ ಎಂಬಂತೆ ಬಿಂಬಿಸಿರುವುದಾಗಿ ಮೊಮ್ಮಗ ತಪ್ಪೊಪ್ಪಿಕೊಂಡಿದ್ದಾನೆ

news18-kannada
Updated:March 24, 2021, 6:16 PM IST
Crime: ಸಿನೀಮಿಯ ಶೈಲಿಯಲ್ಲಿ ತಾತನ ಸಾಯಿಸಿದ ಮೊಮ್ಮಗ; ಪ್ರಕರಣ ಭೇದಿಸಿದ ಕಿಕ್ಕೇರಿ ಪೊಲೀಸರಿಗೆ ಪ್ರಶಂಸೆ
ಕಿಕ್ಕೇರಿ ಪೊಲೀಸರ ಕಾರ್ಯಾಚರಣೆ
  • Share this:
ಮಂಡ್ಯ (ಮಾ. 24): ಜಮೀನಿನ ಆಸ್ತಿ ವಿಚಾರದಲ್ಲಿ ತಾತನನ್ನು ಕಾರ್​ನಿಂದ ಗುದ್ದಿ ಸಾಯಿಸಿ  ಅದನ್ನು ಅಪಘಾತವೆಂದು ಬಿಂಬಿಸಲು ಹೋಗಿದ್ದ ಮೊಮ್ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಗೆ ಸಹಾಯ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಜಿಲ್ಲೆಯ ಕಿಕ್ಕೇರಿ ಪೊಲೀಸರು ಅಪಘಾತದಲ್ಲಿ ಸಾವನ್ನಪ್ಪಿದ ತಾತನೋರ್ವ ಕೊಲೆಯ ರಹಸ್ಯವನ್ನು ಬಯಲು ಮಾಡಿದ್ದಾರೆ. ಮಾರ್ಚ್ 20ರಂದು ಜಿಲ್ಲೆಯ ಕೆಆರ್​ ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿ  ಇಲ್ಲಿನ ನಿವಾಸಿ ಈರೇಗೌಡ ಎಂಬುವವರು ಸಾವನ್ನಪ್ಪಿದರು. ವೃದ್ದ ಸೈಕಲ್ ನಲ್ಲಿ ಬರುತ್ತಿದ್ದ ವೇಳೆ ಕಾರೊಂದು ಗುದ್ದಿ ಅಪಘಾತ ಮಾಡಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈರೇಗೌಡ(60) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಕುರಿತಾಗಿ ಕಿಕ್ಕೇರಿ ಪೊಲೀಸರು ಅಪಘಾತ ಪ್ರಕರಣವೆಂದು  ಕಾರ್ ಚಾಲಕನ ವಿರುದ್ದ ಪ್ರಕರ ದಾಖಲಿಸಿಕೊಂಡಿದ್ದರು. ಸಂಬಂಧಿಕರು ಸೇರಿದಂತೆ ಊರವರು ಕೂಡ ಇದನ್ನು ಅಪಘಾತವೆಂದೆ ನಂಬಿ ವೃದ್ದ ಈರೇಗೌಡನ  ಅಂತ್ಯ ಸಂಸ್ಕಾರ ಮುಗಿಸಿದ್ದರು.

ಇನ್ನು ತಾತನ  ಅಂತ್ಯ ಸಂಸ್ಕಾರದ ಬಳಿಕ ಮನೆಯಲ್ಲಿ ಅಪಘಾತ ವಿಮೆ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆಯುವ ವೇಳೆ ಕುಟುಂಬದಲ್ಲಿ ಸ್ವಲ್ಪ ಕಲಹವಾಗಿದೆ. ಅಲ್ಲದೇ ಮೊಮ್ಮಗಳಿಗೆ ಈ ವಿಚಾರದಲ್ಲಿ ತಾತನ ಸಾವಿನ‌ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಇದೇ ಹಿನ್ನಲೆ ತಮ್ಮ ತಾತನ ಸಾವಿನ ತನಿಖೆ ನಡೆಸುವಂತೆ ಕಿಕ್ಕೇರಿ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದಳು. ಮೊಮ್ಮಗಳ ಹೇಳಿಕೆ ಆಧಾರಿಸಿ ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಷಯ ಬಹಿರಂಗವಾಗಿದೆ.

ಇದನ್ನು ಓದಿ: ಸಿದ್ದರಾಮಯ್ಯ ವಿಶೇಷ ಭೋಜಕೂಟದಲ್ಲಿ ಗಮನಸೆಳೆದ ತನ್ವೀರ್​ ಸೇಠ್​​

ಈ ಪ್ರಕರಣದ ಕುರಿತು ತನಿಖೆಗೆ ಮುಂದಾದ ಪೊಲೀಸರು ಮೊಮ್ಮಗ ಪುನೀತನ ವಿಚಾರಣೆ ನಡೆಸಿದಾಗ, ಆತ ತಾನೇ ತಾತನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.  ಜಮೀನಿನ ಆಸ್ತಿ ವಿಚಾರದಲ್ಲಿ‌ ತನ್ನ ತಾತನೊಂದಿಗೆ ವೈ ಮನಸ್ಸಿದ್ದ ಕಾರಣಕ್ಕೆ ತಾತನನ್ನು ಮುಗಿಸುವ ನಿರ್ಧಾರ ಮಾಡಿದ್ದೆ.  ಮಾರ್ಚ್​ 20 ರಂದು ತಾತ  ಸ್ನೇಹಿತರ ಜೊತೆ ಸೇರಿ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕಾರ್ ನಿಂದ ಗುದ್ದಿಸಿ ಅಪಘಾತ ಎಂಬಂತೆ ಬಿಂಬಿಸಿದೆವು. ಅಪಘಾತದ ಬಳಿಕ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ತಾತ ಸವಾನ್ನಪ್ಪಿದರು ಎಂದು ಪೊಲೀಸರಿಗೆ ಘಟನೆ ವಿವರಿಸಿದ್ದಾನೆ

ಆರೋಪಿ ಮೊಮ್ಮಗ ಪುನೀತನ ಹೇಳಿಕೆ ಆಧರಿಸಿ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಿ  ಪ್ರಕರಣಕ್ಕೆ ಸಹಕರಿಸಿದ ಆತನ  ಸ್ನೇಹಿತರಾದ ಪ್ರದೀಪ, ಮನು, ಚಂದ್ರಕಾಂತನನ್ನು ಪೊಲೀಸರು ಬಂಧಿಸಿದ್ದಾರೆ. ಕಿಕ್ಕೇರಿ ಪೊಲೀಸರ ಕಾರ್ಯವನ್ನು ಪ್ರಶಂಸಿದ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಅಶ್ವಿನಿ ಸಿ ನಗದು ಬಹುಮಾನ ಘೋ ಷಿಸಿದ್ದಾರೆ. ಆಸ್ತಿಗಾಗಿ ತಾತನನ್ನೆ ಕೊಂದು ಅಪಘಾತ ವೆಂದು ಬಿಂಬಿಸಲು ಹೋಗಿ ಇದೀಗ ಮೊಮ್ಮಗ ಜೈಲು ಪಾಲಾಗಿರೋದು ವಿಪ ರ್ಯಾಸವೇ ಸರಿ.
Published by: Seema R
First published: March 24, 2021, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories