• Home
  • »
  • News
  • »
  • state
  • »
  • Gender Correction: ಅವಳಾದ ಅವನು, ಪಾಸ್​ಪೋರ್ಟ್​ ಲಿಂಗ ತಿದ್ದುಪಡಿ ಪ್ರಕ್ರಿಯೆಯೇ ವಿಚಿತ್ರ

Gender Correction: ಅವಳಾದ ಅವನು, ಪಾಸ್​ಪೋರ್ಟ್​ ಲಿಂಗ ತಿದ್ದುಪಡಿ ಪ್ರಕ್ರಿಯೆಯೇ ವಿಚಿತ್ರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲ ವರ್ಷಗಳಿಂದ ಲಿಂಗ ಬದಲಾವಣೆಗೆ ಒಳಗಾಗುತ್ತಿರುವ ಜನರು ಪಾಸ್​ಪೋರ್ಟ್​ ಸೇರಿದಂತೆ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಲಿಂಗ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡೋದು ಸಾಮಾನ್ಯವಾಗಿದೆ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರಿನ ಲಾಲ್​ಬಾಗ್ ರಸ್ತೆಯಲ್ಲಿರುವ ಪಾಸ್​​ಪೋರ್ಟ್​ ಸೇವಾ ಕಚೇರಿ (Regional Passport Office in Bengaluru) ಮೊದಲ ಲಿಂಗ ತಿದ್ದುಪಡಿ (Gender Correction) ಪ್ರಕರಣಕ್ಕೆ ಸಾಕ್ಷಿಯಾಗಿದೆ. 28 ವರ್ಷದ ಬೆಂಗಳೂರಿನ ನಿವಾಸಿ (Bengaluru Resident) ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷನಿಂದ ಮಹಿಳೆಯಾಗಿ (Male To Female) ಬದಲಿಯಾಗಿದ್ದರು. ಈ ಹಿನ್ನೆಲೆ ತಮ್ಮ ಪಾಸ್​ಪೋರ್ಟ್​​ನಲ್ಲಿ (Passport) ಲಿಂಗ ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ (Application) ಸಲ್ಲಿಸಿದ್ದರು. ಇದೀಗ ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪೊಲೀಸ್ ವೆರಿಫಿಕೇಶನ್ (Police Verification) ಮಾತ್ರ ಉಳಿದುಕೊಂಡಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಈ ಪ್ರಕ್ರಿಯೆ ಸಹ ಶೀಘ್ರದಲ್ಲಿಯೇ ಪೂರ್ಣವಾಗಲಿದೆ ಎಂದು ಪಾಸ್​ಪೋರ್ಟ್​ ಅಧಿಕಾರಿಗಳು ಹೇಳಿದ್ದಾರೆ.


ಕೆಲ ತಿಂಗಳ ಹಿಂದೆ ಲಾಲ್​ಬಾಗ್​ ರಸ್ತೆಯಲ್ಲಿ ಪಾಸ್​ಪೋರ್ಟ್​ ಸೇವಾ ಕೇಂದ್ರಕ್ಕೆ ಲಿಂಗ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಬೆಂಗಳೂರು ಪಶ್ಚಿಮ ಭಾಗದ ನಿವಾಸಿಯೊಬ್ಬರು ಪುರುಷನಿಂದ ಮಹಿಳೆಯಾಗಿ ಬದಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.


ಮೊದಲ ಪ್ರಕರಣ


ಕೆಲ ವರ್ಷಗಳಿಂದ ಲಿಂಗ ಬದಲಾವಣೆಗೆ ಒಳಗಾಗುತ್ತಿರುವ ಜನರು ಪಾಸ್​ಪೋರ್ಟ್​ ಸೇರಿದಂತೆ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಲಿಂಗ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡೋದು ಸಾಮಾನ್ಯವಾಗಿದೆ. ಆದ್ರೆ ನಮ್ಮ ಕಚೇರಿಗೆ ಬಂದಂತಹ ಮೊದಲ ಪ್ರಕರಣ ಇದಾಗಿದೆ. ಸಂತೋಷದಿಂದ ಅರ್ಜಿ ಸ್ವೀಕರಿಸಿದ ನಾವು ಪ್ರಕ್ರಿಯೆಯನ್ನು ಮುಗಿಸಿದ್ದೇವೆ ಎಂದು ಬೆಂಗಳೂರು ಪಾಸ್​ಪೋರ್ಟ್​ ಕಚೇರಿಯ ಹಿರಿಯ ಅಧಿಕಾರಿ ಕೃಷ್ಣ ಕೆ. ಹೇಳುತ್ತಾರೆ.


Man who turned woman how she corrected her gender in passport mrq
ಸಾಂದರ್ಭಿಕ ಚಿತ್ರ


ವೈದ್ಯರಿಂದ ಲಿಂಗ ದೃಢೀಕರಣ ಪತ್ರ ಸಲ್ಲಿಕೆ


ಬೆಂಗಳೂರಿನ ಪಾಸ್​ಪೋರ್ಟ್​ ಕಚೇರಿಯಲ್ಲಿ ಲಿಂಗ ಪರಿವರ್ತನೆಗೊಳಗಾದ ವ್ಯಕ್ತಿಯಿಂದ ಸಲ್ಲಿಕೆಯಾದ ಮೊದಲ ಅರ್ಜಿ ಇದಾಗಿದೆ ಎಂದು ಪ್ರಾದೇಶಿಕ ಪಾಸ್​ಪೋರ್ಟ್​ ಅಧಿಕಾರಿ ಹೇಳುತ್ತಾರೆ. ಪಾಸ್​ಪೋರ್ಟ್​ ಕಾಯ್ದೆ ಪ್ರಕಾರ, ಲಿಂಗ ತಿದ್ದುಪಡಿ ಮಾಡಲು ಬಯಸುವ ಅರ್ಜಿದಾರ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಶಸ್ತ್ರಚಿಕಿತ್ಸೆಗೆ ಒಳಗಾದ ದಾಖಲೆಗಳು ಮತ್ತು ಸರ್ಕಾರಿ ವೈದ್ಯರಿಂದ ಲಿಂಗ ದೃಢೀಕರಣ ಪತ್ರ ಸಲ್ಲಿಕೆ ಮಾಡಬೇಕು.


ಅರ್ಜಿ ಸಲ್ಲಿಸಿದ ಬೆಂಗಳೂರಿನ ವ್ಯಕ್ತಿ ತಮಿಳುನಾಡಿನ ಚೆಂಗಲ್ಪಟ್ಟು ಎಂಬಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೋವಿಡ್ ಹಿನ್ನೆಲೆ ವೈದ್ಯಕೀಯ ಪರಿಶೀಲನೆ ಸ್ಥಗಿತಗೊಂಡಿದ್ದರಿಂದ ತಿದ್ದುಪಡಿ ಕಾರ್ಯ ವಿಳಂಬವಾಗಿದೆ ಎಂಬ ಮಾಹತಿಯನ್ನು ಅಧಿಕಾರಿಗಳು ನೀಡಿದರು.


ಇದನ್ನೂ ಓದಿ:  Suicide: ಮದುವೆ ಬಳಿಕ ಬಯಲಾಯ್ತು ಗಂಡನ ಅಸಲಿ ಮುಖ; ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ


ದಾಖಲೆ ಸಲ್ಲಿಕೆ ಬಳಿಕ ಎಲ್ಲಾ ಪ್ರಕ್ರಿಯೆ ಪೂರ್ಣ


ತಿದ್ದುಪಡಿ ಕಾರ್ಯ ವಿಳಂಬವಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ಅರ್ಜಿದಾರ ಬೇಸರ ವ್ಯಕ್ತಪಡಿಸಿದ್ದರು. ನಂತರ ಸಿಬ್ಬಂದಿಯ ಸಲಹೆ ಮೇರೆಗೆ ಕರ್ನಾಟಕದ ಸರ್ಕಾರಿ ವೈದ್ಯರ ಬಳಿ ಪರೀಕ್ಷೆಗೆ ಒಳಗಾಗಿ ಲಿಂಗ ದೃಢೀಕರಣ ಪತ್ರ ಪಡೆದುಕೊಂಡು ಸಲ್ಲಿಕೆ ಮಾಡಿದರು. ಅರ್ಜಿದಾರ ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.‘


Man who turned woman how she corrected her gender in passport mrq
ಸಾಂದರ್ಭಿಕ ಚಿತ್ರ


ವೈದ್ಯಕೀಯ ಪರೀಕ್ಷೆ ಬಳಿಕ ನಮಗೆ ದೃಢೀಕರಣ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದ ಬಳಿಕ ನಾವು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪೊಲೀಸ್ ವೆರಿಫಿಕೇಶನ್​ಗೆ ಕಳುಹಿಸಲಾಗಿದೆ ಎಂದು ಕೃಷ್ಣ ಹೇಳುತ್ತಾರೆ.


2021ರಲ್ಲಿ ಸಲ್ಲಿಕೆಯಾಗಿತ್ತು ಅರ್ಜಿ


2021 ಮೇ ತಿಂಗಳಿನಲ್ಲಿನ ಬೆಂಗಳೂರಿನ ಪಾಸ್​ಪೋರ್ಟ್​ ಕಚೇರಿಗೆ 51 ವರ್ಷದ ವ್ಯಕ್ತಿ ಲಿಂಗ ಬದಲಾವಣೆಗೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ತೃತೀಯ ಲಿಂಗಿ ಎಂದು ಬದಲಿಸಬೇಕು ಅಂತ ಮನವಿ ಮಾಡಿಕೊಂಡಿದ್ದರು. ಅರ್ಜಿ ಸ್ವೀಕರಿಸಿದ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊಸ ಪಾಸ್​ಪೋರ್ಟ್​ ವಿತರಣೆ ಮಾಡಿದ್ದರು.


ಇದನ್ನೂ ಓದಿ:  Border Conflict: ಇಂದು ಸುಪ್ರೀಂ ಕೋರ್ಟ್​ನಲ್ಲಿ ಬೆಳಗಾವಿ ಗಡಿ ವಿವಾದ ಕೇಸ್ ವಿಚಾರಣೆ; ಕುತೂಹಲಕ್ಕೆ ಇಂದೇ ಬೀಳಲಿದ್ಯಾ ತೆರೆ?


ತೃತೀಯ ಲಿಂಗಿಗೆ ಸ್ವಯಂ ದೃಢೀಕರಣ ಮಾನ್ಯ


ಪಾಸ್​ಪೋರ್ಟ್​ ಕಾನೂನುಗಳ ಪ್ರಕಾರ ಅರ್ಜಿದಾರ ಅರ್ಜಿಯಲ್ಲಿ ತಾನು ತೃತೀಯ ಲಿಂಗಿ ಎಂದು ನಮೂದಿಸುವ ಆಯ್ಕೆಯನ್ನು ನೀಡಲಾಗಿದೆ. ಇಲ್ಲಿ ಅರ್ಜಿದಾರ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರಲ್ಲ. ಅರ್ಜಿದಾರರ ಸ್ವಯಂ ದೃಢೀಕರರಣವನ್ನು ಪಾಸ್​ಪೋರ್ಟ್​ ಕಾರ್ಯಾಲಯ  ಮಾನ್ಯ ಮಾಡುತ್ತದೆ.

Published by:Mahmadrafik K
First published: