ಕೈಕೊಟ್ಟ ಕೆಲಸ, ಕೈ ಹಿಡಿದ ಕೋಳಿ: ಇದು ಕೊರೋನಾ ಕಾಲದಲ್ಲಿ ಯಶಸ್ವಿಯಾದ ಪದವೀಧರನ ಕಥೆ..!

ಕೆಲಸ ಕಳೆದುಕೊಂಡ ಅವರು ಮುಂದೇನು..? ಎಂದು ಯೋಚಿಸಿ ಸಮಯ ಹಾಳು ಮಾಡದೆ, ಮನೆಯವರೊಂದಿಗೆ ಚರ್ಚಿಸಿ ಸ್ವ ಉದ್ಯೋಗಕ್ಕೆ ಮುಂದಾಗಿದ್ದರು. ಇದೀಗ ಉದ್ಯಮ ಯಶಸ್ವಿಯಾಗಿದ್ದು, ಕೋಳಿ ವ್ಯಾಪಾರ ಉತ್ತಮವಾಗಿ ಸಾಗುತ್ತಿದೆ.‌ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ ಮಹಾಮಾರಿಯಿಂದ ಇಡೀ ವಿಶ್ವದಲ್ಲಿ ಕೋಟ್ಯಂತರ ವಿದ್ಯಾವಂತ ಯುವಜನರು ಕೆಲಸ ಕಳೆದುಕೊಂಡು  ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕನಿಷ್ಠ ಜೀವನ ನಡೆಸಲು ಕೂಡ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೊಡಗು ಜಿಲ್ಲೆ ನೆಲ್ಯಹುದಿಕೇರಿಯ ಯುವಕನಿಗೆ ಕೊರೋನಾ ಕಲಿಸಿದ ಬದುಕಿನ ಪಾಠ, ಕೋಳಿ ಸಾಕಾಣಿಕೆ ಮೂಲಕ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡಿದೆ.

ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯ ಎಂ.ಜಿ.ಕಾಲೋನಿ ನಿವಾಸಿ ಸುಬ್ರಮಣಿ ತನ್ನ ಪದವಿ ವ್ಯಾಸಂಗದ ನಂತರ, ದೇಶದ ಪ್ರತಿಷ್ಠಿತ ಕಾರು ಉತ್ಪಾದನಾ ಕಂಪನಿಯ‌ ತಮಿಳುನಾಡು ಘಟಕದಲ್ಲಿ ಗುಣಮಟ್ಟ ಪರಿಶೋಧಕ‌ನಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಂದ ಕೊಡಗಿಗೆ ವಾಪಸ್ ಆಗಿದ್ದ ಯುವಕ ಬಳಿಕ ಮಡಿಕೇರಿಯ ಪ್ರತಿಷ್ಠಿತ ಪ್ಮೋಟರ್ಸ್ ಸಂಸ್ಥೆಯಲ್ಲಿ ಟೆಕ್ನೀಷನ್ ಆಗಿ ಕೆಲಸ ನಿರ್ವಹಿಸುತ್ತಿರು‌. ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಲಾಕ್‌ಡೌನ್ ನಲ್ಲಿ ಅಲ್ಲಿಯೂ ಕೆಲಸ ಕಳೆದುಕೊಂಡಿದ್ದರು. ಆದರೆ ಅದರಿಂದ ದೃತಿಗೆಡದ ಸುಬ್ರಮಣಿ  ಕುಕ್ಕುಟ್ಟೋದ್ಯಮಕ್ಕೆ ಕೈಹಾಕಿದ್ದರು. ಪರಿಶ್ರಮಕ್ಕೆ ಪ್ರತಿಫಲ ಇರುತ್ತೆ ಎಂಬಂತೆ ಇದೀಗ ಯಶಸ್ಸು ಕಾಣುತಿದ್ದಾರೆ.

ಸುಬ್ರಮಣಿ


ಈ ಮೂಲಕ ಸ್ವ ಉದ್ಯೋಗದಲ್ಲಿ ಕೈ ತುಂಬಾ ದುಡಿಯುತಿರು ಸುಬ್ರಮಣಿ ಸ್ಥಳೀಯ ಯುವಕರಿಗೆ ಮಾದರಿಯಾಗಿದ್ದಾನೆ. ಕಳೆದ ಮಾರ್ಚ್‌ನಿಂದ ಕೊರೋನಾ ಅಟ್ಟಹಾಸ ಕೊಡಗು ಜಿಲ್ಲೆಯನ್ನು ಸಂಪೂರ್ಣ ಸ್ತಬ್ಧವಾ ಗಿಸಿತ್ತು. ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು, ಶಾಲೆ ಕಾಲೇಜು, ರೆಸಾರ್ಟ್, ಇನ್ನಿತರ ಉದ್ಯಮಗಳು, ಬೈಕ್, ಕಾರು ಷೋ ರೂಂ ಗಳು ಕೊರೋನಾ ವೈರಸ್‌ಗೆ ಬೆದರಿ ದೈನಂದಿನ ವಹಿವಾಟು ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅಸಂಖ್ಯಾತ ನೌಕರರು ,ಕೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ಈ ಸಾಲಿನಲ್ಲಿ ಸುಬ್ರಮಣಿ ಕೂಡ ಒಬ್ಬರಾಗಿದ್ದರು.

ಕೆಲಸ ಕಳೆದುಕೊಂಡ ಅವರು ಮುಂದೇನು..? ಎಂದು ಯೋಚಿಸಿ ಸಮಯ ಹಾಳು ಮಾಡದೆ, ಮನೆಯವರೊಂದಿಗೆ ಚರ್ಚಿಸಿ ಸ್ವ ಉದ್ಯೋಗಕ್ಕೆ ಮುಂದಾಗಿದ್ದರು. ಇದೀಗ ಉದ್ಯಮ ಯಶಸ್ವಿಯಾಗಿದ್ದು, ಕೋಳಿ ವ್ಯಾಪಾರ ಉತ್ತಮವಾಗಿ ಸಾಗುತ್ತಿದೆ.‌ ಪ್ರಾರಂಭದಲ್ಲಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದ್ದರು. ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಯಲ್ಲಿ ಎರಡು ಬಾರಿ ಅರ್ಜಿ ಸಲ್ಲಿಸಿದ್ದರು. ಕಾರಣಾಂತರಗಳಿಂದ ಸರ್ಕಾರದ ಯೋಜನೆ ಪಡೆಯುವಲ್ಲಿ ವಿಫಲರಾಗಿದ್ದರು.‌ ಆದರೆ ಕೈಯಲ್ಲಿದ್ದ ಅಲ್ಪ ಬಂಡವಾಳದಿಂದಲೇ ಕುಕ್ಕುಟ್ಟೋದ್ಯಮದಲ್ಲಿ ಯಶಸ್ವಿಯಾಗಿದ್ದಾನೆ. ಲಾಕ್‌ಡೌನ್ ನಂತರ ಕೆಲಸವನ್ನು ಕಳೆದುಕೊಂಡರೂ ಧೃತಿಗೆಡದೆ ಸ್ವಯಂ ಉದ್ಯೋಗ ಪ್ರಾರಂಭಿಸಿ ಜೀವನ ನಡೆಸುತ್ತಾ ಇತರರಿಗೆ ಮಾದರಿಯಾಗಿ ನಿಂತಿದ್ದಾನೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್
Published by:zahir
First published: