Bengaluru Traffic: ಇದೊಂದು ಟ್ರಾಫಿಕ್ ಪ್ರೇಮ್​ ಕಹಾನಿ​, ಈ ಜೋಡಿ ಮದ್ವೆಯಾದ್ರೂ ಆ ರೋಡ್​ ಇನ್ನೂ ಸರಿಯಾಗಿಲ್ಲ!

Bengaluru Traffic: ಬೆಂಗಳೂರಿನ ಟ್ರಾಫಿಕ್ ಕುರಿತು ಕಿರಿಕಿರಿ ಹೊಂದಿದ ಜನರ ಮಾತನ್ನಷ್ಟೇ ನೀವು ಕೇಳಿರ್ತಿರಾ ಆದ್ರೆ ಇಲ್ಲೊಬ್ಬ ಬೆಂಗಳೂರಿನ ನಿವಾಸಿ ಟ್ರಾಫಿಕ್​​ಗೆ ಧನ್ಯವಾದ ತಿಳಿಸಿದ್ದಾನೆ.

ಬೆಂಗಳೂರು ಟ್ರಾಫಿಕ್

ಬೆಂಗಳೂರು ಟ್ರಾಫಿಕ್

 • Share this:
  ಸಾಮಾನ್ಯವಾಗಿ ಈ ಕಂಪನಿಯಲ್ಲಿ ಕೆಲಸ (Work) ಮಾಡುವವರು ಕಚೇರಿಗೆ ಅಥವಾ ಆಫೀಸಿಗೆ (office) ಸ್ವಲ್ಪ ತಡವಾಗಿ ಬಂದರೂ ‘ಏನ್ ಮಾಡೋದು ಸರ್ ಬೆಂಗಳೂರು ಟ್ರಾಫಿಕ್ ನಲ್ಲಿ ಬರೋದಕ್ಕೆ ತಡವಾಯ್ತು’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ‘ಅರೇ! ಏನ್ ಟ್ರಾಫಿಕ್ (Traffic) ಜಾಮ್ ಅಪ್ಪಾ ಸಾಕಾಯ್ತು ಬರೋದಕ್ಕೆ ಅಂತ ಎಲ್ಲಿಗೆ ಹೋದರೂ ಇದೊಂದು ಮಾತು ಬೆಂಗಳೂರಿಗರ (Bengaluru) ಬಾಯಲ್ಲಿ ಎಂದಿಗೂ ಕೇಳಬಹುದು. ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದೆ (Increased) ಅಂತ ಹೇಳಿದರೆ ತಪ್ಪಾಗುವುದಿಲ್ಲ.

  ಒಂದು ರೀತಿಯಲ್ಲಿ ಹೇಳುವುದಾದರೆ ಬೆಂಗಳೂರು ನಗರ ತನ್ನ ಇಕ್ಕಟ್ಟಾದ ರಸ್ತೆಗಳು ಮತ್ತು  ಐಟಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ನಗರದ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಚಲಾಯಿಸಲು ತೊಂದರೆ ಅನುಭವಿಸಿರುವುದಾಗಿ ಜನರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ವರದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಘಟನೆಗಳು ಒಂದಲ್ಲ ಒಂದು ರೀತಿಯಲ್ಲಿ ಈ ಟ್ರಾಫಿಕ್ ಸಮಸ್ಯೆಯೇ ಕಾರಣ ಎಂಬಂತಾಗಿರುತ್ತದೆ.

  ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ಹುಟ್ಟಿದ ಪ್ರೇಮಕಥೆ

  ಬೆಂಗಳೂರಿನ ಈ ಕಿರಿಕಿರಿ ಮತ್ತು ಆಯಾಸಗೊಳಿಸುವ ಟ್ರಾಫಿಕ್ ಜಾಮ್ ಗಳು ಸಹ ಸಕಾರಾತ್ಮಕ ಕಥೆಗಳನ್ನು ಹೊಂದಿರಬಹುದು ಎಂದು ಹೇಳಿದರೆ ನೀವು ನಂಬಲಿಕ್ಕಿಲ್ಲ. ಟ್ರಾಫಿಕ್ ಜಾಮ್ ನಲ್ಲಿ ಹೀಗೆ ಸಿಕ್ಕಿ ಹಾಕಿಕೊಳ್ಳುವುದರ ಪರಿಣಾಮವಾಗಿ ಹುಟ್ಟಿದ ಒಂದು ಪ್ರೇಮಕಥೆ ಇಲ್ಲಿದೆ ನೋಡಿ. ಈ ಪ್ರೇಮಕಥೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.

  ಬೆಂಗಳೂರಿನ ರೆಡ್ಡಿಟ್ ಬಳಕೆದಾರರು "ನಾನು ಸೋನಿ ವರ್ಲ್ಡ್ ಸಿಗ್ನಲ್ ಬಳಿ ನನ್ನ ಹೆಂಡತಿಯನ್ನು ಮೊದಲ ಸಲ ಭೇಟಿಯಾದೆ. ನನ್ನ ಪ್ರೇಮಕಥೆ ಶುರುವಾಗಿದ್ದು ಅಲ್ಲಿಂದಲೆ ಅಂತ ಹೇಳಬಹುದು. ಒಂದು ದಿನ ನಾನು ಅವಳನ್ನು ಮನೆಗೆ ಬಿಡುತ್ತಿದ್ದೆ ಮತ್ತು ಈಜಿಪುರ ಫ್ಲೈಓವರ್ ಕೆಲಸದಿಂದಾಗಿ ನಾವು ಹತ್ತಿರದಲ್ಲಿ ಎಲ್ಲೋ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡೆವು. ಟ್ರಾಫಿಕ್ ನಲ್ಲಿ ನಿಂತು ತುಂಬಾನೇ ನಿರಾಶೆಗೊಂಡೆವು ಮತ್ತು ಹಸಿದಿದ್ದೆವು, ಆದ್ದರಿಂದ ನಾವು ಬೇರೆಡೆಗೆ ಬೈಕ್ ತಿರುಗಿಸಿ ಹತ್ತಿರದ ಹೊಟೇಲ್ ನಲ್ಲಿ ಊಟ ಮಾಡಿದೆವು. ನಾನು ಅಂದಿನಿಂದ 3 ವರ್ಷಗಳ ಕಾಲ ಅವಳೊಂದಿಗೆ ಡೇಟಿಂಗ್ ಮಾಡಿ ಮದುವೆಯಾಗಿ ಈಗ 2 ವರ್ಷಗಳಾಗಿವೆ, ಆದರೆ 2.5 ಕಿಲೋ ಮೀಟರ್ ಉದ್ದದ ಫ್ಲೈಓವರ್ ಇನ್ನೂ ನಿರ್ಮಾಣ ಹಂತದಲ್ಲಿದೆ" ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!

  ಟ್ವಿಟರ್ ನಲ್ಲಿ ಅವರ ರೆಡ್ಡಿಟ್ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಲಾಗಿದ್ದು, ಇದು ಸಾವಿರಾರು ಬಳಕೆದಾರರನ್ನು ರಂಜಿಸಿದೆ ಎಂದು ಹೇಳಬಹುದು.4,000 ಕ್ಕೂ ಹೆಚ್ಚು ಜನರು ಟ್ವಿಟರ್ ನಲ್ಲಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸುಂದರವಾದ ಪ್ರೇಮಕಥೆಯನ್ನು ಬದಿಗಿಟ್ಟು, ಬೆಂಗಳೂರಿನಲ್ಲಿ ದಟ್ಟಣೆಯ ಟ್ರಾಫಿಕ್ ನೊಂದಿಗೆ ತಮ್ಮದೇ ಆದ ಕೆಟ್ಟ ಅನುಭವಗಳನ್ನು ವಿವರಿಸಿದರು.

  man who has given credit to Bengaluru traffic for his marriage His story is now viral
  ಟ್ವೀಟ್


  ಈ ಪೋಸ್ಟ್ ಗೆ ಬಂದ ಪ್ರತಿಕ್ರಿಯೆಗಳು ಹೀಗಿವೆ..

  ಒಬ್ಬ ಬಳಕೆದಾರರು "ಆ ಫ್ಲೈಓವರ್ ನಾನು ಬೆಂಗಳೂರಿನಲ್ಲಿ ಇರುವಾಗಿನಿಂದಲೂ ನಿರ್ಮಾಣ ಹಂತದಲ್ಲಿದೆ" ಎಂದು ಹೇಳಿದ್ದಾರೆ.

  ಇನ್ನೊಬ್ಬ ಬಳಕೆದಾರರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದರು, "ಡೇಟಿಂಗ್ ನಲ್ಲಿ ಸಂಭವಿಸಿದಂತೆ ಅವರು ಇನ್ನೂ ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆಯೇ? ಮದುವೆಯಾದ ನಂತರ ಕೆಲವು ವಿಷಯಗಳು ಬದಲಾಗುತ್ತವೆ" ಎಂದು ಹಾಸ್ಯವಾಗಿ ಕೇಳಿದ್ದಾರೆ.

  ನಗರದಲ್ಲಿ ಸಂಚಾರ ದಟ್ಟಣೆ ಭಯಾನಕ ಸಮಸ್ಯೆಯಾಗಿದ್ದರೂ, ಜನರು ಅದಕ್ಕೆ ಹೊಂದಿಕೊಳ್ಳುವಂತೆ ತೋರುತ್ತದೆ. ಬೆಂಗಳೂರಿನ ಸಂಚಾರದ ಬಗ್ಗೆ ಹಲವಾರು ಆನ್ಲೈನ್ ಮೀಮ್ ಗಳನ್ನು ಮಾಡಲಾಗಿದೆ ಮತ್ತು ಇದು ಸಹ ತುಂಬಾನೇ ಪ್ರಾಮುಖ್ಯತೆಯನ್ನು ಗಳಿಸಿದೆ.

  ಇದನ್ನೂ ಓದಿ: ಬೆಂಗಳೂರಿಗರೇ ಇಂದು ಈ ರಸ್ತೆಗಳು ಕಂಪ್ಲೀಟ್ ಬಂದ್, ಸಂಚಾರಕ್ಕೆ ಬದಲಿ ಮಾರ್ಗ ಬಳಸಿ

  "ಸಿಲ್ಕ್ ಬೋರ್ಡ್, ಎ ಟ್ರಾಫಿಕ್ ಲವ್ ಸ್ಟೋರಿ" ಎಂಬ ರೊಮ್ಯಾಂಟಿಕ್ ಕಿರುಚಿತ್ರವು ಸಹ ಬೆಂಗಳೂರಿನ ಸದಾ ವಾಹನಗಳಿಂದ ಕಿಕ್ಕಿರಿದ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಸ್ಫೂರ್ತಿ ಪಡೆದಿತ್ತು ಎಂದು ಹೇಳಬಹುದು.
  First published: