• Home
 • »
 • News
 • »
 • state
 • »
 • Bengaluru: ಲೇಡೀಸ್ ಟಾಯ್ಲೆಟ್ ಒಳಗೆ ನುಗ್ಗಿದ್ದವನನ್ನು ಹಿಡಿಯೋಕೆ 3 ದಿನ- 300 ಸಿಸಿಟಿವಿ ಬೇಕಾಯ್ತು! ಇವ್ನ ಕತೆ ಕೇಳಿ

Bengaluru: ಲೇಡೀಸ್ ಟಾಯ್ಲೆಟ್ ಒಳಗೆ ನುಗ್ಗಿದ್ದವನನ್ನು ಹಿಡಿಯೋಕೆ 3 ದಿನ- 300 ಸಿಸಿಟಿವಿ ಬೇಕಾಯ್ತು! ಇವ್ನ ಕತೆ ಕೇಳಿ

ವಿಜಯ ಕಾಲೇಜ್

ವಿಜಯ ಕಾಲೇಜ್

ಸೌತ್ಎಂಡ್ ಸರ್ಕಲ್​​ನ ವಿಜಯ ಕಾಲೇಜು ಆವರಣದಲ್ಲಿದ್ದ ಲೇಡೀಸ್ ಟಾಯ್ಲೆಟ್​ಗೆ ಎಂಟ್ರಿ ಕೊಟ್ಟು ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಸತತ ಮೂರು ದಿನಗಳ ಕಾಲ ಸುಮಾರು 13 ಕಿಮೀ ಅಂತರದಲ್ಲಿ ಅಳವಡಿಸಿದ್ದ 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಜಯನಗರದ ಸೌಥ್​ ಎಂಡ್​ ಸರ್ಕಲ್ (Southend Circle)​ ಬಳಿ ಇರುವ ವಿಜಯ ಕಾಲೇಜ್​​​ನ (Vijaya College) ಮಹಿಳೆಯರ ಟಾಯ್ಲೆಟ್​​ಗೆ ಪ್ರವೇಶ ಮಾಡಿ, ವಿದ್ಯಾರ್ಥಿಯನ್ನು ಎಳೆದಾಡಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸುಮಾರು 13 ಕಿಲೋಮೀಟರ್​​ ದೂರ ಫಿಕ್ಸ್ ಮಾಡಿದ್ದ ಬರೋಬ್ಬರಿ 300 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು (CCTV Footage) ಸತತ ಮೂರು ದಿನಗಳ ಪರಿಶೀಲನೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಜಯನಗರ ಪೊಲೀಸರು (Jayanagar Police) ಬಂಧನ ಮಾಡಿದ್ದಾರೆ. ಬಂಧಿತನನ್ನು ಹನುಮಂತ ನಗರದ (Hanumantha Nagar ) ಸುಂಕೇನಹಳ್ಳಿ ಎಕ್ಸಟೆನ್ಶನ್ ನಿವಾಸಿಯಾಗಿರುವ ಎಸ್​ ಅಜಯ್​ ಕುಮಾರ್​ ಬಂಧಿತ ಆರೋಪಿಯಾಗಿದ್ದಾನೆ.


ವಿಶೇಷ ಎಂದರೆ, ಬಂಧಿತ ಆರೋಪಿ ಕುಮಾರ್​ ಕೂಡ ಇದೇ ಕಾಲೇಜಿನಲ್ಲಿ 20 ವರ್ಷಗಳ ಹಿಂದೆ ಪದವಿಯನ್ನು ಪಡೆದುಕೊಂಡಿದ್ದ. ಸದ್ಯ ಆತನನ್ನು ಐಪಿಸಿ ಸೆಕ್ಷನ್ 354 (ಮಹಿಳೆ ಮೇಲೆ ದೌರ್ಜನ್ಯ), 506 (ಕ್ರಿಮಿನಲ್ ಬೆದರಿಕೆ) ಮತ್ತು 448ರ (ಅತಿಕ್ರಮಣ) ಅಡಿ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿ ಕುಮಾರ್​ನನ್ನ ಬಂಧನ ಮಾಡುವ ಮುನ್ನ ಪೊಲೀಸರು ಜಯನಗರದ ಸೌತ್ ಎಂಡ್ ಸರ್ಕಲ್ ನಿಂದ ಮೆಜೆಸ್ಟಿಕ್ ಮತ್ತು ಹನುಮಂತನಗರದವರೆಗೂ ಅಳವಿಡಿಸಿದ್ದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಆರೋಪಿಯನ್ನು ಗುರುತಿಸಿದ್ದಾರೆ.
ವಿಜಯ ಕಾಲೇಜಿನಲ್ಲೇ ಪದವಿ ಪಡೆದಿದ್ದ ಆರೋಪಿ


ಇನ್ನು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನ್ನನ್ನು ಪೊಲೀಸರು ಗುರುತಿಸಬಹುದು ಎಂದು ಊಹೆ ಮಾಡಿದ್ದ ಆರೋಪಿ, ಕೃತ್ಯ ನಡೆಸಿದ ಬಳಿ ಮೂರು ದಿನಗಳ ಮನೆಗೆ ಹೋಗಿರಲಿಲ್ಲ. ಸತತ ಮೂರು ದಿನಗಳ ಕಾಲ ರಾತ್ರಿ ವೇಳೆ ಮೆಜೆಸ್ಟಿಕ್​ ಬಸ್​ ನಿಲ್ದಾಣ ಸೇರಿದಂತೆ ವಿವಿಧ ಸ್ಥಳದಲ್ಲಿ ಓಡಾಡಿಕೊಂಡಿದ್ದ. ಆ ಬಳಿಕ ಮೂರು ದಿನ ಬಿಟ್ಟು ಮನೆಗೆ ತೆರಳಿದ್ದನಂತೆ.


ಆರೋಪಿ ಕುಮಾರ್​ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ವಿಚ್ಛೇದನ ಪಡೆದು ಆತನಿಂದ ದೂರವಾಗಿದ್ದಾಳೆ. ಇನ್ನು ಕೆಲಸವಿಲ್ಲದೆ ಓಡಾಡಿಕೊಂಡಿದ್ದನಂತೆ. ಆದರೆ ಆತ ಪೊಲೀಸರಿಗೆ ತಾನು ಸ್ವಯಂ ಉದ್ಯೋಗಿ, ಟೆಲಿ ಸೀರಿಯಲ್​ವೊಂದನ್ನು ನಿರ್ಮಾಣ ಮಾಡ್ತಿರೋದಾಗಿ ಹೇಳಿಕೊಂಡಿದ್ದಾನಂತೆ.


ಬೆಂಗಳೂರು ಪೊಲೀಸ್


ಇದನ್ನೂ ಓದಿ: Bengaluru: ಗರ್ಭಿಣಿ ಪತ್ನಿಯನ್ನ ಕೊಲೆಗೈದು ಫ್ಲೈಟ್​​ನಲ್ಲಿ ಎಸ್ಕೇಪ್​; ಬೆಂಗಳೂರು ಪೊಲೀಸರಿಂದ ಬಂಗಾಳದಲ್ಲಿ ನಕಲಿ ಟೆಕ್ಕಿ ಅರೆಸ್ಟ್


ಲೇಡೀಸ್​ ಟಾಯ್ಲೆಟ್​ಗೆ ಹೋಗಿದ್ದು ಏಕೆ?


ಪೊಲೀಸ್ ವಿಚಾರಣೆಯಲ್ಲಿ ಆತ ಲೇಡೀಸ್ ಟಾಯ್ಲೆಟ್​ಗೆ ಹೋಗಿದ್ದೇಕೆ ಎಂದು ತಿಳಿಸಿರುವ ಕುಮಾರ್, ಜನವರಿ 10 ರಂದು ನಾನು ಡಯೆರಿಯಾದಿಂದ ಬಳಲುತ್ತಿದೆ. ಆದ್ದರಿಂದಲೇ ಟಾಯ್ಲೆಟ್​ಗೆ ಹೋಗಬೇಕಾಯ್ತು. ಅಂದು ಹೋಟೆಲ್​ವೊಂದರಲ್ಲಿ ತಿಂಡಿ ಮಾಡಿದ್ದೆ, ಆ ಬಳಿಕ ಹೊಟ್ಟೆಯಲ್ಲಿ ತಳಮಳ ಶುರುವಾಯ್ತು. ಈ ವೇಳೆ ಹತ್ತಿರದಲ್ಲಿ ಯಾವುದಾದರು ಟಾಯ್ಲೆಟ್​ ಇದೆಯಾ ನೋಡಿದಾಗ ಮೊದಲು ಕಣ್ಣಿಗೆ ಬಿದ್ದ ಟಾಯ್ಲೆಟ್​ಗೆ ಎಂಟ್ರಿ ಕೊಟ್ಟಿದ್ದೆ ಎಂದು ಹೇಳಿದ್ದಾನಂತೆ.


ಆದರೆ, ನಾನು ಟಾಯ್ಲೆಟ್​ನಿಂದ ಹೊರ ಬರುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವಗಳು ನೋಡಿ ಕಿರುಚಿಕೊಂಡಿದ್ದಳು. ಆಗ ನಾನು ಆಕೆಗೆ ಕಿರುಚದಂತೆ ಮನವಿ ಮಾಡಿದ್ದೆ. ಆದರೆ ಆಕೆ ನನ್ನ ಮಾತನ್ನು ಆಲಿಸದೆ ಕಿರುಚುತ್ತಿದ್ದಳು. ಆಗ ಎಲ್ಲರ ಕೈಗೆ ಸಿಕ್ಕಿಬಿದ್ದು, ಎಲ್ಲಿ ಒದೆ ತಿನ್ನಬೇಕಾಗುತ್ತೋ ಅಂತ ಹೆದರಿ, ಆಕೆಯ ಕೈಗಳನ್ನು ಹಿಡಿದಕೊಂಡು, ನಿನಗೆ ತೊಂದರೆ ಕೊಡಲು ಬಂದಿಲ್ಲ ಎಂದು ಜೋರು ಮಾಡಿ ಹೇಳಿದ್ದೆ. ಆ ಬಳಿಕ ಆಕೆಯನ್ನು ಪಕ್ಕಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾದೆ ಎಂದು ತಿಳಿಸಿದ್ದಾನೆ.


ಮೂರು ದಿನಗಳ ಕಾಲ ಮೆಜೆಸ್ಟಿಕ್​ನಲ್ಲೇ ಕಳೆದಿದ್ದ ಆರೋಪಿ


ಕಾಲೇಜಿನಿಂದ ಹೊರಬರುತ್ತಿದ್ದಂತೆ ಬಸ್ ಹಿಡಿದು ಮೆಜೆಸ್ಟಿಕ್​ ಕಡೆ ಕುಮಾರ್ ಹೊರಟು ಹೋಗಿದ್ದಾನೆ. ಅಲ್ಲದೇ ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ತನ್ನನ್ನು ಅರೆಸ್ಟ್ ಮಾಡ್ತಾರೆ ಎಂದು ಯೋಚಿಸಿ ಮೂರು ದಿನಗಳ ಕಾಳ ಮೆಜೆಸ್ಟಿಕ್ ಸುತ್ತಮುತ್ತ ಓಡಾಡಿಕೊಂಡಿದ್ದನಂತೆ.


ವಿಜಯ ಕಾಲೇಜ್


ಇದನ್ನೂ ಓದಿ:  Bengaluru: ಮೇಲಿನ ಮನೆ ಅಂಕಲ್, ಕೆಳಗಿನ ಮನೆ ಆಂಟಿ ಲವ್​ ಸ್ಟೋರಿ! ಹೇಳದೆ ಕೇಳದೆ ಜೂಟ್; ಮಿಸ್ ಆದವರ ಅಸಲಿ ಕಹಾನಿ ಏನು?


ಇನ್ನು, ಕಾಲೇಜು ಬಳಿ ಸಿಸಿಟಿವಿ ಪರಶೀಲನೆ ನಡೆಸಿದ ಪೊಲೀಸರಿಗೆ ಕಾಲೇಜು ಬಳಿ ಕಂಡ ವ್ಯಕ್ತಿ ಸತತ ಮೂರು ದಿನಗಳ ಕಾಲ ಮೆಜೆಸ್ಟಿಕ್​ನಲ್ಲೇ ಓಡಾಡಿಕೊಂಡಿರುವುದನ್ನು ಗಮನಿಸಿದ್ದಾರೆ. ಆ ಬಳಿಕ ಆತ ಬಿಎಂಟಿಸಿ ಬಸ್​ ಹತ್ತಿ ಶ್ರೀನಗರ ಕಡೆ ಬಂದಿದ್ದಾನೆ. ಶ್ರೀನಗರ ಬಸ್​ ನಿಲ್ದಾಣದಲ್ಲಿ ಇಳಿದ ಆತ ನೇರ ಮನೆಗೆ ತೆರಳಿದ್ದಾನೆ. ಈ ವೇಳೆ ಅನುಮಾನ ಬಂದು ಕುಮಾರ್ ಮನೆಗೆ ತೆರಳಿದ ಪೊಲೀಸರು ಆತನನ್ನು ಶನಿವಾರ ಬಂಧನ ಮಾಡಿದ್ದಾರೆ. ಘಟನೆ ಕುರಿತಂತೆ ಶಾಲೆಯ ಪ್ರಿನ್ಸಿಪಾಲ್​ ಆರ್.ಸುಧಾ ಪೊಲೀಸರಿಗೆ ದೂರು ನೀಡಿದ್ದರು.

Published by:Sumanth SN
First published: