ಹಾವು ಹಿಡಿಯಲು ಮುಂದಾದ ವ್ಯಕ್ತಿ: ಈಗ ಸಾವು-ಬದುಕಿನ ನಡುವೆ ಹೋರಾಟ..!


Updated:September 4, 2018, 10:54 PM IST
ಹಾವು ಹಿಡಿಯಲು ಮುಂದಾದ ವ್ಯಕ್ತಿ: ಈಗ ಸಾವು-ಬದುಕಿನ ನಡುವೆ ಹೋರಾಟ..!
A woman holds a snake, used to cover a wooden statue of Saint Domenico, during the St. Domenico procession in Cocullo, central Italy, May 1, 2017. Every year in May, snakes are placed onto the statue of St. Domenico and the statue is then carried in a procession around the town. REUTERS/Tony Gentile - RC1F8C9A5C20

Updated: September 4, 2018, 10:54 PM IST
ಮುನಿರಾಜು, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ. 4): ವ್ಯಕ್ತಿಯೋರ್ವ ಮನೆಯೊಳಗೆ ಸೇರಿದ್ದ ಹಾವನ್ನು ಹಿಡಿಯಲು ಹೋಗಿ ಕಚ್ಚಿಸಿಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೇ ಹಾವಿನ ವಿಷ ಮೈಗೆ ಸೇರಿ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ನಗರದ ಕೋಣನಕುಂಟೆ ಬಳಿಯ ದೊಡ್ಡಕಲ್ಲಸಂದ್ರದ ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ 5 ಅಡಿಯ ಹಾವನ್ನು ಉರಗತಜ್ಞನಂತೇ ಹಿಡಯಲು ಮುಂದಾದ ವ್ಯಕ್ತಿಗೆ ಹಾವು ಕಚ್ಚಿದೆ. ಹಾವಿನಿಂದ ಕಚ್ಚಿಸಿಕೊಂಡ ಬಳಿಕ ಕುಸಿದು ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಯ ದಾಖಲಿಸಿದ್ದಾರೆ.

‘ಐಸಿಯು’ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಸಾವು‌ ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ಹಾವು ಹಿಡಿಯುವ ಬಗೆ ಗೊತ್ತಿರಲಿಲ್ಲ ಎನ್ನಲಾಗಿದೆ. ಹವ್ಯಾಸ ಇಲ್ಲದೆ ಸ್ಥಳಕ್ಕೆ‌ ಬಂದು ಹಾವು ಹಿಡಿಯಲು ಯತ್ನಿಸಿದ್ದ ಅಸಾಮಿ ಈಗ ಆಸ್ಪತ್ರೆ ಪಾಲಾಗಿದ್ದಾರೆ.

ಈ ಹಿಂದೆಯೂ ವ್ಯಕ್ತಿಯೋರ್ವ ಸುಮಾರು 5 ಮುಕ್ಕಾಲು ಅಡಿ ಉದ್ದದ ವಿಷಕಾರಿ ನಾಗರ ಹಾವು ಹಿಡಿಯಲು ಮುಂದಾಗಿದ್ದ.  ಬಾವಿಯೊಳಗೆ ಬಿದ್ದು ಹಾವಿಗೆ ಮೇಲೆ ಬರಲು ಸಾಧ್ಯವಾಗದೇ ಒದ್ದಾಡುತ್ತಿತ್ತು. ಇದನ್ನ ಕಂಡ ಈತ, ಉರಗ ತಜ್ಞನಂತೆ ಬುಟ್ಟಿಯನ್ನ ಬಾವಿಗೆ ಇಳಿಸಿ ಹಾವನ್ನ ಬಾವಿಯಿಂದ ಮೇಲತ್ತಲು ಬಹಳ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ .

ಕೊನೆಗೂ ಸಾಹಸ ಮಾಡಿ ಹಾವನ್ನ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಬುಟ್ಟಿಯನ್ನ ಹಗ್ಗಕ್ಕೆ ಕಟ್ಟಿ ಬಾವಿಗಿಳಿಸಿದರೆ, ಹಾವು ಮಾತ್ರ ಬುಟ್ಟಿಗೆ ಬರುತ್ತಿರಲಿಲ್ಲ. ಎಷ್ಟೇ ಪ್ರಯತ್ನ ಪಟ್ರು ಹಾವು ಮೇಲಕ್ಕೆ ಬಾರದಿದ್ದರಿಂದ ಕೊನೆಗೆ ವ್ಯಕ್ತಿಯೇ ಖುದ್ದು ಹಗ್ಗದ ಮೂಲಕ ಹಾವನ್ನ ಮೇಳಕ್ಕೆತ್ತಲು ಬಾವಿಗಿಳಿದು ಕಚ್ಚಿಸಿಕೊಂಡು ಪ್ರಾಣಕಳೆದುಕೊಂಡಿದ್ದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ