ಅವನು ಅವಳಾದ ಕಥೆ; ಅರ್ಚಕನಾಗಿದ್ದವನು ಅವಳಾಗಿ ವೇಶ್ಯಾವಾಟಿಕೆ ಮಾಡಿದ್ದು ಸತ್ಯವೇ?

ಲೀಸರ ಕುತಂತ್ರದಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಅಂತಾ ನೂತನಾ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ. ಒಟ್ಟಿನಲ್ಲಿ ಅವನಾಗಿದ್ದವನು ಅವಳಾಗಿ ಇದೀಗ ಫಜೀತಿಗೆ ಸಿಲುಕಿದ್ದಾಳೆ.

news18-kannada
Updated:November 21, 2019, 8:20 PM IST
ಅವನು ಅವಳಾದ ಕಥೆ; ಅರ್ಚಕನಾಗಿದ್ದವನು ಅವಳಾಗಿ ವೇಶ್ಯಾವಾಟಿಕೆ ಮಾಡಿದ್ದು ಸತ್ಯವೇ?
ನೂತನಾ
  • Share this:
ಚಿಕ್ಕಮಗಳೂರು(ನ.21): ಆತ ಕೆಲ ವರುಷಗಳ ಹಿಂದೆ ಕಾಫಿನಾಡಿನ ದೇವಸ್ಥಾನವೊಂದರಲ್ಲಿ ಪುರೋಹಿತನಾಗಿದ್ದವ. ಆದರೆ ಅದೇನಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಆರ್ಚಕನಾಗಿದ್ದ ಆತ ಹೆಣ್ತನದ ಬಗ್ಗೆ ಆಕರ್ಷಣೆ ಬೆಳೆಸಿಕೊಂಡು ತಾನೇ ಹುಡುಗಿಯಾದ. ಅಯ್ಯೋ ಇದೇನಪ್ಪಾ ಹುಡುಗನಾಗಿದ್ದವನು ಹುಡುಗಿಯಾದ ಅಂತ ಸ್ನೇಹಿತರು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಪೊಲೀಸರು ಆಕೆಯ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.

ದೇವಸ್ಥಾನದ ಅರ್ಚಕನಾಗಿದ್ದ ನೂತನ್​​ ಈಗ ನೂತನಾ ಆಗಿ ಬದಲಾಗಿದ್ದಾಳೆ. ಇದು ಅವನಲ್ಲ ಅವಳ ಕಥೆ. 'ನಾವು ನಮ್ಮಿಷ್ಟದ ಹಾಗೆ ಬದುಕಲು ಸಂವಿಧಾನವೇ ಅವಕಾಶ ಮಾಡಿಕೊಟ್ಟಿದೆ ಬಿಡಿ' ಎಂದು ನೂತನಾ ಹೇಳುತ್ತಿದ್ದಳು. ತಮ್ಮ ಸ್ನೇಹಿತ ನೂತನ್​ ಕಥೆ ಹೀಗಾಯಿತಲ್ಲಾ ಎಂದು ಆತನ ಗೆಳೆಯರು ತಲೆಕೆಡಿಸಿಕೊಂಡಿದ್ದರು. ಈ ವೇಳೆ, ಇದೀಗ ಮತ್ತೊಂದು ಯಡವಟ್ಟಾಗಿದೆ. ಇದ್ದಕ್ಕಿದ್ದಂತೆ ನೂತನಾಳ ಮನೆ ಮೇಲೆ ಪೊಲೀಸರು ರೈಡ್ ಮಾಡಿದ್ದಾರೆ. ನೂತನಾಳ ಮೇಲೆ ವೇಶ್ಯಾವಾಟಿಕೆ ಆರೋಪ ಕೇಳಿ ಬಂದಿದ್ದು , ಪೊಲೀಸರು ಈಕೆಯ ಜೊತೆಗಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷನೂ ಸೇರಿದಂತೆ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೆಲ್ಲಾ ಹೈಡ್ರಾಮ ನಡೆದ ಬಳಿಕ ಮೈಯೆಲ್ಲಾ ರಕ್ತಸಿಕ್ತವಾಗಿದ್ದ ನೂತನಾ ಆಸ್ಪತ್ರೆ ಪಾಲಾಗಿದ್ದಾಳೆ.

ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ

ಪೊಲೀಸರು ಈಕೆಯ ಮೇಲೆ ವೇಶ್ಯಾವಾಟಿಕೆ ಆರೋಪ ಹೊರಿಸಿದರೆ, ನೂತನಾ ಕೂಡ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾಳೆ. ಇದೆಲ್ಲಾ ಪೊಲೀಸರ ಪ್ರಿಪ್ಲಾನ್, ನನಗೆ ಆಗದ ನಮ್ಮ ಮನೆಯ ಪಕ್ಕದವರು ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ನನ್ನನ್ನು ಹೇಗಾದರೂ ಮಾಡಿ ಸಿಕ್ಕಿ ಹಾಕಿಸಬೇಕು ಎಂದು ಪೊಲೀಸರು ಇಬ್ಬರು ವ್ಯಕ್ತಿಗಳನ್ನ ಕರೆದುಕೊಂಡು ಬಂದು ನನ್ನ ಮನೆ ಮೇಲೆ ರೈಡ್ ಮಾಡಿಸಿದ್ದಾರೆ. ಅದು ಕೂಡ ನಾನು ನನ್ನ ಪ್ರಿಯತಮನ ಜತೆ ಏಕಾಂತದಲ್ಲಿ ಇದ್ದಾಗ ಬಾಗಿಲು ಒಡೆದು ಒಳ ಬಂದಿದ್ದಾರೆ ಎನ್ನುವುದು ನೂತನಾಳ ಆರೋಪವಾಗಿದೆ.

ಇನ್ನು, ಪೊಲೀಸರು ಈ ದಾಳಿ ಮಾಡಿದಾಗ ನಾನು, ನನ್ನ ಪ್ರೇಮಿಗೆ ಕೊಡಲು ಸೇಬು ಕತ್ತರಿಸುತ್ತಿದ್ದೆ. ಆ ವೇಳೆ ಪೊಲೀಸರು ತಳ್ಳಿದ್ದರಿಂದ, ನನಗೆ ಕುತ್ತಿಗೆ ಸೇರಿದಂತೆ ಮೈಯೆಲ್ಲಾ ಗಾಯಗಳಾಗಿ ರಕ್ತಸ್ರಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಕುತಂತ್ರದಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಅಂತಾ ನೂತನಾ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ. ಒಟ್ಟಿನಲ್ಲಿ ಅವನಾಗಿದ್ದವನು ಅವಳಾಗಿ ಇದೀಗ ಫಜೀತಿಗೆ ಸಿಲುಕಿದ್ದಾಳೆ.

ಬಾಲಕಿಗೆ ಹಾವು ಕಚ್ಚಿದ್ದರೂ ತರಗತಿ ಮುಂದುವರೆಸಿದ ನಿರ್ದಯಿ ಶಿಕ್ಷಕ

First published: November 21, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading