ಬೆಂಗಳೂರು: ನಗರದ ಮಾರ್ಕೆಟ್ ಫ್ಲೈ (Bengaluru KR Market) ಓವರ್ನಿಂದ ಅನಾಮಿಕ ವ್ಯಕ್ತಿಯೋರ್ವ ಹಣ ಮಳೆಯನ್ನೇ ಸುರಿಸಿದ್ದಾನೆ. ಇಂದು ಮಧ್ಯಾಹ್ನದ ವೇಳೆ ಫ್ಲೈ ಓವರ್ ಮೇಲೆ ಬಂದಿದ್ದ ವ್ಯಕ್ತಿ ಚೀಲದಿಂದ ಹಣವನ್ನು ತೆಗೆದು ಜನರ ಮೇಲೆ ಎಸೆದಿದ್ದಾನೆ. ಹಣ ಎಸೆಯುವ ದೃಶ್ಯ ಮೊಬೈಲ್ (Mobile) ನಲ್ಲಿ ಸೆರೆಯಾಗಿದ್ದು, ಹಣ (Money) ಹಾಯ್ದುಕೊಳ್ಳಲು ಜನರು ಮುಗಿಬಿದ್ದಿದ್ದರು. ಅಪಚಿರ ವ್ಯಕ್ತಿ ಹತ್ತು ರೂಪಾಯಿ ನೋಟಗಳನ್ನು ಫ್ಲೈ ಓವರ್ನಿಂದ ಎಸೆದು ಹೋಗಿದ್ದು, ಇನ್ನು ಹಣ ಎಸೆಯುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೆಲ ಜನರು ಹಣ ಎಸೆಯಬೇಡಿ ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಈತ ಏಕೆ ಈ ರೀತಿ ಹಣ ಎಸೆಯುತ್ತಿದ್ದಾನೆ ಎಂದು ಕಂಡು ಕ್ಷಣ ಕಾಲ ಶಾಕ್ ಹಾಕಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತು ಹಣ ಎಸೆದು ವ್ಯಕ್ತಿ ಹೋಗಿದ್ದಾನೆ. ಹತ್ತು ರೂಪಾಯಿ ನೋಟುಗಳನ್ನ ವ್ಯಕ್ತಿ ಎಸೆದು ಹೋಗಿದ್ದು, ಆದರೆ ಎಷ್ಟು ನೋಟು ಎಸೆದಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣ ಎಸೆದು ಹೋದ ವ್ಯಕ್ತಿ ಪತ್ತೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಲೇಡೀಸ್ ಟಾಯ್ಲೆಟ್ ಒಳಗೆ ನುಗ್ಗಿದ್ದವನನ್ನು ಹಿಡಿಯೋಕೆ 3 ದಿನ- 300 ಸಿಸಿಟಿವಿ ಬೇಕಾಯ್ತು! ಇವ್ನ ಕತೆ ಕೇಳಿ
ಏಕಾಏಕಿ ವ್ಯಕ್ತಿ ಹಣ ಎಸೆದ ಪರಿಣಾಮ ಸ್ಥಳದಲ್ಲಿ ಕ್ಷಣ ಕಾಲ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಆದರೆ ಕೂಡಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಜನರನ್ನು ಸ್ಥಳದಿಂದ ಕಳುಹಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಹಣ ಎಸೆಯುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ವ್ಯಕ್ತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಆತ ಎಸೆಯುತ್ತಿರುವ ಹಣವನ್ನು ತೆಗೆದುಕೊಳ್ಳಲು ಜನ ರಸ್ತೆಗೆ ಬರ್ತಿದ್ದಾರೆ. ಈ ವೇಳೆ ಯಾರಿಗಾದರೂ ಅಪಘಾತ ಆದ್ರೆ ಏನು ಮಾಡೋದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Bhavani Revanna: ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ; ವೇದಿಕೆಯಲ್ಲಿ ಸ್ವಯಂ ಘೋಷಿಸಿಕೊಂಡ ಭವಾನಿ ರೇವಣ್ಣ
ಹಣ ಎಸೆದು ಹೋದ ವ್ಯಕ್ತಿ ಬೆಂಗಳೂರಿನ ನಿವಾಸಿ ಅರುಣ್ ಎನ್ನಲಾಗಿದೆ. ಅರುಣ್ ವೃತ್ತಿಯಲ್ಲಿ ಕಬಡ್ಡಿ ಆಟಗಾರ ಹಾಗೂ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಆದರೆ ಈ ರೀತಿ ಏಕೆ ಹಣ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬ್ಯಾಗ್ನಲ್ಲಿ ಹಣ ತಂದಿದ್ದ ಅರುಣ್, ಫ್ಲೈ ಓವರ್ ಮೇಲಿಂದ ಜನರು ಇರುವ ಕಡೆ ಹಣ ಎಸೆದು ಸ್ಥಳದಿಂದ ತೆರಳಿದ್ದರು. ವಿಡಿಯೋ ನೋಡಿದ ಹಲವರು ಕತ್ತಲ್ಲಿ ದೊಡ್ಡ ಗಡಿಯಾರ ನೇತ್ಹಾಕಿಕೊಂಡು ಹಣ ಎಸೆದಿದ್ದು ಏಕೆ ಎಂದು ತಲೆಕೆಡಿಸಿಕೊಂಡಿದ್ದಾರೆ.
ಅರುಣ್ಗೆ ಪೊಲೀಸರ ಕರೆ
ಯಾವುದೇ ಸಿನಿಮಾದಲ್ಲಿ ಆಗಸದಿಂದ ಸಿನಿಮೀಯ ರೀತಿಯಲ್ಲಿ ಹಣ ಎಸೆದ ಬಳಿಕ ಪ್ರತಿಕ್ರಿಯೆ ನೀಡಿರೋ ಅರುಣ್, ತಾನು ಯಾವುದೇ ರೀಲ್ಸ್ ಮಾಡೋಕೆ ಹಣ ಎಸೆದಿಲ್ಲ. ಒಂದು ಉದ್ದೇಶ ಇಟ್ಕೊಂಡು ಈ ರೀತಿ ಮಾಡಿದ್ದೀನಿ. ನನಗೆ ಸ್ವಲ್ಪ ಸಮಯ ಕೊಟ್ಟರೆ ಮಾತನಾಡುತ್ತೇನೆ. ಪೊಲೀಸರು ಈಗಾಗಲೇ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ