Crime News: ಶೇಂಗಾ ಕಟಾವು ಮಾಡೋಣ ಎಂದು ಪತ್ನಿಯನ್ನ ಜಮೀನಿಗೆ ಕರೆದೊಯ್ದು ಕತ್ತು ಕುಯ್ದ ಪತಿ

ಏಪ್ರಿಲ್ 14 ಬೆಳಗ್ಗೆ  ಜಮೀನಿಗೆ ಹೋಗಿ ಶೇಂಗಾ ಕಟಾವು ಮಾಡೋಣ ಅಂತ ಪತ್ನಿ ನೇತ್ರಾವತಿಯನ್ನ ಪುಸಲಾಯಿಸಿ ಜಮೀನಿಗೆ ಕರೆದೊಯ್ದ ಕೊಲೆ ಆರೋಪಿ ದ್ಯಾಮಣ್ಣ  ಪತ್ನಿಯ ಕತ್ತ ಕೊಯ್ದು ಅಮಾನವೀಯವಾಗಿ ಕೊಂದುಬಿಟ್ಟಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಏ.16):  ಪತ್ನಿ ಪರ ಪುರುಷನ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಾಳೆ ಅನ್ನೋ ಅನುಮಾನ ಪಟ್ಟ ಪತಿರಾಯ (Husband) ಪತ್ನಿಯ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದ. ಅಲ್ಲದೇ ಸಂಬಂಧಿಕರಿಗೆ ಫೋನ್ ಮಾಡಿ ಹೇಳಿ ಪೋಲೀಸ್ ಠಾಣೆಗೆ ತೆರಳಿ ಶರಣಾಗಿರೋ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ. ಸಮಾಜದ ಎದುರು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಸಂಗಾತಿಗೆ ಮಂಗಳ ಸೂತ್ರದ ಮೂರು ಗಂಟು ಬಿಗಿದ್ರೆ ಸಾಕು ಆಕೆ ತನ್ನ ಸರ್ವಸ್ವವನ್ನೂ ಬಿಟ್ಟು ಗಂಡನ ಜೊತೆ ಸಂಸಾರ ನೌಕೆಗೆ ಹೆಜ್ಜೆ ಹಿಡುತ್ತಾಳೆ. ಅಲ್ಲಂದ ಪತಿ ಪತ್ನಿ ಇಬ್ಬರೂ ನನಗೆ ನೀನು, ನಿನಗೆ ನಾನು ಅಂತ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಂಬಿಕೆಯಿಂದ ಸಾಗೋದೆ ದಾಂಪತ್ಯ. ಅದರಲ್ಲೂ ಗಂಡ ಹೆಂಡತಿ ನಡುವೆ ಎಂಥದ್ದೇ ಕಷ್ಟ ನಷ್ಟಗಳು ಬಂದರೂ ಅವುಗಳನ್ನ ಮೆಟ್ಟಿ ನಿಂತು ಜೀವನ (Life)ಸಾಗಿಸಿದ್ರೆ ಬದುಕು ಸಾರ್ಥಕವಾಗುತ್ತೆ ಅನ್ನೋದು ಹಿರಿಯರು, ಅನುಭವಿಗಳ ಅಭಿಪ್ರಾಯ.

ಇವುಗಳನ್ನ ಅನುಸರಿಸಿ ಸಂಸಾರ ನಡೆಸಬೇಕಾದ್ದು ಪತಿ ಪತ್ನಿಯರ ಕರ್ತವ್ಯವೂ ಹೌದು. ಆದರೇ ಪತ್ನಿ ಆರು ವರ್ಷಗಳ ಹಿಂದೆ ಯಾವುದೋ ಪರ ಪರುಷನ ಸಹವಾಸ ಮಾಡಿದ್ದಳು ಅನ್ನೋ ಅನುಮಾನ ಪಟ್ಟ ಪತಿ ಪತ್ನಿಯ ಕತ್ತು ಕೊಯ್ದು ಆರು ವರ್ಷದ ಸೇಡು ತೀರಿಸಿಕೊಂಡು ತಾನೇ ಪೋಲೀಸರಿಗೆ ಶರಣಾಗಿದ್ದು ದಾಂಪತ್ಯ ಜೀವನದ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುತ್ತಿದೆ.

ಪಾಪಿ ಗಂಡನಿಂದಲೇ ಬರ್ಬರ ಕೊಲೆ

ಇದು ನಡೆದಿರೋದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು ಗ್ರಾಮದಲ್ಲಿ. ಇಲ್ಲಿ ಪಾಪಿ ಗಂಡನಿಂದಲೇ ಬರ್ಬರ ಕೊಲೆಯಾಗಿರೋದು ನೇತ್ರಾವತಿ. ಈಕೆ ಕಳೆದ 12 ವರ್ಷಗಳ ಹಿಂದೆ ಗ್ರಾಮದ ದ್ಯಾಮಣ್ಣನ ಜೊತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಈಗಾಗಲೇ ಎರಡು ಗಂಡು ಮಕ್ಕಳೂ ಕೂಡಾ ಇವೆ.

ಪತ್ನಿ ನೇತ್ರಾವತಿ ಶೀಲ ಶಂಕಿಸಿ ಪತಿ ದ್ಯಾಮಣ್ಣ ಆಗಾಗ ಗಾಲಾಟೆ

ಇವರಿಬ್ಬರ ಜೀವನ ಪ್ರಾರಂಭದಲ್ಲಿ ಚೆನ್ನಾಗಿಯೇ ಇತ್ತು, ಆದರೇ ವರ್ಷಗಳು ಕಳೆದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿ ಪತ್ನಿ ನೇತ್ರಾವತಿ ಶೀಲ ಶಂಕಿಸಿ ಪತಿ ದ್ಯಾಮಣ್ಣ ಆಗಾಗ ಗಾಲಾಟೆ ಮಾಡುತ್ತಿದ್ದನಂತೆ. ಹೀಗೆ ಗಲಾಟೆ ನಾಡೆದಾಗ ಸಂಬಂಧಿಕರು ಕೊಲೆಯಾಗಿರೋ ರೂಪಾಗೆ ಬುದ್ದಿ ಹೇಳಿದ್ದರು. ಅಲ್ಲದೇ ಪತಿ ದ್ಯಾಮಣ್ಣಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿ ಅಂತ ಹೇಳಿದ್ರಂತೆ.

ಅನುಮಾನ ಪಟ್ಟಿದ್ದ ಪತಿ ದ್ಯಾಮಣ್ಣ

ಅದರಂತೆ ಕೊಲೆಯಾಗಿರೋ ನೇತ್ರಾವತಿ ನಡೆತೆ ತಿದ್ದಿಕೊಂಡು ಜೀವನ ಸಾಗಿಸುತ್ತಿದ್ದಳಂತೆ. ಆದರೇ ಅನುಮಾನಂ ಪೆದ್ದ ರೋಗಂ ಅನ್ನೋ ಹಾಗೆ ಪತ್ನಿ ಮೇಲೆ ಅನುಮಾನ ಪಟ್ಟಿದ್ದ ಪತಿ ದ್ಯಾಮಣ್ಣ ಮಾತ್ರ ಆ ಸೇಡನ್ನ ಹಾಗೇ ಮುಂದುವರೆಸಿದ್ದಾನೆ ಅನ್ನೋದಕ್ಕೆ ಈ ಕೊಲೆ ಸಾಕ್ಷಿ ಹೇಳುತ್ತದೆ.

ಇದನ್ನೂ ಓದಿ: K.S Eshwarappa: ರಾಜೀನಾಮೆ ಗಡಿಬಿಡಿಯಲ್ಲೇ 29 ಅಧಿಕಾರಿಗಳ ವರ್ಗಾವಣೆ; ಈಶ್ವರಪ್ಪ ಮೇಲೆ ಮತ್ತೊಂದು ಆರೋಪ

ಏಪ್ರಿಲ್ 14 ಬೆಳಗ್ಗೆ  ಜಮೀನಿಗೆ ಹೋಗಿ ಶೇಂಗಾ ಕಟಾವು ಮಾಡೋಣ ಅಂತ ಪತ್ನಿ ನೇತ್ರಾವತಿಯನ್ನ ಪುಸಲಾಯಿಸಿ ಜಮೀನಿಗೆ ಕರೆದೊಯ್ದ ಕೊಲೆ ಆರೋಪಿ ದ್ಯಾಮಣ್ಣ  ಪತ್ನಿಯ ಕತ್ತ ಕೊಯ್ದು ಅಮಾನವೀಯವಾಗಿ ಕೊಂದುಬಿಟ್ಟಿದ್ದಾನೆ. ಅಲ್ಲದೇ ತಾನು ಮಹಾನ್ ಕಾರ್ಯ ಮಾಡಿದ್ದೇನೆ ಅನ್ನೋ ಹಾಗೆ ಕೊಲೆ ಮಾಡಿದ್ದನ್ನ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ತಿಳಸಿ ಪೋಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಚಿತ್ರದುರ್ಗ ಎಸ್ಪಿ ಪರುಶುರಾಮ್

ಇನ್ನೂ ಆರೋಪಿ ದ್ಯಾಮಣ್ಣ ಠಾಣೆಗೆ ಬಂದು ಕೊಲೆ ವಿಚಾರ ಹೇಳುತ್ತಿದ್ದಂತೆ ಚಳ್ಳಕೆರೆ ಪೋಲೀಸರು, ಚಿತ್ರದುರ್ಗ ಎಸ್ಪಿ ಪರುಶುರಾಮ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಸಂಬಂಧ ದೂರು ನೀಡಿರುವ ನೇತ್ರಾವತಿ ಸಂಬಂಧಿಕರು ಕೊಲೆ ಸಂಪೂರ್ಣ ತನಿಖೆ ಆಗಬೇಕು, ಬೇರೆಯವರ ಕೈವಾಡವೂ ಇದೆ ಅದನ್ನ ಬಯಲು‌ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಅಂರ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: Rain Update: ಬೆಂಗಳೂರಿನಲ್ಲಿ ಮತ್ತೆ ಮಳೆಯಾಗಿದೆ; ಮುಂದಿನ 3 ದಿನಗಳ ಕಾಲ ಅಬ್ಬರಿಸಲಿದ್ದಾನೆ ವರುಣ

ಈ ಸಂಬಂಧ ದೂರು ದಾಖಲು ಮಾಡಿಕೊಂಡಿರುವ ಚಳ್ಳಕೆರೆ ಪೋಲೀಸರು ತನೆಖೆ ಮುಂದುವರೆಸಿದ್ದಾರೆ. ಆದರೇ ತಂದೆ ತಾಯಿಗಳ ಆಶ್ರದಲ್ಲಿ ಭವಷ್ಯದ ಕನಸು ಕಂಡು ಬದುಕಿ ಬಾಳಬೇಕಿದ್ದ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಇದರಿಂದ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆ ಮಾತು ಸತ್ಯವಾಗಿದೆ.
Published by:Divya D
First published: