ಕೊಲೆ ಮಾಡಿ ಹೆಣ ಎಸೆಯುವ ಚಾರ್ಮಾಡಿ ಘಾಟಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!; ಅನುಮಾನ ಮೂಡಿಸಿದ ಘಟನೆ

ಆತ ವಿಷ ಕುಡಿದು ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ, ವಿಷ ಕುಡಿದವರ ಬಾಯಲ್ಲಿ ನೊರೆ ಇರುತ್ತೆ. ಈತನ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿದೆ.

ಆತ್ಮಹತ್ಯೆ ನಡೆದ ಸ್ಥಳ

ಆತ್ಮಹತ್ಯೆ ನಡೆದ ಸ್ಥಳ

  • Share this:
ಚಿಕ್ಕಮಗಳೂರು (ಆಗಸ್ಟ್​ 20) : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟನ್ನು ಕೊಲೆಗಡುಕರು ತಮ್ಮ ಸೇಫ್ ಪ್ಲೇಸ್ ಮಾಡಿಕೊಂಡಿದ್ದರು. ಎಲ್ಲೋ ಕೊಲೆ ಮಾಡಿ ಶವವನ್ನು ತಂದು ಚಾರ್ಮಾಡಿ ಘಾಟ್​​ನ ಸಾವಿರಾರು ಅಡಿ ಆಳದ ದಟ್ಟಕಾನನದೊಳಗೆ ಎಸೆದು ಹೋಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಚಾರ್ಮಾಡಿ ಘಾಟ್​ನಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ವ್ಯಕ್ತಿಯೋರ್ವ ಮಲಯ ಮಾರುತದ ಬಳಿ ಕಾರ್ ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನ ಕಾರಿನಲ್ಲಿ ಸಿಕ್ಕ ದಾಖಲೆಗಳ ಅನ್ವಯ 43 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಕಾರಿನ ಪಕ್ಕ ಕೆಳಭಾಗದಲ್ಲಿ ತುಸು ದೂರ ವಿಷದ ಬಾಟಲಿ ಕೂಡ ಪತ್ತೆಯಾಗಿದೆ. ಆದರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದಿನ್ನು ಸಾಬೀತಾಗಿಲ್ಲ. ಪ್ರಾಥಮಿಕ ಹಂತವಾಗಿ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆದಿದ್ದು, ಸದ್ಯಕ್ಕೆ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.ಆತ ವಿಷ ಕುಡಿದು ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ, ವಿಷ ಕುಡಿದವರ ಬಾಯಲ್ಲಿ ನೊರೆ ಇರುತ್ತೆ. ಈತನ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿದೆ. ಆತನ ಮೊಬೈಲ್ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿದೆ. ಮೊಬೈಲ್ನಲ್ಲಿ 20 ಮಿಸ್ ಕಾಲ್ ಇದೆ. ಮೃತ ವ್ಯಕ್ತಿ ಕಾರಿನ ಎಡಬದಿಯಲ್ಲಿ ಕೂತಿದ್ದಾನೆ. ಮೃತ ವ್ಯಕ್ತಿಯ ಪರ್ಸಸನಾಲಿಟಿ ಚೆನ್ನಾಗಿದ್ದು ಕಾರಿನ ಡ್ರೈವರ್ ಸೀಟ್ ತುಂಬಾ ಮುಂದೆ ಬಂದಿದೆ. ಅಂದರೆ, ತೆಳ್ಳಗಿನ ವ್ಯಕ್ತಿ ಕಾರನ್ನ ಡ್ರೈವ್ ಮಾಡಿರುವಂತೆ ಭಾಸವಾಗಿದೆ.

ಅಷ್ಟೆ ಅಲ್ಲದೆ ಮೃತ ನಾಗರಾಜ್ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ಗಿರೀಶ್ ಎಂಬುವನು ನನಗೆ 26 ಸಾವಿರ ಹಣ ಕೊಡಬೇಕು. ನನ್ನ ಬೈಕ್ ಅವನಿಗೆ ಕೊಟ್ಟಿದ್ದೇನೆ ಎಂದು ಬರೆದಿಟ್ಟಿದ್ದಾನೆ. ಜೊತೆಗೆ, ನನ್ನ ಪತ್ನಿ ಲಕ್ಷ್ಮಿಯನ್ನ ಕಳೆದುಕೊಂಡ ಮೇಲೆ ನನಗೆ ಜೀವನವೇ ಬೇರೆಯಾಗಿದೆ. ನನ್ನ ಜೀವನವೇ ಅವಳಾಗಿದ್ದಳು. ಅವಳನ್ನ ಬಿಟ್ಟರೆ ನನಗೆ ಜೀವವೇ ಇಲ್ಲ. ಅವಳ ದಾರಿಗೆ ನಾನು ಸಾಗುವೆ ಎಂದು ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕ್ಷಮೆ ಕೋರಿ ನಟರಾಜ್​ ಡೆತ್ ನೋಟ್ ಬರೆದಿಟ್ಟಿದ್ದಾನೆ. ವಿಷ ಕುಡಿದು ಆತ್ಮಹತ್ಯೆ ಶರಣಾಗಿದ್ದರು ಕೂಡ ಸ್ಥಳದಲ್ಲಿನ ವಾತಾವರಣ ನೋಡಿದರೆ ಅನುಮಾನ ಮೂಡುವಂತಿದ್ದು ಬಣಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Published by:Rajesh Duggumane
First published: