ಇಬ್ಬರು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು (Love Marriage). ಇವರ ಸಂಸಾರಕ್ಕೆ ಇಬ್ಬರು ಮುದ್ದಾದ ಗಂಡು ಮಕ್ಕಳು (Children) ಸಹ ಇದ್ರು. ಮದುವೆಯಾದ ನಾಲ್ಕೈದು ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಐದಾರು ವರ್ಷಗಳಿಂದ ಸಂಸಾರದ ತಾಳ ತಪ್ಪಿತ್ತು. ಪದೇ ಪದೇ ಮನೆಯಲ್ಲಿ ಪತಿ ಪತ್ನಿ (Husband Wife Clash) ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತ್ನಿ ಠಾಣೆಗೆ (Police Station) ದೂರು ನೀಡಲು ಹೋಗುತ್ತಿದ್ದಂತೆ ಹಿಂದೆಯೇ ಬಂದ ಪತಿ ಠಾಣೆಯ ಮುಂಭಾಗವೇ ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು (Suicide Attempt), ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆ (Jigani Police Station) ಮುಂಭಾಗ ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬನ್ನೇರುಘಟ್ಟದಲ್ಲಿ ವಾಸವಾಗಿದ್ದ ಜೋಡಿ
ಚಿಕ್ಕಮಗಳೂರು ಮೂಲದ ರತೀಶ್ ಪೊಲೀಸ್ ಠಾಣೆ ಮುಂಭಾಗ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಕಳೆದ ಹಲವು ವರ್ಷಗಳ ಹಿಂದೆ ಜಿಗಣಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರತೀಶ್ ಕಳೆದ ಹತ್ತು ವರ್ಷಗಳ ಹಿಂದೆ ಕೊಳ್ಳೇಗಾಲ ಸಮೀಪದ ಸತ್ತೆಗಾಲ ವಾಸಿ ಕವಿತಾ ಜಿಗಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವಾಗ ಪ್ರೀತಿಸಿ ಮದುವೆಯಾಗಿ ಬನ್ನೇರುಘಟ್ಟದಲ್ಲಿ ಮಡದಿಯೊಂದಿಗೆ ನೆಲೆಸಿದ್ದ.
ಇದನ್ನೂ ಓದಿ: Percentage Scam: ಶಿಕ್ಷಣ ಇಲಾಖೆಗೂ ಕಾಲಿಟ್ಟ ಕಮೀಷನ್ ಭೂತ! ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಪ್ರಧಾನಿಗೆ ದೂರು!
ಇವರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳು ಕೂಡ ಜನಿಸಿದ್ದರು. ಎಲ್ಲವೂ ಚೆನ್ನಾಗಿತ್ತು ಎನ್ನುವಷ್ಟರಲ್ಲಿ ಪತಿ ಪತ್ನಿ ನಡುವೆ ಕಲಹ ಶುರುವಾಗಿತ್ತು. ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿದರೂ ಸರಿ ದಾರಿಗೆ ಬಂದಿರಲಿಲ್ಲ.
ಆಸ್ಪತ್ರೆ ಬಳಿ ಬಂದು ಗಲಾಟೆ
ಎರಡು ದಿನದ ಹಿಂದೆ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ನಿ ಜೊತೆ ಪತಿ ರತೀಶ್ ಜಗಳ ತೆಗೆದಿದ್ದ ಎನ್ನಲಾಗಿದೆ. ಪಕ್ಕದಲ್ಲಿಯೇ ಇರುವ ಜಿಗಣಿ ಪೊಲೀಸರು ಗಲಾಟೆ ಗಮನಿಸಿ ಗದರಿಸಿ ಕಳುಹಿಸಿದ್ರು, ಮತ್ತೆ ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಂದಿದ್ದ ರತೀಶ್ ಪತ್ನಿ ಜೊತೆ ವಾಗ್ವಾದ ನಡೆಸಿದ್ದನು.
ಕೊನೆಗೆ ಜಿಗಣಿ ಠಾಣೆ ಮುಂಭಾಗವೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ತಿಳಿಸಿದ್ದಾರೆ.
ತಂದೆ ಜೊತೆ ದೂರು ನೀಡಲು ತೆರಳಿದ್ದ ಕವಿತಾ
ಇನ್ನೂ ಕಳೆದ ಎರಡು ದಿನಗಳಿಂದಲೂ ಸಹ ಇಬ್ಬರ ನಡುವೆ ಗಲಾಟೆ ನಡೆದಿದ್ದರಿಂದ ಕವಿತಾ ಪೋಷಕರಿಗೆ ವಿಚಾರ ತಿಳಿಸಿ ತಂದೆ ಮಾದೇವರನ್ನ ಜಿಗಣಿಗೆ ಕರೆಸಿಕೊಂಡು ಪತಿಯ ವಿರುದ್ಧ ದೂರು ನೀಡಲು ಠಾಣೆಗೆ ತೆರಳಿದ್ದಳು.
ಶೇ.80ರಷ್ಟು ಸುಟ್ಟ ಗಾಯ
ಪತಿಯು ಸಹ ಪತ್ನಿಯ ಹಿಂದೆಯೇ ಬಂದು ಠಾಣೆಯ ಎದುರಿನಲ್ಲಿ ತನ್ನ ದ್ವಿಚಕ್ರ ವಾಹನವನ್ನ ನಿಲ್ಲಿಸಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನ ಗಮನಿಸಿದ ಠಾಣೆಯಲ್ಲಿದ್ದ ಪೋಲೀಸರು ರಕ್ಷಣೆ ಮಾಡಿ ಕೂಡಲೇ ಆಂಬುಲೆನ್ಸ್ ಮೂಲಕ ರತೀಶ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶೇಕಡಾ 80 ರಷ್ಟು ದೇಹ ಸುಟ್ಟ ಗಾಯಗಳಿಂದ ಕೂಡಿದ್ದು, ಗಾಯಾಳು ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: Money Theft: ಚೀಟಿ ಕಟ್ಟಲು ಸ್ನೇಹಿತನ 24 ಲಕ್ಷ ಕದ್ದ ಖದೀಮ, ಮಾಟ-ಮಂತ್ರದ ಕಥೆ ಕಟ್ಟಿ ದೂರು ಕೊಟ್ಟವ ಅರೆಸ್ಟ್!
ಜೀವನ್ಮರಣದ ನಡುವೆ ಹೋರಾಟ
ಒಟ್ಟಿನಲ್ಲಿ ಪತಿ-ಪತ್ನಿಯ ಜಗಳ ಉಂಡು ಮಲಗುವ ತನಕ ಇರದೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಸೀಮಿತವನ್ನ ಕಳೆದುಕೊಂಡ ವ್ಯಕ್ತಿ ಪತ್ನಿಯ ಮೇಲಿನ ಕೋಪಕ್ಕೆ ಠಾಣೆಯ ಎದುರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ