Hubli Crime: ತಂಗಿಯನ್ನು ಚುಡಾಯಿಸಿದ ಯುವಕನಿಗೆ ಚಾಕುವಿನಿಂದ ಇರಿದ ಅಣ್ಣ!

ಯುವತಿಯನ್ನು ಚುಡಾಯಿಸಿದ್ದಾನೆಂದು ಆಕೆಯ ಸಹೋದರರು ಯುವಕನೋರ್ವನ ಮೇಲೆ ಅಟ್ಯಾಕ್ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿರೋ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ರೌಡಿ ಪರೇಡ್ ನಡೆಸಿ ವಾರ್ನ್ ಮಾಡಿದ ಬೆನ್ನ ಹಿಂದೆಯೇ ಈ ಘಟನೆ ನಡೆದಿರೋದು ಅಚ್ಚರಿಗೆ ಕಾರಣವಾಗಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಅಪರಾಧಗಳ (Crime Cases) ಹೆಚ್ಚಳದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳ (Police station) ವ್ಯಾಪ್ತಿಯಲ್ಲಿ ರೌಡಿ ಶೀಟರ್ ಗಳ ಪರೇಡ್ (Rowdy Sheeter Parade) ಮಾಡಲಾಗಿತ್ತು. ರೌಡಿಗಳಿಗೆ ವಾರ್ನ್ ಮಾಡಿಯೂ ಕಳುಹಿಸಿಕೊಡಲಾಗಿತ್ತು. ಇದರ ಬೆನ್ನ ಹಿಂದೆಯೇ ಸಹೋದರರಿಂದ ಯುವಕನೋರ್ವನ ಮೇಲೆ ಅಟ್ಯಾಕ್ ನಡೆದಿದೆ. ಈ ಘಟನೆಯಿಂದಾಗಿ ಪೊಲೀಸರು ಅಂದ್ರೆ ಭಯವೇ ಇಲ್ಲವೆ ಅನ್ನೋ ಪ್ರಶ್ನೆ ಎದುರಾಗಿದೆ. ಸಹೋದರಿಯನ್ನು ಚುಡಾಯಿಸಿದನೆಂದು ಆರೋಪ ವ್ಯಕ್ತಿಯೋರ್ವನಿಗೆ ಸಹೋದರರು ಮನಬಂದಂತೆ ಚಾಕುವಿನಿಂದ ಇರಿದ ಘಟನೆ ಹಳೆ ಹುಬ್ಬಳ್ಳಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸುತ್ತಿದ್ದಾನೆಂದು ಸಹೋದರರು ಚಂದ್ರಶೇಖರ್ ಎಂಬಾತನಿಗೆ ಸಹೋದರರು ಚಾಕುವಿನಿಂದ ಇರಿದಿದ್ದಾರೆ. ಕಿರಣ್ ಹಾಗೂ ಅಭಿ ಎಂಬುವರು ಚಾಕುವಿನಿಂದ ಇರಿದಿದ್ದಾರೆಂದು ಗಾಯಾಳು ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿರೋ ಚಂದ್ರಶೇಖರ್ ಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳು ಎಸ್ಕೇಪ್

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಚಾಕುವಿನಿಂದ ಇರಿದ ಕೂಡಲೇ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಳೆದ ಎರಡು - ಮೂರು ವಾರಗಳಿಂದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧ ಪ್ರಕರಣಗಳು ಹಳೆ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದವುಗಳೆನ್ನೋದು ವಿಶೇಷ.

ಇದನ್ನೂ ಓದಿ: Crime News: ಮರ್ಮಾಂಗಕ್ಕೆ ಹೊಡೆದು ಪತಿಯನ್ನು ಕೊಂದ ಪತ್ನಿ! ಎದೆನೋವಿಂದ ಗಂಡ ಸತ್ತ ಎಂದು ಡ್ರಾಮಾ

ಕಟ್ಟುನಿಟ್ಟಿನ ಕ್ರಮ ಖಚಿತ ಎಂದ ಲಾಭೂ ರಾಮ್ 
ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಳದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರೋದಾಗಿ ಪೊಲೀಸ್ ಕಮೀಷನರ್ ಲಾಭೂ ರಾಮ್ ತಿಳಿಸಿದ್ದಾರೆ. ರೌಡಿ ಶೀಟರ್ ಗಳ ಪರೇಡ್ ನಂತರ 30 ಜನರ ಮೇಲೆ ಪ್ರವೆಂಟಿವ್ ಆ್ಯಕ್ಷನ್ ರಿಪೋರ್ಟ್ ಸಿದ್ಧಪಡಿಸಲಾಗಿದೆ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಮತ್ತು ಉತ್ತರ ವಲಯದ ರೌಡಿ ಶೀಟರ್ ಗಳ ಪರೇಡ್ ಮಾಡಲಾಗಿತ್ತು. 180 ರೌಡಿ ಶೀಟರ್ ಗಳ ಪರೇಡ್ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಅವರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರೋರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಅಪರಾಧ ಚಟುವಟಿಕೆಗಳ ಮೇಲೆ ತೀವ್ರ ನಿಗಾ

30 ಜನರ ಮೇಲೆ ಪ್ರವೆಂಟಿವ್ ಆ್ಯಕ್ಷನ್ ರಿಪೋರ್ಟ್ ಸಿದ್ಧಪಡಿಸಲಾಗಿದೆ. ಅಕ್ರಮವಾಗಿ ಆಯುಧ ಇಟ್ಟುಕೊಂಡಿದ್ದ ಇಬ್ಬರ ಮೇಲೆ ಎಫ್.ಐ.ಆರ್. ಸಹ ದಾಖಲಿಸಲಾಗಿದೆ. ಬೆಂಡಿಗೇರಿ ಹಾಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವವರ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಗೂಂಡಾ ಕಾಯ್ದೆ ಅಡಿ ಓರ್ವನ ಮೇಲೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಉಳಿದವರ ಅಪರಾಧ ಚಟುವಟಿಕೆಗಳ ಮೇಲೂ ತೀವ್ರ ನಿಗಾ ಇಡಲಾಗಿದೆ ಎಂದು ಲಾಭೂ ರಾಮ್ ತಿಳಿಸಿದ್ದಾರೆ.

ಮತ್ತೊಂದು ಅಪರಾಧ ಪ್ರಕರಣ 

ಖತರ್ನಾಕ್  ಪಾಪಿ ಪತ್ನಿ ಪತಿಯ ಆಸ್ತಿ ಆಸೆಗೆ ಕೈ ಹಿಡಿದ ಗಂಡನನ್ನೇ   ಗುಪ್ತಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ  ಜಿಲ್ಲೆಯಲ್ಲಿ ನಡೆದಿದೆ. ಹೆಣವಾಗಿ ಬಿದ್ದಿರೋ ಮೃತದೇಹ, ಅಮಾಯಕ ಜೀವದ ಹತ್ಯೆ ತಿಳಿದು ಸಂಬಂಧಿಕರ ಆಕ್ರಂದನ. ಆಸ್ತಿಗಾಗಿ ಗಂಡನ್ನೇ ಬರ್ಬರವಾಗಿ ಹತ್ಯೆ ಮಾಡಿ ಜೈಲು ಸೇರಿರುವ ಕಿರಾತಕ ಪತ್ನಿ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಕೆಳಗೋಟೆ ಬಡವಾಣೆಯಲ್ಲಿ.
Published by:Kavya V
First published: