Kolar: ಬಾರ್ ಗಲಾಟೆ;10 ರೂಪಾಯಿ, ವಾಟರ್ ಬಾಟಲ್​ಗಾಗಿ ಕ್ಯಾಶಿಯರ್ ಕೊಲೆ

ಚಾಕು ಇರಿತದ ರಭಸದಿಂದ ಮೋಹನ್ ಹೊಟ್ಟೆಯೊಳಗಿನ ಕುರುಳು ಹೊರಕ್ಕೆ ಕಿತ್ತುಬಂದಿದ್ದು, ಏನಾಗಿತು ಎಂದು ಮೋಹನ್ ನೋಡುವಷ್ಟರಲ್ಲಿ ರಕ್ತ ಹೊರಕ್ಕೆ ಚಿಮ್ಮಿ, ಕೆಳಕ್ಕೆ ಕುಸಿದು ಬಿದ್ದಿದ್ದಾರೆ.

ಕೋಲಾರ ಕೊಲೆ ಪ್ರಕರಣ

ಕೋಲಾರ ಕೊಲೆ ಪ್ರಕರಣ

  • Share this:
ಕೋಲಾರ(ಮಾ.17) ನಗರದ ಚಾಲುಕ್ಯ ವೈನ್ ಶಾಪ್ ಎದುರು, ಬಾರ್ ಕ್ಯಾಶಿಯರ್ ಗೆ ಚಾಕು ಇರಿದು ಕೊಲೆ (Murder) ಮಾಡಿರುವ ಘಟನೆ ಕಳೆದ ಸೋಮವಾರ ತಡರಾತ್ರಿ ನಡೆದಿದೆ. ಟೇಕಲ್ ಸರ್ಕಲ್‍ನಲ್ಲಿನ ಶ್ರೀನಿವಾಸ್ ಎನ್ನುವರ ಒಡೆತನದ ಚಾಲುಕ್ಯ ಲಿಕ್ಕರ್ ಶಾಪ್ ಇದ್ದು, ಕಳೆದ 8 ವರ್ಷಗಳಿಂದ ಮೋಹನ್ (Mohan) ಎನ್ನುವರು ಬಾರ್‍ನ ಕ್ಯಾಶಿಯರ್ (Cashier) ಆಗಿ ಕೆಲಸ ಮಾಡ್ತಿದ್ದಾರೆ. ಸೋಮವಾರ  ರಾತ್ರಿ 10 ಗಂಟೆ 8 ನಿಮಿಷಕ್ಕೆ ಸರಿಯಾಗಿ, ಬಾರ್ ನಲ್ಲಿ ಬಿಯರ್ ಬಾಟಲ್ (Beer Bottle) ಖರೀದಿಗೆ ಬಂದ್ ನವಾಜ್ ಹಾಗು ಆರೀಪ್ ಖಾನ್ ಎನ್ನುವ ಇಬ್ಬರು, 175 ರೂಪಾಯಿ ಬೆಲೆಯ ಕಿಂಗ್‍ಪಿಶರ್ ಬಿಯರ್ ಬಾಟಲ್ ಖರೀದಿಸಿ, 10 ರೂಪಾಯಿ ಕಡಿಮೆ ನೀಡಿದ್ದಾರೆ.

ಇದಕ್ಕೆ ಬಾರ್ ಕ್ಯಾಶಿಯರ್ ಮೋಹನ್ ಖ್ಯಾತೆ ತೆಗೆದು, ಹಣ ಸರಿಯಾಗಿ ಕೊಟ್ಟು ಮದ್ಯ ಖರೀದಿಸಿ ಎಂದು ಖಾರವಾಗಿ ಎಚ್ಚರಿಕೆ ನೀಡಿದ್ದಾರೆ, ಇದಕ್ಕೆ ನವಾಜ್ ಹಾಗು ಆರಿಪ್ ಖಾನ್ ಕಟ್ಟದಾಗಿ ಉರ್ದು ಬಾಷೆಯಲ್ಲಿ ಬೈಗುಳ ನೀಡಿದ್ದಾರೆ. ಪಕ್ಕದಲ್ಲಿಯೇ ಇದ್ದ ಪೈರೋಜ್ ಎನ್ನುವ ಮತ್ತೊಬ್ಬರು, ಸರಿಯಾಗಿ ಹಣ ಕೊಟ್ಟು ತಗೊಳ್ಳಿ, ಆವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಅರ್ಥವಾಗೊಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ಬೇಕು ಬೇಕೆಂದೇ ಜಗಳಕ್ಕಿಳಿದ ಗ್ರಾಹಕರು

ಇದಕ್ಕೆ ಪೈರೋಜ್  ಮೇಲೆ ಜಗಳಕ್ಕಿಳಿದ ನವಾಜ್, ಹಾಗು ಆರೀಪ್ ಖಾನ್,  ನಿನ್ನ ಕೆಲಸ ಎಷ್ಟೊ ಅಷ್ಟು ನೋಡಿಕೊ ತಮ್ಮ ತಂಟಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಏಕವಚನದಲ್ಲೆ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೆ ಮುಗಿಯದ ಇಬ್ಬರ ಮೂವರ ನಡುವಿನ ಗಲಾಟೆ, ಗಲಾಟೆಯಲ್ಲಿ  ತೊಡಗಿದ್ದವರನ್ನ ಕ್ಯಾಶಿಯರ್ ಮೋಹನ್ ಬಿಡಿಸಿದ್ದು, ಮತ್ತೆ ಪುನಃ ಬಾರ್ ಗೆ ವಾಪಾಸ್ ಬಂದ, ನವಾಜ್ ಹಾಗು ಆರೀಪ್ ಖಾನ್ ಬಿಯರ್ ಬಾಟಲ್ ಖರೀದಿಸಿ, ವಾಟರ್ ಬಾಟಲ್ ಗಾಗಿ ಮತ್ತೆ ಕ್ಯಾಶಿಯರ್ ಮೋಹನ್ ಜೊತೆಗೆ ಗಲಾಟೆಗೆ ಇಳಿದಿದ್ದಾರೆ.

ತಪ್ಪು ಮಾಡಿದರೂ ದುರಹಂಕಾರಿ ವರ್ತನೆ

ಮದ್ಯ ಕಡಿಮೆ ಬೆಲೆಗೆ ಖರೀದಿ ಮಾಡಿದ್ದು, ಅಲ್ಲದೆ, ವಾಟರ್ ಬಾಟಲ್ ಯಾಕೆ ಕೊಡಬೇಕೆಂದು ಕ್ಯಾಶಿಯರ್ ಮೋಹನ್ ಕೇಳಿದ್ದಾರೆ. ಇದಕ್ಕೆ ಮತ್ತೆ ಗಲಾಟೆಗೆ ಇಳಿದ ಇಬ್ಬರು, ಕೆಟ್ಟ ಮಾತುಗಳಿಂದ ನಿಂದಿಸಿದ್ದಾರೆ. ಬಾರ್ ಕ್ಯಾಶಿಯರ್ ಮೋಹನ್ ಬೆಂಬಲಕ್ಕೆ ಬಂದ ಪೈರೋಜ್, ನೀವು ಇಲ್ಲಿಂದ ಹೋಗಿ ಎಂದು ಎಚ್ಚರಿಕೆ ನೀಡಿದ್ದಾರೆ.

ಚಾಕುವಿನಿಂದ ಇರಿದು ಪರಾರಿ

ಆದರೂ ಗಲಾಟೆ ಮುಂದುವರೆಸಿದ್ದಕ್ಕೆ, ಮತ್ತೊಮ್ಮೆ ಮಧ್ಯ ಪ್ರವೇಶ ಮಾಡಿದ ಕ್ಯಾಶಿಯರ್ ಮೋಹನ್, ಏರು ದನಿಯಲ್ಲಿ ಹೋಗುವಂತೆ ಎಚ್ಚರಿಕೆ ನೀಡಿದ್ದಕ್ಕೆ ಕೆರಳಿದ ನವಾಜ್ ತಮ್ಮ ಆರೀಪ್ ಖಾನ್ ಬಳಿ ಇರಿಸಿದ್ದ ಚಾಕು ತೆಗದುಕೊಂಡು ಕ್ಯಾಶಿಯರ್​ಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ಕುಡುಕರ ಜಗಳದಲ್ಲಿ ಅನ್ಯಾಯವಾಗಿ ಸಾವು

ಚಾಕು ಇರಿತದ ರಭಸದಿಂದ ಮೋಹನ್ ಹೊಟ್ಟೆಯೊಳಗಿನ ಕುರುಳು ಹೊರಕ್ಕೆ ಕಿತ್ತುಬಂದಿದ್ದು, ಏನಾಗಿತು ಎಂದು ಮೋಹನ್ ನೋಡುವಷ್ಟರಲ್ಲಿ ರಕ್ತ ಹೊರಕ್ಕೆ ಚಿಮ್ಮಿ, ಕೆಳಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ನೇಹಿತರು ಕೋಲಾರದ ಎಸ್,ಎನ್ ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು, ಹೆಚ್ಚಿನ ಚಿಕಿತ್ಸೆಗೆ, ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ರವಾನಿಸುವ ಮಾರ್ಗ ಮದ್ಯೆ ಸಾವನ್ನಪಿದ್ದಾರೆ.

ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ

ಗಲಾಟೆಯ ದೃಶ್ಯಗಳು ಬಾರ್ ಸಿಸಿ, ಕೆಮೆರಾದಲ್ಲಿ ಸೆರೆಯಾಗಿದ್ದು, ಚಾಕು ಇರಿತದ ನಂತರ ರಕ್ತದ ಮಡುವಿನಲ್ಲಿ ಕ್ಯಾಶಿಯರ್ ಮೋಹನ್ ಕುಸಿದು ಬೀಳುವ ದೃಶ್ಯಗಳು ಸೆರೆಯಾಗಿದೆ, ಆರ್,ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ, ಮೋಹನ್ ಮೃತದೇಹವನ್ನ ಪೊಲೀಸರು ಹಸ್ತಾಂತರ ಮಾಡಿದ್ದು, ಹುಟ್ಟೂರು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.

ಇದನ್ನೂ ಓದಿ: ಹಿಜಾಬ್ ಸಂಬಂಧ ಕರೆ ನೀಡಿರುವ ನಾಳಿನ Karnataka Bandh ಹೇಗಿರಲಿದೆ? ಕಮಿಷನರ್ ಪಂಥ್ ಸ್ಪಷ್ಟ ಮಾಹಿತಿ

ಆರೋಪಿಗಳಿಬ್ಬರೂ ಕೋಲಾರದವರೇ

ಇನ್ನು ಆರೋಪಿಗಳಾದ ನವಾಜ್ ಹಾಗು ಆರೀಪ್ ಖಾನ್ ಇಬ್ಬರು ಕೋಲಾರ ನಗರದ ಶಾಹಿದ್ ನಗರದ ನಿವಾಸಿಗಳಾಗಿದ್ದು, ಸದ್ಯ ಬೆಂಗಳೂರಿನ ಗೋವಿಂದಪುರ ನಗರದಲ್ಲಿ ನವಾಜ್ ಗ್ಯಾರೇಜ್‍ನಲ್ಲಿ ಕೆಲಸ ಮಾಡ್ತಿದ್ದು, ಆಗಾಗ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದಾನೆ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಆರೀಪ್ ಖಾನ್ ಕೆಲಸವಿಲ್ಲದೆ ಪೋಲಿ ಅಲೆಯುತ್ತಿದ್ದು, ಬೆದರಿಕೆ ಹಾಕಿ ಸುಲಿಗೆ ಮಾಡುವ ಕೆಲಸಗಳನ್ನು ಮಾಡ್ತಿದ್ದಾನೆ ಎಂದು ತಿಳಿದುಬಂದಿದೆ.

ಎ.ಟಿ.ಎಂ ದರೋಡೆಯಲ್ಲಿ ಆರೋಪಿ

ಇನ್ನು ಎರಡು ವರ್ಷದ ಹಿಂದೆ ಎ.ಟಿ.ಎಮ್ ದರೋಡೆ ಪ್ರಕರಣದಲ್ಲಿ ನವಾಜ್ ಆರೋಪಿಯಾಗಿದ್ದು, ಬೇಲ್ ಪಡೆದು ಹೊರಗೆ ಓಡಾಡುತ್ತಿದ್ದಾನೆ ಎಂದು ಕೋಲಾರ ಎಸ್ಪಿ ದೇವರಾಜ್ ಮಾಹಿತಿ ನೀಡಿದ್ದಾರೆ. ಇನ್ನು ಕೊಲೆ ಮಾಡುವ ಮುನ್ನ ಇದೇ ಇಬ್ಬರು ಆರೋಪಿಗಳು ಇನ್ನು ಎರಡು ಬಾರ್‌ ಗಳಲ್ಲಿ ಮದ್ಯದ ವಿಚಾರವಾಗಿ ಖ್ಯಾತೆ ತೆಗೆದು ಗಲಾಟೆ ಮಾಡಿ ಬಂದಿದ್ದಾರೆ,.

ಇದನ್ನೂ ಓದಿ: Sirsi Marikamba Mahotsava: ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಪೊಲೀಸ್​ ಇಲಾಖೆಗೆ ಹೆಚ್ಚಿನ ಶಕ್ತಿ​ ಕೊಡುವಂತೆ ಬಾಳೆಹಣ್ಣಿನ ಮೇಲೆ ಕೋರಿಕೆ

ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿದ್ದು. ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಆರೋಪಿಗಳಾದ ಅಣ್ಣ ತಮ್ಮಂದಿರಾದ, ನವಾಜ್ ಹಾಗು ಆರೀಪ್ ಖಾನ್ ನನ್ನ ಪೊಲೀಸರು ಬಂದಿಸಿದ್ದಾರೆ, ಆದರೆ ಒಂದು ಕುಟುಂಬದ ಆಧಾರ ಸ್ತಂಭವನ್ನ ಕಳೆದುಕೊಂಡ ಪತ್ನಿ ಹಾಗು ಮಕ್ಕಳ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆ ಕಾಡುತ್ತಿದೆ.
Published by:Divya D
First published: