Crime News: 'ಪ್ರೀತ್ಸೆ' ಅಂತ ಪ್ರಾಣ ತಿಂದವ್ನೇ ಪ್ರಾಣ ತೆಗೆಯೋಕೆ ಬಂದ, ಸಾವು-ಬದುಕಿನ ನಡುವೆ ಈಕೆ ಹೋರಾಟ

ಮನೆಯವರ ಮಾತಿಗೆ ಕಟ್ಟು ಬಿದ್ದ ಪ್ರೇಯಸಿ, ಇಷ್ಟವಿಲ್ಲದಿದ್ದರೂ ಬೇರೆ ಮದುವೆಯಾಗಿತ್ತಾಳೆ. ಇತ್ತ ಪ್ರಿಯಕರ ಕುಡಿದು ದೇವದಾಸ್ ಆಗ್ತಾನೆ, ಇಲ್ಲಾಂದ್ರೆ ಮಾಡಬಾರದ್ದು ಮಾಡಿ ಜೈಲಿಗೆ ಹೋಗುತ್ತಾನೆ. ಇಲ್ಲಾಗಿದ್ದೂ ಅದೇ, ಪ್ರೀತಿಸಿದವಳನ್ನೇ ಚುಚ್ಚಿದ ಪ್ರೇಮಿ, ಎಸ್ಕೇಪ್ ಆಗಿದ್ದಾನೆ. ಈಗ ಆಕೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಇದೊಂದು ಭಯಾನಕ ಪ್ರೇಮಕಥೆ (Love Story). ಈಗಂತೂ ಈ ಭಗ್ನ ಪ್ರೇಮಿಗಳು (Lovers) ತಮ್ಮ ಪ್ರಿಯತಮೆಯನ್ನು ಎಷ್ಟು ಪ್ರೀತಿಸಿರುತ್ತಾರೆಯೋ, ಅವರು ಇವರನ್ನು ನಿರಾಕರಿಸಿದ್ದಾಗ ಅಷ್ಟೇ ಭಯಾನಕವಾಗಿ, ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿ ಬಿಡುತ್ತಾರೆ. ಎಷ್ಟೋ ಕೊಲೆ ಪ್ರಕರಣಗಳು (Murder Case) ನಡೆಯುವುದೇ ಈ ಪ್ರೀತಿ ಪ್ರೇಮದ ವಿಷಯಕ್ಕೆ ಎಂದು ಹೇಳಬಹುದು. ಕೆಲವೊಮ್ಮೆ ಹುಡುಗ ಮತ್ತು ಹುಡುಗಿ ಇಬ್ಬರು ಇಷ್ಟಪಟ್ಟು ಪ್ರೀತಿ ಮಾಡಿ ಸುತ್ತಾಡಿ, ಇನ್ನೇನು ಮದುವೆ (Marriage) ಆಗಬೇಕು ಎನ್ನುವಷ್ಟರಲ್ಲಿಯೇ ಯಾರಾದರೂ ಮನೆಯವರು ಅದಕ್ಕೆ ಒಪ್ಪುವುದಿಲ್ಲ. ಹೀಗಾಗಿ ಇಷ್ಟವಿರದ ಮನೆಯವರ ನಿರ್ಧಾರವನ್ನು ಧಿಕ್ಕರಿಸಲು ಆಗದೆ ಆ ಹುಡುಗಿಯು ತಾನು ಪ್ರೀತಿಸಿದ ಹುಡುಗನನ್ನು ನಡುವೆ ಹಾಗೆಯೇ ಬಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗುತ್ತಾಳೆ. ಆಗ ಪ್ರಿಯಕರ ಕುಡಿದು ದೇವದಾಸ್ (Devdas) ಆಗ್ತಾನೆ, ಇಲ್ಲಾಂದ್ರೆ ಮಾಡಬಾರದ್ದು ಮಾಡಿ ಜೈಲಿಗೆ (Jail) ಹೋಗುತ್ತಾನೆ.

  ಕೆಲವೊಮ್ಮೆ ಈ ಪ್ರೀತಿಸಿದ ಹುಡುಗಿಯರೆ ಆ ಹುಡುಗನನ್ನು ಕೊನೆಯ ಕ್ಷಣದಲ್ಲಿ ಏನೋ ಚಿಕ್ಕ ಪುಟ್ಟ ಕಾರಣಕ್ಕೆ ಜಗಳವಾಗಿ ಬಿಟ್ಟು ಬಿಡುವುದನ್ನು ನಾವು ನೋಡಿರುತ್ತೇವೆ. ಹೀಗಾದಾಗ ಇವರನ್ನು ಇಷ್ಟ ಪಟ್ಟು ಪ್ರೀತಿ ಮಾಡಿದ ಹುಡುಗನಿಗೆ ಆ ಪ್ರೀತಿ ಸಿಗದೇ ಇದ್ದಾಗ ಅದನ್ನು ಹೇಗಾದರೂ ಪಡೆಯಬೇಕೆಂದು ಬೇರೆ ಬೇರೆ ಮಾರ್ಗವನ್ನು ಅನುಸರಿಸಿ ಪ್ರೇಮ ಕಥೆ ಆಗುವ ಮುಂಚೆಯೇ ಅದು ಒಂದು ದುರಂತ ಕಥೆಯ ಪ್ರಕರಣವಾಗಿ ಸುದ್ದಿಯಾಗುತ್ತದೆ.

  ಪ್ರೀತ್ಸೆ ಅಂತ ಪ್ರಾಣ ತಿಂದವನೇ ಪ್ರಾಣ ತೆಗೆಯೋಕೆ ಬಂದ!

  ಇಲ್ಲಿ ಅಂತಹದೇ ಒಂದು ಘಟನೆ ನಡೆದಿದೆ. ಇಷ್ಟ ಪಟ್ಟ ಹುಡುಗಿಯನ್ನು ಮದುವೆ ಮಾಡಿಸಿಕೊಡುತ್ತೇವೆ ಎಂದು ಹೇಳಿದ ಅವರ ಕುಟುಂಬದವರು ಇದ್ದಕ್ಕಿದ್ದಂತೆಯೇ ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನೇ ಆ ಯುವಕ ತಲೆ ಕೆಟ್ಟು ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

  ಒಂದೇ ಕಡೆ ಕೆಲಸ ಮಾಡುವಾಗ ಪ್ರೀತಿ

  ನಗರದ ಆಸ್ಪತ್ರೆಯೊಂದರಲ್ಲಿ 38 ವರ್ಷ ವಯಸ್ಸಿನ ಪ್ರಭಾವತಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, 31 ವರ್ಷ ವಯಸ್ಸಿನ ಗಿರೀಶ್ ಸಹ ಅದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಲಾಗಿದೆ.

  ಮಹಿಳೆಯ ಕುಟುಂಬದವರು ಮದುವೆ ಮಾಡಿಕೊಡಲು ನಿರಾಕಸಿದ್ದಕ್ಕೆ ಸಿಟ್ಟಿನಿಂದ ಗಿರೀಶ್ ದೊಡ್ಡಬಳ್ಳಾಪುರ ನಗರದಲ್ಲಿರುವ ಐಬಿ ಸರ್ಕಲ್ ಬಳಿ ತನ್ನ ಪ್ರಿಯತಮೆಗೆ ಅನೇಕ ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ.

  ಇದನ್ನೂ ಓದಿ: Bride Death: ತಲೆ ಮೇಲೆ ಅಕ್ಕಿ ಕಾಳು ಹಾಕಬೇಕಿತ್ತು; ವಿಧಿಯಾಟದಿಂದಾಗಿ ಬಾಯಿಗೆ ಹಾಕುವಂತಾಗಿದೆ; ಆರತಕ್ಷತೆ ವೇಳೆ ಕುಸಿದ ವಧು

  ಸಾವು ಬದುಕಿನ ನಡುವೆ ಪ್ರಿಯತಮೆ ಹೋರಾಟ

  ಪ್ರಭಾವತಿಯು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಆರೋಪಿ ಗಿರೀಶ್ ಶುಕ್ರವಾರ ಬೆಳಿಗ್ಗೆ ಮಹಿಳೆಯ ಮನೆಗೆ ಎರಡು ಚಾಕುಗಳನ್ನು ಇಟ್ಟುಕೊಂಡು ನುಗ್ಗಿ ಮಹಿಳೆಯ ಮೇಲೆ ಏಕಾಏಕಿಯಾಗಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  ಪ್ರಭಾವತಿ ದೇಹದ ಮೇಲೆ ಗಂಭೀರ ಗಾಯ

  ಪ್ರಭಾವತಿ ಅವರ ಕುತ್ತಿಗೆ, ಕಿಬ್ಬೊಟ್ಟೆ, ಬೆನ್ನು ಮತ್ತು ಭುಜಗಳಲ್ಲಿ ಚಾಕು ಇರಿತದ ಗಾಯಗಳಾಗಿವೆ. ಆರೋಪಿ ಗಿರೀಶ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಭಾವತಿ ಇಬ್ಬರೂ ಪರಸ್ಪರ ತುಂಬಾನೇ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಬ್ಬರು ಮದುವೆಯಾಗಲು ಸಹ ನಿರ್ಧರಿಸಿದ್ದರು ಮತ್ತು ಅವರ ಇಬ್ಬರ ಮನೆಯಲ್ಲಿ ಅವರ ಪೋಷಕರು ಸಹ ಇದಕ್ಕೆ ಸಮ್ಮತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Shocking News: ತಾಯಿ, ಮಗ ಸೇರಿ ಗಂಡನನ್ನೇ ಕೆಳಕ್ಕೆ ತಳ್ಳಿದ್ರು! ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ

  ಆದಾಗ್ಯೂ, ಮಹಿಳೆಯ ಕುಟುಂಬವು ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಕೊಂಡಿದ್ದಾರೆ. ಈ ಮದುವೆಯ ವಿರುದ್ಧ ಮಾತಾಡಿದ್ದಕ್ಕೆ ರೊಚ್ಚಿಗೆದ್ದ ಗಿರೀಶ್ ತನ್ನ ಪ್ರಿಯತಮೆ ಪ್ರಭಾವತಿಯನ್ನು ಚಾಕುವಿನಿಂದ ಇರಿದು ಆ ಸ್ಥಳದಿಂದ ಓಡಿ ಹೋಗಿದ್ದಾನೆ.

  ಸುದ್ದಿ ತಿಳಿದು, ಕೂಡಲೇ ಘಟನೆಯ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.
  Published by:Annappa Achari
  First published: