• Home
  • »
  • News
  • »
  • state
  • »
  • Bengaluru: ಸ್ವರ್ಗದಂತಿದೆ ಬೆಂಗಳೂರು, ವಿಶ್ವದಲ್ಲೇ ಬೆಸ್ಟ್​ ಎಂದ ನೆಟ್ಟಿಗ: ಇಂಟರ್‌ನೆಟ್‌ನಲ್ಲಿ ಅಚ್ಚರಿಯ ಪ್ರತಿಕ್ರಿಯೆ!

Bengaluru: ಸ್ವರ್ಗದಂತಿದೆ ಬೆಂಗಳೂರು, ವಿಶ್ವದಲ್ಲೇ ಬೆಸ್ಟ್​ ಎಂದ ನೆಟ್ಟಿಗ: ಇಂಟರ್‌ನೆಟ್‌ನಲ್ಲಿ ಅಚ್ಚರಿಯ ಪ್ರತಿಕ್ರಿಯೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ವಿಟ್ಟರ್ ಬಳಕೆದಾರರಾದ 'ಅಮಿತಾಬ್ ಸತ್ಯಂ' ಎಂಬ ವ್ಯಕ್ತಿ ಬೆಂಗಳೂರನ್ನು ಮನದುಂಬಿ ಹೊಗಳಿದ್ದಾರೆ. ಇವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, “ನಾನು ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ. ಇದುವರೆಗೂ ನಾನು ನೋಡಿದ ಎಲ್ಲ ನಗರಗಳಿಗಿಂತಲೂ ಬೆಂಗಳೂರು ವಿಶ್ವದ ಅತ್ಯುತ್ತಮ ಸ್ಥಳವಾಗಿದೆ" ಎಂದು ಬರೆದುಕೊಂಡಿದ್ದಾನೆ.

ಮುಂದೆ ಓದಿ ...
  • Trending Desk
  • Last Updated :
  • Bangalore [Bangalore], India
  • Share this:

    ಬೆಂಗಳೂರು(ನ.07): ನಮ್ಮ ಬೆಂಗಳೂರು (Namma Bengaluru) ಅಂದರೆ ಬಹಳ ವಿಶೇಷತೆ ಇರೋ ನಗರ. ಇದನ್ನು ಕೇವಲ ಮಹಾನಗರಿ ಅಂತ ಅನ್ನಲ್ಲ. ಇದನ್ನು ಉದ್ಯಾನವನಗಳ ನಗರ ಎಂದೂ ಕೂಡ ಕರೆಯುತ್ತಾರೆ. ಭಾರತದ ಅತ್ಯಂತ ಸುಂದರವಾದ ನಗರಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ಬೆಂಗಳೂರು ನಗರ (Bengaluru City) ಕೇವಲ ಟೆಕ್ ಹಬ್ ಮಾತ್ರವಲ್ಲದೆ, ತನ್ನ ಸುಂದರವಾದ ಉದ್ಯಾನವನಗಳು, ಮಾರ್ಗಗಳು, ಅತ್ಯುನ್ನತ ಕಟ್ಟಡಗಳು ಮತ್ತು ವಿಶ್ವಪ್ರಸಿದ್ಧ ವ್ಯಕ್ತಿಗಳಿಗೂ ಸಹ ಹೆಸರುವಾಸಿಯಾಗಿದೆ.


    ಮಹಾನಗರಗಳಲ್ಲಿ ಬೆಂಗಳೂರು ಅತ್ಯುತ್ತಮವಾಗಿದೆ. ಭಾರತದ ಯಾವುದೇ ಮಹಾನಗರಗಳು ಇಷ್ಟೊಂದು ಉತ್ತಮವಾಗಿಲ್ಲ. ಇದಲ್ಲದೆ, ಕುಡಿಯುವ ನೀರಿನ ನಿಯಮಿತ ಪೂರೈಕೆ, ನಿರಂತರ ವಿದ್ಯುತ್ ಪೂರೈಕೆ ಮತ್ತು ಬೆಂಗಳೂರಿನ ಹವಾಮಾನವು ವಿಶೇಷವಾಗಿ ಬೇಸಿಗೆಯಲ್ಲಿ ವಾಸಿಸಲು ಅತ್ಯುತ್ತಮ ಸ್ಥಳಗಳಲ್ಲಿ ಇದು ಒಂದಾಗಿದೆ. ಕಾಲಾನಂತರದಲ್ಲಿ, ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ವಸತಿ ಮತ್ತು ಕಾಸ್ಮೋಪಾಲಿಟನ್ ನಗರವಾಗಿದೆ.


    ಇದನ್ನೂ ಓದಿ: Bengaluru: ಬೆಂಗಳೂರಿಗೆ ಹೋಗೋ ಕನಸು ಹೊತ್ತುಕೊಂಡಿರುವವರಿಗೆ ಶಾಕ್ ಕೊಟ್ಟ ವರದಿ!


    ಸ್ವರ್ಗದಂತಿರುವ ಬೆಂಗಳೂರು


    ಇದರ ಮಧ್ಯೆ ಟ್ವಿಟ್ಟರ್ ಬಳಕೆದಾರರೊಬ್ಬರು ಬೆಂಗಳೂರು ಸ್ವರ್ಗ ಎಂದು ಕರೆದಿದ್ದಾರೆ. ಹಾಗೆಯೇ ಬೆಂಗಳೂರನ್ನು ಸ್ವರ್ಗ ಅಂತ ಯಾಕೆ ಕರೆಯುತ್ತಾರೆ ಎಂಬುದನ್ನು ಸಹ ಇಲ್ಲಿ ಹಂಚಿಕೊಂಡಿದ್ದಾರೆ. ಇದು ವಿಶ್ವದ ಅತ್ಯುತ್ತಮ ಸ್ಥಳವಾಗಿದೆ ಎಂದು ಕೂಡ ಅವರು ಹೇಳುತ್ತಾರೆ. ನಮ್ಮ ಬೆಂಗಳೂರು ನಗರವನ್ನು ನ್ಯೂಯಾರ್ಕ್ ಮತ್ತು ಲಂಡನ್‌ಗೆ ಹೋಲಿಸಿದ್ದಾರೆ.


    ನಾನು ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ


    ಟ್ವಿಟ್ಟರ್ ಬಳಕೆದಾರರಾದ 'ಅಮಿತಾಬ್ ಸತ್ಯಂ' ಎಂಬ ವ್ಯಕ್ತಿ ಬೆಂಗಳೂರನ್ನು ಮನದುಂಬಿ ಹೊಗಳಿದ್ದಾರೆ. ಇವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, “ನಾನು ಸ್ವರ್ಗದಲ್ಲಿ ವಾಸಿಸುತ್ತಿದ್ದೇನೆ. ಇದುವರೆಗೂ ನಾನು ನೋಡಿದ ಎಲ್ಲ ನಗರಗಳಿಗಿಂತಲೂ ಬೆಂಗಳೂರು ವಿಶ್ವದ ಅತ್ಯುತ್ತಮ ಸ್ಥಳವಾಗಿದೆ" ಎಂದು ಬರೆದುಕೊಂಡಿದ್ದಾನೆ.


    ಬೆಂಗಳೂರು ಏಕೆ ಇಷ್ಟೊಂದು ವಿಶೇಷ ಎಂಬುದಕ್ಕೆ ಕೆಲ ಅಂಶಗಳನ್ನು ಅಮಿತಾಬ್‌ ಸತ್ಯಂ ಇಲ್ಲಿ ಪಟ್ಟಿ ಮಾಡಿದ್ದಾರೆ.


    * ಇಲ್ಲಿ ಪ್ರಾಯೋಗಿಕವಾಗಿ ಶೂನ್ಯ ಅಪರಾಧಗಳು ಕಂಡುಬಂದಿವೆ.


    * ಇಲ್ಲಿನ ಪಬ್‌ಗಳು ಲಂಡನ್ ಮತ್ತು ಮ್ಯೂನಿಚ್‌ನಲ್ಲಿ ಇರುವ ಪಬ್‌ಗಳಿಂಗಿಂತ ಬೆಸ್ಟ್‌ ಆಗಿವೆ.


    * ಇಲ್ಲಿ ಆಸ್ಪತ್ರೆಗಳು ಅತ್ಯುತ್ತಮವಾಗಿದ್ದರೂ ಸಹ ಉಚಿತ ಚಿಕಿತ್ಸೆಯನ್ನು ನೀಡುತ್ತವೆ. (ಇಲ್ಲಿ ವಿಶ್ವದ ಅತ್ಯುತ್ತಮ ವೈದ್ಯರಿಗೆ ಉತ್ತಮ ಮೌಲ್ಯವನ್ನು ಸಹ ನೀಡಲಾಗುತ್ತದೆ.


    * ಇಲ್ಲಿನ ಹೋಟೆಲ್‌ಗಳು ಯುರೋಪ್ ಮತ್ತು ಅಮೆರಿಕದಲ್ಲಿರುವ ಹೋಟೆಲ್‌ಗಳಿಗಿಂತಲೂ ಉತ್ತಮ


    * ವಿಶ್ವ ದರ್ಜೆಯ ಯುರೋಪಿಯನ್ ಆಹಾರಗಳು ಇಲ್ಲಿ $15 ಗೆ ದೊರಕಿದರೆ , ಇದೇ ಆಹಾರ ಲಂಡನ್‌ನಲ್ಲಿ $100 ಸಿಗುತ್ತದೆ


    * ವಿಶ್ವದ ಅತ್ಯುತ್ತಮ ಭಾರತೀಯ ಆಹಾರ ಕೇವಲ 70 ರಿಂದ 80 ರೂ. ಒಳಗೆ ಸಿಗುತ್ತದೆ


    * ನನ್ನ ಮನೆಯಿಂದ 5 ಕಿಮೀ ಒಳಗೆ ಇಂಗ್ಲೆಂಡ್‌ಗಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳನ್ನು ಬೆಂಗಳೂರು ಹೊಂದಿದೆ ಎಂದ್ರೆ ಬೆಂಗಳೂರು ಯಾವುದರಲ್ಲಿ ಕಮ್ಮಿ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ಬಾಡಿಗೆ ಮನೆಗೆ ಹೋಗುವ ಮುನ್ನ ಈ ಅಂಶಗಳು ಗಮನದಲ್ಲಿರಲಿ...


    * ನಾನು ಎಲ್ಲಿ ಬೇಕಾದರೂ ಡ್ರೈವ್‌ ಮಾಡಬಹುದು. ಹಾಗೆಯೇ ಅದನ್ನು ಎಲ್ಲೆಂದರಲ್ಲಿ ಪಾರ್ಕಿಂಗ್‌ ಸಹ ಮಾಡಬಹುದು. ಅದೇ ಲಂಡನ್‌ನಂತಹ ನಗರಗಳಲ್ಲಿ ಹೀಗೆ ಮಾಡಲು ಸಾದ್ಯವೇ ಇಲ್ಲ.


    * ಇಲ್ಲಿನ ಹವಾಮಾನ, ಸರೋವರಗಳು, ಉದ್ಯಾನವನಗಳು ಅತ್ಯಂತ ಮನೋಹರವಾಗಿರುತ್ತವೆ.


    ಇವರ ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಒಬ್ಬ ಬಳಕೆದಾರರು “ಏನೂ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಇಲ್ವಾ” ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು “ಟ್ರಾಫಿಕ್‌ ಸಮಸ್ಯೆ ಅಥವಾ ಇತರ ಸಮಸ್ಯೆಗಳನ್ನು ಬಿಡಿ, ಅವುಗಳು ಎಲ್ಲ ಕಡೆ ಇದ್ದಿದ್ದೆ, ಆದ್ರೆ ಅವೆಲ್ಲ ಸಮಸ್ಯೆಗಳನ್ನು ಬಿಟ್ಟ ನಂತರ ಬೆಂಗಳೂರು ಬೆಸ್ಟ್‌ ಸ್ಥಳ ಎಂದ್ರೆ ತಪ್ಪಾಗಲಾರದು” ಅಂತ ಟ್ವೀಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ ಇಲ್ಲಿ ಕೇವಲ 80 ರಿಂದ 90 ರೂ. ಗೆ ಊಟ ಸಿಗುತ್ತಾ?, ಚಾನ್ಸೆ ಇಲ್ಲ. ಪಾರ್ಕಿಂಗ್‌ ಎಲ್ಲ ಕಡೆ ಮಾಡಬಹುದು ಅಂತ ಹೇಳೋದು ನಿಜಕ್ಕೂ ಬೇಜವಾಬ್ದಾರಿತನವಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

    Published by:Precilla Olivia Dias
    First published: