ಬೆಂಗಳೂರಲ್ಲಿ ಸಿಎಎ ಗಲಾಟೆ ವೇಳೆ ಉಗ್ರರ ನೇಮಕಕ್ಕೆ ಪ್ಲಾನ್; ರಾಜ್ಯದಲ್ಲಿ ದಾಳಿ ಮಾಡಲು ರೆಡಿಯಾಗಿತ್ತು ಸ್ಕೆಚ್

ಸಿಸಿಬಿ ಪೊಲೀಸರು 3 ದಿನಗಳ‌ ಹಿಂದೆ ಜಿಹಾದಿ ಗ್ಯಾಂಗ್​ ಒಂದನ್ನು ಬಂಧಿಸಿದ್ದರು. ಇವರ ವಿರುದ್ಧ ಎಫ್​ಐಆರ್​  ದಾಖಲಿಸಿ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಸದ್ದುಗುಂಟೆಪಾಳ್ಯದ ನಿವಾಸಿ ಮೆಹಬೂಬ್ ಪಾಷ ಈ ಪ್ಲ್ಯಾನ್​ನ ಮಾಸ್ಟರ್​ ಮೈಂಡ್​.

news18-kannada
Updated:January 12, 2020, 8:50 AM IST
ಬೆಂಗಳೂರಲ್ಲಿ ಸಿಎಎ ಗಲಾಟೆ ವೇಳೆ ಉಗ್ರರ ನೇಮಕಕ್ಕೆ ಪ್ಲಾನ್; ರಾಜ್ಯದಲ್ಲಿ ದಾಳಿ ಮಾಡಲು ರೆಡಿಯಾಗಿತ್ತು ಸ್ಕೆಚ್
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಜ.12): ಕೇಂದ್ರ ಸರ್ಕಾರ 'ಪೌರತ್ವ ತಿದ್ದುಪಡಿ ಕಾಯ್ದೆ' (ಸಿಎಎ) ಜಾರಿಗೆ ತಂದಾಗಿನಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಲೇ ಇದೆ. ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್​ನಲ್ಲಿ ಇಬ್ಬರು ಮೃತಪಟ್ಟಿದ್ದರು. ಬೆಂಗಳೂರಿನಲ್ಲೂ ಬೃಹತ್​ ಪ್ರತಿಭಟನೆ ನಡೆದಿತ್ತು. ಈ ವೇಳೆ ಉಗ್ರರ ನೇಮಕಕ್ಕೆ ಸ್ಕೆಚ್​ ನಡೆದಿತ್ತು ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಸಿಸಿಬಿ ಪೊಲೀಸರು 3 ದಿನಗಳ‌ ಹಿಂದೆ ಜಿಹಾದಿ ಗ್ಯಾಂಗ್​ ಒಂದನ್ನು ಬಂಧಿಸಿದ್ದರು. ಇವರ ವಿರುದ್ಧ ಎಫ್​ಐಆರ್​  ದಾಖಲಿಸಿ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಸದ್ದುಗುಂಟೆಪಾಳ್ಯದ ನಿವಾಸಿ ಮೆಹಬೂಬ್ ಪಾಷ ಈ ಪ್ಲ್ಯಾನ್​ನ ಮಾಸ್ಟರ್​ ಮೈಂಡ್​. ಪೌರತ್ವ ಗಲಾಟೆ ವೇಳೆ ಈತ ಕೆಲವರನ್ನು ಗುರುತಿಸಿ, ಅವರಿಗೆ ಮೈಂಡ್​ ವಾಷ್​ ಮಾಡಿ ಜಿಹಾದ್​ಗೆ ಸೆಳೆಯುತ್ತಿದ್ದ.

ಮೆಹಬೂಬ್ ಪಾಷ ಬೆಂಗಳೂರು ಜಿಹಾದಿ ಗ್ಯಾಂಗ್​ನ ಕಮ್ಯಾಂಡರ್ ಆಗಿದ್ದ. ಐಸಿಸ್​ಗೆ ಉಗ್ರರ ನೇಮಕ ಮಾಡುವುದು ಈತನ ಕೆಲಸವಾಗಿತ್ತು. ಕೆಲವರನ್ನು ಜಿಹಾದ್​ ಸಂಘಟನೆಗೆ ಸೇರ್ಪಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ. ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ತರಬೇತಿ ಕೂಡ ನೀಡುತ್ತಿದ್ದ. ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ಬಗ್ಗೆ ಮೆಹಬೂಬ್ ಪಾಷ ನೀಲನಕ್ಷೆ ರಚಿಸಿದ್ದ. ತನ್ನ ಸಹಚರರ ಬಂಧನದ ಬಳಿಕ ಈತ ತಲೆಮರಿಸಿಕೊಂಡಿದ್ದಾನೆ.

ಇದನ್ನೂ ಓದಿ: ತುಮಕೂರಿನಲ್ಲಿ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಚಿರತೆ; ಇಂದಿನಿಂದಲೇ ಕೂಬಿಂಗ್ ಕಾರ್ಯಾಚರಣೆ ಶುರು

ತಪ್ಪಿದ ದುರಂತ:

ಐಸಿಸ್​ಗೆ ಉಗ್ರರ ನೇಮಕ ಪೂರ್ಣಗೊಂಡ ನಂತರ ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಮೆಹಬೂಬ್​ ಪಾಷ ರೆಡಿಯಾಗಿದ್ದನಂತೆ. ಈಗ ಈ ಪ್ಲಾನ್​ ಮೊದಲೇ ಬಹಿರಂಗಗೊಂಡಿರುವುದರಿಂದ ಮುಂದಾಗುವ ದುರಂತವೊಂದು ತಪ್ಪಿದಂತಾಗಿದೆ. ಮೆಹಬೂಬ್ ಪಾಷ ಸೇರಿ 12 ಮಂದಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ.
Published by: Rajesh Duggumane
First published: January 12, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading