ಹುಬ್ಬಳ್ಳಿ: ಮಹಿಳೆಯ ಆಸನದ (Woman Bus Seat) ಮೇಲೆ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ (Pee) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ನಡೆದಿದೆ. ಕೆಎ-19 ಎಫ್-3554 ಕೆಎಸ್ಆರ್ಟಿಎಸ್ ಬಸ್ (KSRTC Bus) ವಿಜಯಪುರದಿಂದ ಮಂಗಳೂರಿಗೆ (Vijayapura To Mangaluru) ತೆರಳುತ್ತಿತ್ತು. ಮಾರ್ಗ ಮಧ್ಯೆ ಊಟಕ್ಕಾಗಿ ಬಸ್ ಡಾಬಾ ಬಳಿ ನಿಲ್ಲಿಸಿದಾಗ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. 32 ವರ್ಷದ ವ್ಯಕ್ತಿಯೊಬ್ಬ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮಂಗಳವಾರ ರಾತ್ರಿ ಸುಮಾರು 32 ವರ್ಷದ ವ್ಯಕ್ತಿ 20 ವರ್ಷದ ಯುವತಿಯ ಆಸನದ ಮೇಲೆ ವಿಸರ್ಜನೆ ಮಾಡಿದ್ದಾನೆ. ಹುಬ್ಬಳ್ಳಿ ಸಮೀಪದ ಕಿರೇಸೂರ (Kiresur, Hubballi) ಡಾಬಾದಲ್ಲಿ ಬಸ್ ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ ಎಂದು ಸಹ ಪ್ರಯಾಣಿಕ ಗಲೇಶ್ ಯಾದವಾಡ್ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಯುವತಿ ಆಸನ ಸಂಖ್ಯೆ 3ರನ್ನು ಕಾಯ್ದಿರಿಸಿ ವಿಜಯಪುರದಿಂದ ಹುಬ್ಬಳ್ಳಿಗೆ ಪ್ರಯಾಣಿಸಿಸುತ್ತಿದ್ದರು. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ 28-29ರಲ್ಲಿ ಪ್ರಯಾಣಿಸುತ್ತಿದ್ದನು. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಗುರುತನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಬಿಟ್ಟುಕೊಟ್ಟಿಲ್ಲ.
ಯುವತಿ ಆಸನದ ಮೇಲೆ ಮೂತ್ರ
ಡಾಬಾದಲ್ಲಿ ಯುವತಿ ಊಟ ಮಾಡಿ ಬಸ್ ಬಳಿ ಬಂದಾಗ ಪಾನಮತ್ತನಾಗಿದ್ದ ವ್ಯಕ್ತಿ ತನ್ನ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡೋದನ್ನು ನೋಡಿ ಭಯದಿಂದ ಕೂಗಿಕೊಂಡಿದ್ದಾರೆ. ಯುವತಿ ಕೂಗುತ್ತಿದ್ದಂತೆ ಸಹ ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ ಬಸ್ ಬಳಿ ಬಂದಿದ್ದಾರೆ.
ಇತರೆ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಬಸ್ನಿಂದ ಕೆಳಗೆ ಇಳಿಸುವಂತೆ ಒತ್ತಾಯಿಸಿದ್ದರು. ಇತ್ತ ಯುವತಿ ಸಹ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ನಂತರ ಆಸನ ಶುಚಿಗೊಳಿಸಿದ ನಂತರ ಬಸ್ ತನ್ನ ಪ್ರಯಾಣ ಆರಂಭಿಸಿತ್ತು ಎಂದು ಕೆಎಸ್ಆರ್ಟಿಸಿ ಅಧಿಕಾರಿ ಹೇಳಿದ್ದಾರೆ.
ದೂರು ನೀಡಲು ನಿರಾಕರಿಸಿರುವ ಯುವತಿ
ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಘಟಕದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ, ಯುವತಿ ಪೊಲೀಸರ ಬಳಿಯೂ ಯಾವುದೇ ದೂರು ದಾಖಲಿಸಿಲ್ಲ. ನಮ್ಮ ಬಳಿಯೂ ದೂರು ನೀಡಲು ಯುವತಿ ಹಿಂದೇಟು ಹಾಕಿದ್ದಾರೆ ಎಂದಿದ್ದಾರೆ.
ಮೂತ್ರ ವಿಸರ್ಜನೆ ಘಟನೆಯ ಪ್ರತಿಕ್ರಿಯಿಸಿರುವ ಮತ್ತೋರ್ವ ಸಹ ಪ್ರಯಾಣಿಕ, ಯುವತಿ ಆಸನ ಸಂಖ್ಯೆ 3 ಮತ್ತು ಆ ವ್ಯಕ್ತಿ 28-29ರಲ್ಲಿ ಪ್ರಯಾಣಿಸುತ್ತಿದ್ದರು. ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಬಳಿಕ ಸಾರಿಗೆ ಸಿಬ್ಬಂದಿ ಆಸನವನ್ನು ಶುಚಿಗೊಳಿಸಿದರು. ನಂತರ ಯುವತಿಗೆ ಧೈರ್ಯ ಹೇಳಿದರು. ಪ್ರಯಾಣದಲ್ಲಿ ಯುವತಿಯ ಸುರಕ್ಷತೆ ಹೆಚ್ಚು ಒತ್ತು ನೀಡಿದ್ದರು ಎಂದು ಹೇಳಿದರು.
ವಿಮಾನದಲ್ಲಿ ಮಹಿಳೆಯರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
ನವೆಂಬರ್ 26ರಂದು ನ್ಯೂಯಾರ್ಕ್ -ದೆಹಲಿ ಏರ್ ಇಂಡಿಯಾ (Air India) ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು.
ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ ಮತ್ತು ಪುರುಷ ಪ್ರಯಾಣಿಕನನ್ನು 'ನೋ ಫ್ಲೈ' (No Fly) ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡುವ ಆಂತರಿಕ ಸಮಿತಿಯನ್ನು ಏರ್ ಇಂಡಿಯಾ ರಚಿಸಿದೆ ಎಂದು ಏರ್ ಇಂಡಿಯಾವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿತ್ತು.
ಇದನ್ನೂ ಓದಿ: Siddalinga Swamy: ಸಿದ್ದಲಿಂಗ ಸ್ವಾಮಿ ವಿರುದ್ಧ ಅತ್ಯಾಚಾರಕ್ಕೆ ಯತ್ನ ಸಹಿತ ಎರಡು ಪ್ರಕರಣ ದಾಖಲು
ವಿಮಾನವು ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಜೆಎಫ್‌ಕೆ) ದಿಂದ ನವದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ವಿಮಾನದಲ್ಲಿನ ತನ್ನ ಭಯಾನಕ ಅನುಭವವನ್ನು ನೆನಪಿಸಿಕೊಂಡು ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಬರೆದ ಪತ್ರವನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ