• Home
  • »
  • News
  • »
  • state
  • »
  • Dharwad: ಮಲಗಿದ್ದ ಪತ್ನಿಯನ್ನ ಕೊಂದು, ನೇಣಿಗೆ ಶರಣಾದ ಗಂಡ

Dharwad: ಮಲಗಿದ್ದ ಪತ್ನಿಯನ್ನ ಕೊಂದು, ನೇಣಿಗೆ ಶರಣಾದ ಗಂಡ

ಮೃತ ದಂಪತಿ

ಮೃತ ದಂಪತಿ

ಪತ್ನಿ ಮನಿಶಾ ನಿದ್ದೆಗೆ ಜಾರುತ್ತಿದ್ದಂತೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತಾನು ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  • Share this:

ಮಲಗಿದ್ದ ಪತ್ನಿ(Wife)ಗೆ ರಾಡ್ ನಿಂದ ಹೊಡೆದು, ಪತಿ (Husband) ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಧಾರವಾಡ (Dharwad) ಹೊರವಲಯದ ಗಣೇಶ ನಗರ(Ganesha Nagara)ದಲ್ಲಿ ನಡೆದಿದೆ. ಚಟ್ಟು ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ. ಮನಿಶಾ ಕೊಲೆಯಾದ ಪತ್ನಿ. ಮೃತ ಚಟ್ಟು ಗೋವಾ(Goa)ದಲ್ಲಿ ಪೈಪ್ ಲೈನ್ ಕೆಲಸ ಮಾಡಿಕೊಂಡಿದ್ದನು. ಕಳೆದ ಕೆಲ ದಿನಗಳ ಹಿಂದೆ ಧಾರವಾಡಕ್ಕೆ ಬಂದಿದ್ದನು. ಪತ್ನಿ ಮನಿಶಾ ತವರು ಮನೆ ಸಹ ಅದೇ ಬಡವಾಣೆಯಲ್ಲಿದೆ. ತವರಿನಲ್ಲಿದ್ದ ಮನಿಶಾ ರಾತ್ರಿ ಪತಿಗೆ ಊಟ ತೆಗೆದುಕೊಂಡು ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ. ರಾತ್ರಿ ತವರಿಗೆ ಹೋಗದ ಮನಿಶಾ ಗಂಡನ ಮನೆಯಲ್ಲಿಯೇ ಮಲಗಿದ್ದಳು.


ಪತ್ನಿ ಮನಿಶಾ ನಿದ್ದೆಗೆ ಜಾರುತ್ತಿದ್ದಂತೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತಾನು ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಅನಾಥವಾದ ಮುದ್ದಾದ ಮಕ್ಕಳು


ದಂಪತಿ  ಜಗಳಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ದಂಪತಿಗೆ ಎರಡು ಮುದ್ದಾದ ಮಕ್ಕಳಿದ್ದು, ತಂದೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Bidar: ರಾಶಿ ಯಂತ್ರಕ್ಕೆ ಸಿಲುಕಿ ಬೇರೆಯಾಯ್ತು ಮಹಿಳೆಯ ರುಂಡ-ಮುಂಡ


ಹಾಸನ: ಮರ್ಮಾಂಗಕ್ಕೆ ಒದ್ದು ಗಂಡನನ್ನ ಕೊಂದೇ ಬಿಟ್ಳು!


ಮಹಿಳೆಯರು ಕುಡುಕ ಗಂಡನನ್ನು ಕೊಡಬೇಡ ಎಂದು ಪ್ರಾರ್ಥನೆ ಮಾಡುತ್ತಾರೆ. ಇನ್ನು ಗಂಡ ಕುಡಿಯೋದು ಬಿಡಲಿ ಎಂದು ದೇವರ ಹರಕೆ ಹೊತ್ತುಕೊಳ್ಳುತ್ತಾರೆ. ಆದ್ರೆ ಕೆಲ ಗಂಡಂದಿರುವ ಏನ್ ಮಾಡಿದ್ರೂ ಕುಡಿಯೋದನ್ನು ಬಿಡಲ್ಲ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಗಂಡನ ಕುಡಿತಕ್ಕೆ ಬೇಸತ್ತು, ಆತನ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಾಳೆ. ಬೆಳಗ್ಗೆ ಪತಿಗೆ ಹೃದಯಾಘಾತ ಆಗಿದೆ ಎಂದು ಸುಳ್ಳು ಹೇಳಿದ್ದಳು.


ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆ


ಸುಕನ್ಯ ಮತ್ತು ರೇವಣ್ಣ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಜಗಳಕ್ಕೆ ಕಾರಣ ಇಬ್ಬರಿಗೂ ಇದ್ದ ಅಕ್ರಮ ಸಂಬಂಧ ಎಂದು ತಿಳಿದು ಬಂದಿದೆ. ಮದುವೆ ನಂತರ ರೇವಣ್ಣ ಮತ್ತೊಬ್ಬ ಮಹಿಳೆ ಜೊತೆ ಸಂಬಂಧ ಹೊಂದಿದ್ದನು. ಇದೇ ಕಾರಣಕ್ಕೆ ಕೆಲ ವರ್ಷ ಮನೆಯಿಂದ ದೂರ ಇದ್ದನು. ಇತ್ತ ಪತಿ ಹೋದ ಬಳಿಕ ಸುಕನ್ಯ ಸಹ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.


ಫೆ.27ರಂದು ಕೊಲೆ


ಮನೆಯಿಂದ ಓಡಿ ಹೋಗಿದ್ದ ರೇವಣ್ಣ ಮತ್ತೆ ವಾಪಸ್ ಬಂದಿದ್ದಾನೆ. ಆಗ ಆತನಿಗೂ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ತಿಳಿದಿದ್ದರಿಂದ ಕುಡಿದು ಗಲಾಟೆ ಮಾಡುತ್ತಿದ್ದನಂತೆ.  ಫೆಬ್ರವರಿ 27ರಂದು ರೇವಣ್ಣ ಮತ್ತು ಸುಕನ್ಯ ನಡುವೆ ಜಗಳ ಉಂಟಾಗಿದೆ. ಈ ವೇಳೆ ಕೋಪದಲ್ಲಿ ಸುಕನ್ಯ ಪತಿಯ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ.


ಬಲವಾದ ಹೊಡೆತ ಬಿದ್ದ ಪರಿಣಾಮ ರೇವಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪತಿಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿದ್ದಾನೆ ಎಂದು ಸುಕನ್ಯ ಎಲ್ಲರ ಮುಂದೆ ಹೇಳಿದ್ದಳು.


ಗದಗನಲ್ಲಿ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್


ಪತಿಯೇ ಪರದೈವ ಅಂತಿದ್ದ ಆ ಹೆಣ್ಣಿಗೆ ಗಂಡ ಸೈತಾನ ಅಂತಾ ಗೊತ್ತಾಗಿದ್ದೇ ತಡ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ಲು. ಕಿರುಕುಳದ ಕಿರಾತಕನಿಂದ ಕಾಯಂ ಆಗಿ ದೂರ ಇರ್ಬೇಕು ಅಂತಾ ನಿರ್ಧರಿಸಿದ್ಲು, ಡಿವೋರ್ಸ್ ಗೆ ಕೂಡ ಅಪ್ಲೈ ಮಾಡಿದ್ಲು.


ಇದನ್ನೂ ಓದಿ:  Crime News: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ, ಮಗುವಿಗೂ ಕಚ್ಚಿದ! ಇವನೇನು ಪತಿಯೋ, ರಾಕ್ಷಸನೋ?


ಇದ್ರಿಂದ ಸಿಟ್ಟಿಗೆದ್ದಿದ್ದ ಪಾಪಿ ಪತಿ ಹೆಂಡತಿಗೆ ಮನಬಂದಂತೆ ಹಲ್ಲೆ (Attack) ಮಾಡಿದ್ದ. ಅಮಾನುಷವಾಗಿ ಹಲ್ಲೆ ಮಾಡಿ ಓಡಿಹೋಗಿದ್ದ ಆರೋಪಿ ಸದ್ಯ ಪೊಲೀಸರ (Police) ಅತಿಥಿಯಾಗಿದ್ದಾನೆ. ಮಾರ್ಚ್ 10 ನೇ ತಾರೀಕು ಗದಗ (Gadag) ನಗರದ ಲಾಯನ್ಸ್ ಸ್ಕೂಲ್ ಸಮೀಪದ ಪ್ಲೇಗ್ರೌಂಡ್ ಅಕ್ಷರಶಃ ರಕ್ತಸಿಕ್ತವಾಗಿತ್ತು. ಗದಗ ನಗರದ ಹುಡ್ಕೋ ಬಡಾವಣೆಯ ನಿವಾಸಿ ಅಪೂರ್ವಾ ಪುರಾಣಿಕ್ ಅನ್ನೋ ಮಹಿಳೆ ಮೇಲೆ ಇಜಾಜ್ ಶಿರೂರ್ ಅನ್ನೋ ವ್ಯಕ್ತಿ ಮೃಗದಂತೆ ಎರಗಿದ್ದ.

Published by:Mahmadrafik K
First published: