ರಾಮನಗರ: ಸಾಲ ತೀರಸಲಾಗದೆ ಒಂದೇ ಕುಟುಂಬದ (Family) 7 ಜನ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ (Ramanagara) ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವು ಉಳಿದ 6 ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ರಾತ್ರಿ 8 ಗಂಟೆ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಊಟದಲ್ಲಿ (Food) ವಿಷ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೃತ ಮಹಿಳೆಯನ್ನು ಮಂಗಳಮ್ಮ (28) ಎಂದು ಗುರುತಿಸಲಾಗಿದೆ. ಉಳಿದಂತೆ ಮೃತಳ ಪತಿ ರಾಜು, ಮೃತಳ ತಾಯಿ ಸೊಲ್ಲಾಪುರದಮ್ಮ, ಸಹೋದರಿ ಸವಿತಾ, ಮಕ್ಕಳಾದ ಆಕಾಶ್, ಕೃಷ್ಣ, ದರ್ಶಿನಿ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ರಾಮನಗರ ಗ್ರಾಮಾಂತರ (Ramanagara Police) ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ತಿ ವಿಚಾರಕ್ಕೆ ಅಣ್ಣನನ್ನೇ ಬರ್ಬರವಾಗಿ ಕೊಲೆಗೈದ ತಮ್ಮ
ಅಣ್ಣನನ್ನೇ ಬರ್ಬರವಾಗಿ ತಮ್ಮ ಕೊಲೆ ಮಾಡಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ ತಾಲೂಕಿನ (Kushtagi) ಪಟ್ಟಲಚಿಂತಿಯಲ್ಲಿ ನಡೆದಿದೆ. ಯಮನೂರಪ್ಪ ಕಡಿವಾಲರ (39) ಕೊಲೆಯ ವ್ಯಕ್ತಿಯಾಗಿದ್ದು, ಸ್ನಾನದ ಮನೆಯಲ್ಲಿ ಚಾಕು ಇರಿದು ಕೊಲೆ ಮಾಡಿದ್ದಾರೆ.
ಮೃತರ ತಮ್ಮ ಮಲ್ಲಪ್ಪ ಕಡಿವಾಲ ಕೊಲೆ ಮಾಡಿದ ಆರೋಪಿಯಾಗಿದ್ದು, ಆಸ್ತಿಯ ವಿಷಯಕ್ಕಾಗಿ ಕೊಲೆ ನಡೆದಿದ್ದು, ಅಣ್ಣ ಕಡಿಮೆ ಆಸ್ತಿ ಕೊಟ್ಟಿದ್ದಾನೆ ಎಂಬ ಕಾರಣಕ್ಕೆ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕುಷ್ಟಗಿ ಸಿಪಿಐ ನಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Karnataka CD Case: CD ಬಗ್ಗೆ ಬರೀ ಮಾತಾಡಿದ್ದೇ ಆಯ್ತು, ಒಂದನ್ನಾದರೂ ರಿಲೀಸ್ ಮಾಡಿ; ಜಗದೀಶ್ ಶೆಟ್ಟರ್
ವಿಕೃತ ಸ್ನೇಹಿತ ಚಾಕು ಇರಿದ!
ವಿಡಿಯೋ ಕಾಲ್ ಮಾಡಿ (Video) ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಚಾಕು ಇರಿದ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ತನ್ನ ಪತ್ನಿಯೊಂದಿಗೆ (Wife) ಫೋನ್‌ನಲ್ಲಿ ಮಾತಾಡುತ್ತಿದ್ದ.
ಆಗ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ನಿನ್ನ ಹೆಂಡತಿಯನ್ನು ನೋಡ್ಬೇಕು ಅಂದಿದ್ದ. ಇದರಿಂದ ಕೋಪಗೊಂಡ ರಾಜೇಶ್, ಸುರೇಶ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ವೇಳೆ ರಾಜೇಶ್ಗೆ ಸುರೇಶ್ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Love Jihad: ಬೆಳಗಾವಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಲವ್ ಜಿಹಾದ್‌ಗೆ ಬಲಿಯಾದಳಾ ಯುವತಿ?
ಪ್ರೇಮ ವೈಫಲ್ಯ; ಆತ್ಮಹತ್ಯೆಗೆ ಶರಣಾದ ವೈದ್ಯೆ
ಪ್ರೇಮವೈಫಲ್ಯ (Love Failure) ಹಾಗೂ ಚಾರಿತ್ರ್ಯವಧೆಯಿಂದ ನೊಂದದ ವೈದ್ಯೆ ಬೆಂಗಳೂರಿನಲ್ಲಿ (Bengaluru) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ (UP) ಮೂಲದ ಪ್ರಿಯಾಂನ್ಷಿ ತ್ರಿಪಾಠಿ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ(MS Ramaiah) ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅದೇ ಆಸ್ಪತ್ರೆ ವೈದ್ಯ ಸುಮಿತ್ರನ್ನ ಪ್ರೀತಿಸುತ್ತಿದ್ದ ಪ್ರಿಯಾಂನ್ಷಿ, ಮದುವೆ ಆಗುವಂತೆ ಕೇಳಿಕೊಂಡಿದ್ದರು. ಆದರೆ ಮದುವೆ ಪ್ರಸ್ತಾಪವನ್ನು ಸುಮಿತ್ ನಿರಾಕರಿಸಿದ್ದಲ್ಲದೆ, ನಡತೆ ಸರಿಯಿಲ್ಲ ಎಂದು ನಿಂದಿಸಿದ್ದ. ಇದೇ ಕಾರಣಕ್ಕೆ ಮನನೊಂದು ಪ್ರಿಯಾನ್ಷಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ