ನಮ್ಮ ರಾಜ್ಯದ ಮೂಡಲಬಾಗಿಲು ಎಂತಲೇ ಹೆಸರಾದ ಕೋಲಾರದ (Kolara) ಮುಳಬಾಗಿಲು ಪಟ್ಟಣದಲ್ಲಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ಭೀಕರ ಕೊಲೆಯಾಗಿದೆ. ಸುಖನಿದ್ರೆಯಿಂದ ಎಚ್ಚರಗೊಂಡು ಮನೆಯ ಮುಂದಿನ ದೇವಸ್ತಾನದ (Temple) ಬಾಗಿಲು ತೆಗೆಯಲು ಹೊದ ಮುಳಬಾಗಿಲು ನಗರಸಭೆ ಸದಸ್ಯ ಹಾಗು ಸ್ಥಾಯಿ ಸಮಿತಿ ಅದ್ಯಕ್ಷ ಜಗನ್‌ಮೋಹನ್ ರೆಡ್ಡಿ ಭೀಕರ ಕೊಲೆಯಾಗಿ (Murder) ಹೋಗಿದ್ದಾರೆ. ಪಟ್ಟಣದ ಮತ್ಯಾಲಪೇಟೆಯಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಪತ್ನಿ ಯೊಂದಿಗೆ ಮೋಹನ್ ವಾಸವಾಗಿದ್ದರು. ಮನೆಯ ಪಕ್ಕದಲ್ಲೆ ಗಂಗಮ್ಮ ದೇವಿಯ (Gangamma Devi) ದೇವಾಲಯ (Temple) ಇದೆ. ಪ್ರತಿದಿನ ದೇವಾಲಯದ ಬಾಗಿಲು ತೆಗೆಯುವುದು ಮೋಹನ್ (Mohan) ರವರ ದಿನಚರಿ. ಎಂದಿನಂತೆ ಮುಂಜಾನೆ 5.30 ರಲ್ಲಿ ಯಾರೋ ದೇವಸ್ಥಾನದ ಗಂಟೆ ಬಾರಿಸುವುದನ್ನು ಕೇಳಿಸಿಕೊಂಡ ಮೋಹನ್ ನಿದ್ದೆಯಿಂದ (Sleep) ಎಚ್ಷರಗೊಂಡಿದ್ದಾರೆ. ಮುಖಕ್ಕೆ ನೀರು ಹಾಕಿಕೊಂಡು ಕಣ್ಣುಜ್ಜಿಕೊಂಡು ಗಂಗಮ್ಮನ ದೇವಸ್ಥಾನದ ಬಾಗಿಲು ತೆಗೆಯುದಕ್ಕೆ ಕೀ ತೆಗೆದುಕೊಂಡು ಹೋಗುತ್ತಾರೆ. ದೇವಸ್ತಾನದ ಬಾಗಿಲಿನ ಬಳಿ ಒಬ್ಬ ಆಗಂತುಕ ಮುಗ್ಧನಂತೆ ನಿಂತು ಕೈಮುಗಿಯುವ ನಟನೆ ಮಾಡಿದ್ದಾನೆ.
ದೇವಸ್ಥಾನ ಕೀ ಬಿಚ್ಚಲು ಮುಂದಾದ ಮೋಹನ್ ಗೆ ಇದಾವುದರ ಅರಿವು ಕೂಡ ಇರಲಿಲ್ಲ, ನಿದ್ರೆಯ ಮಂಪರಿನಿಂದ ಹೊರಬರುವುದಕ್ಕು ಮುನ್ನ ಅವರ ತಲ್ವಾರ್ ಅವರ ಹೊಟ್ಟೆಗೆ ನುಗ್ಗಿದೆ.
ಜೋರಾಗಿ ಕೂಗಿ ಮನೆಯಿಂದ ಪತ್ನಿ ಹೊರಗೆ ಬರುವಷ್ಟರಲ್ಲಿ ನಾಲ್ಕು ಕಡೆಯಿಂದ ಬಂದ ನಾಲ್ವರು ಕೊಲೆಗಾರರು ಸುತ್ತುವರಿದು, ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇವೆಲ್ಲ ದೃಶ್ಯಾವಳಿಗಳು ಅವರದ್ದೆ ಮನೆಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ.
ದಿನನಿತ್ಯ ಕೈ ಮುಗಿಯುವ ದೇವರ ಮುಂದೆಯೇ ಕೊಲೆ
ಕೊಲೆಪಾತಕರ ತಂಡದಲ್ಲಿ ನಾಲ್ಕು ಮಂದಿ ಇದ್ದು ನಾಲ್ಕು ದಿಕ್ಕುಗಳಿಂದ ಒಮ್ಮಲೆ ಮುಗಿಬಿದ್ದು ಕೃತ್ಯ ಎಸಗಿದ್ದಾರೆ, ಮುಂಜಾನೆ ಪಟ್ಟಣದ ಜನತೆ ನಿದ್ರೆಯಿಂದ ಎಚ್ಚರಗೊಳ್ಳುವ ಮೊದಲೆ ಭೀಕರ ಕೊಲೆ ಮುಗಿದು ಹೋಗಿದ್ದು, ಪ್ರತಿದಿನ ತಾನು ಪೂಜಿಸುವ ಎದ್ದಕೂಡಲೆ ಕೈ ಮುಗಿಯುವ ಗಂಗಮ್ಮನ ಎದುರೇ ಭಕ್ತ ಜಗನ್ ಮೋಹನ್ ರೆಡ್ಡಿ ಅಲಿಯಾದ್ ಪಲ್ಲಿ ಮೋಹನ್ ಭೀಕರವಾಗಿ ಕೊಲೆಯಾಗಿದ್ದಾರೆ.
ಹೊಟ್ಟೆಗೆ ಚಾಕು ಇರಿದು ಕೊಲೆ
ಹೊಟ್ಟೆಗೆ ಚಾಕು ಇರಿದ ಕೂಡಲೆ ಕೂಗಿಕೊಂಡ ಮೋಹನ್ ದ್ವನಿ ಕೇಳಿದಕೂಡಲೆ ಅವರ ಪತ್ನಿ ಹಾಗು ಪಕ್ಕದ ಮನೆಯ ಮಹಿಳೆ ಸ್ಥಳಕ್ಕೆ ದೌಡಾಯಿಸಿದ್ಸಾರೆ, ಆದರೆ ಅಷ್ಟೊತ್ತಿಗಾಗಲೆ ಕೊಲೆಗಾರರು ತಮ್ಮ ಕೃತ್ಯ ಮುಗಿಸಿ ತಮ್ಮ ಬೈಕ್ ಏರಿ ಪರಾರಿ ಆಗಿದ್ದಾರೆ.
ಇದನ್ನೂ ಓದಿ: Nirmala Sitharaman: 17 ವರ್ಷದ ಅನಾಥ ಬಾಲಕಿಯಲ್ಲಿ 29 ಲಕ್ಷ ಪಾವತಿಸುವಂತೆ ಕೇಳಿದ LIC,ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಮುಳಬಾಗಿಲು ನಗರಸಭೆಯ ವಾರ್ಡ್ ನಂಬರ್ 2 ರ ಮತ್ಯಾಲಪೇಟೆ ಯಲ್ಲಿ ಪಕ್ಷೇತರನಾಗಿ ನಿಂತು ಮೋಹನ್ ನಗರಸಭೆ ಸದಸ್ಯನಾಗಿ ಆಯ್ಕೆಯಾದ್ದಾರೆ, ಎರಡನೇ ಭಾರಿಗೆ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿದ್ದು , ಮಾಜಿ ಶಾಸಕ ಕೊತ್ತೂರು ಮಂಜುನಾಥ್ ರೊಂದಿಗೆ ಗುರ್ತಿಸಿಕೊಂಡಿದ್ದು, ಅವರ ಬಲಗೈ ಬಂಟನಾಗಿ ಹತ್ತಿರವಾಗಿದ್ದಾರೆ.
ಬಾರ್ ಮತ್ತು ಹೋಟೆಲ್ ಗಳಲ್ಲಿ ಕೆಲಸ ಮಾಡಿದ್ದರು
ತೀರ ಬಡ ಕುಟುಂಬದ ಹಿನ್ನಲೆಯಿಂದ ಬಂದ ಮೋಹನ್ ಕೆಳೆಮಟ್ಟದಿಂದ ಬೆಳೆದವರು. ಹಿಂದೊಮ್ಮೆ ಬಾರ್ ಮತ್ತು ಹೋಟೆಲ್ ಗಳಲ್ಲಿ ಕೆಲಸ ಮಾಡಿದವರು. ಕಷ್ಟಪಟ್ಟು ಮೇಲೆ ಬಂದು ಜನಸಂಘಟನೆಯಲ್ಲಿ ತೊಡಗಿದ್ದವರು, ಹೀಗಿದ್ದಾಗಲೇ ಕ್ಷೇತ್ರದಲ್ಲಿ ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್ ರೊಂದಿಗೆ ಗುರ್ತಿಸಿಕೊಂಡಿದ್ದರು, ಇತ್ತೀಚೆಗೆ ನಗರಸಭೆ ಸ್ಥಾಯಿ ಸಮೀತಿ ಸದಸ್ಯರಾಗಿ ಗಮನಸೆಳೆದಿದ್ದರು.
ಆದರೆ ವೈಯುಕ್ತಿಕವಾಗಿ ಯಾರೊಂದಿಗೂ ದ್ವೇಶ ಇರಲಿಲ್ಲ, ನಮ್ಮ ತಂದೆ ಯಾರಿಗೂ ಮೋಸ ಮಾಡಿಲ್ಲ. ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು, ನಮ್ಮ ತಂದೆಯ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುತ್ತಾರೆ ಅವರ ಪುತ್ರ ಮಿಥುನ್ ಸಾಯಿ ಕೃಷ್ಣ.
ಇದನ್ನೂ ಓದಿ: Miracle: ಮಳೆ ಸುರಿಯುದಿದ್ದರೂ ಮರದ ಕೊಂಬೆಗಳಿಂದ ನೀರಿನ ಸಿಂಚನ; ಕೊಡಗಿನ ಅಚ್ಚರಿಯ ಮರ
ಇನ್ನು ಮೃತ ಪಲ್ಲೆ ಮೋಹನ್ ಹತ್ತು ವರ್ಷಗಳ ಹಿಂದೆ ಕೆಲ ಕ್ರಿಮಿನಲ್ ಪ್ರಕರಣದಲ್ಲು ಭಾಗಿಯಾದ ಮಾಹಿತಿಯಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಂಗಲಿ ಚೆಕ್ ಪೋಸ್ಟ್ ನ ಜೆ.ಎಸ್.ಆರ್ ಟೋಲ್ ವ್ಯವಸ್ಥಾಪನೆಯನ್ನು ಗುತ್ತಿಗೆ ಪಡೆದಿದ್ದ ಮೋಹನ್ ರೆಡ್ಡಿ, ರಿಯಲ್ ಎಸ್ಟೇಟ್, ಸೇರಿದಂತೆ ಹಣಕಾಸು ವಹಿವಾಟು ಕೂಡ ಮಾಡುತಿದ್ದರು, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಲಗೈ ನಂತೆಯೇ ಇದ್ದ ಮೋಹನ್ ರೆಡ್ಡಿಗೆ ಕೊತ್ತೂರು ಮಂಜುನಾಥ್ ಅಂದರೆ ಅಭಿಮಾನ ಹೆಚ್ಚು, ಯಾವಾಗ ನೋಡಿದರು ಮಂಜುನಾಥ್ ಹಿಂದೆಯೇ ಒಡಾಡುತ್ತಿದ್ದವರು.
ಶಿಕ್ಷೆಯಾಗಬೇಕು ಎಂದ ಜೆಡಿಎಸ್ ಮುಖಂಡರು
ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ರ ಬಹುತೇಕ ಕೆಲಸ ಇದೇ ಜಗನ್ ಮೋಹನ್ ರೆಡ್ಡಿಯೇ ಮಾಡುತಿದ್ದರು. ಈ ಹಿಂದೆ ಇವರ ಮೇಲೆಯೂ ಸಹ ರೌಡಿ ಲೀಸ್ಟ್ ಇತ್ತು. ನಂತರ ಸಮಾಜಸೇವೆಯಲ್ಲಿ ತೊಡಗಿದ್ದರಿಂದ ಹಿಂದಿನ ಶತ್ರುಗಳೆ ಈ ಕೃತ್ಯ ಎಸಗಿರಬಹುದುಬ ಶಂಕೆ ವ್ಯಕ್ತವಾಗುತ್ತಿದೆ. ಜೊತೆಗೆ ರಾಜಕೀಯವಾಗಿ ಬೆಳೆಯುತ್ತಿರುವ ಮೋಹನ್ ರೆಡ್ಡಿ ವಕ್ಕಲಿಗರ ಸಂಘದಲ್ಲಿಯೂ ಗುರ್ತಿಸಿಕೊಂಡವರು. ನಮ್ಮ ತಾಲೂಕಿನಲ್ಲಿ ಈ ರೀತಿಯ ಕೊಲೆ ನಡೆದಿರುವ ಉದಾಹರಣೆಗಳಿಲ್ಲ, ಕೊಲೆಗಡುಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜೆಡಿಎಸ್ ಮುಖಂಡರು ಕೂಡ ಹೇಳಿದ್ದಾರೆ.
ಬೆಟ್ಟಿಂಗ್ ಆಡುತ್ತಿದ್ದ ಯುವಕರಿಗೆ ಎಚ್ಚರಿಕೆ
2018 ರಲ್ಲಿ ನಂಗಲಿ ಗ್ರಾಮದಲ್ಲಿ ಐ.ಪಿ.ಎಲ್ ಬೆಟ್ಟಿಂಗ್ ಆಡುತ್ತಿದ್ದ ಯುವಕರ ಮಾಹಿತಿಯನ್ನ ಪಡೆದಿದ್ದ, ಯುವಕರಿಗೆ ಮೋಹನ್ ಎಚ್ಚರಿಕೆ ನೀಡಿದ್ದರು, ಬಳಿಕ ಯುವಕರು ಮೋಹನ್ ರೆಡ್ಡಿ ಕೊಲೆ ಸಂಚು ಮಾಡಿದ್ದಾರೆ ಎಂದು ತಿಳಿದ, ಮೋಹನ್ ರೆಡ್ಡಿ ಮುಳಬಾಗಿಲು ನಗರ ಠಾಣೆಗೆ ದೂರು ನೀಡಿ, ಐವರನ್ನು ಜೈಲಿಗೆ ಕಳಿಸಿದ್ದರು, ಇದೇ ದ್ವೇಷದ ಮೇಲೆ ಕೊಲೆ ನಡೆದಿರ ಬಹುದು ಎಂದು ಪೊಲೀಸರು, ದ್ವೇಷದ ಆಯಾಮದ ವಿಚಾರವಾಗಿ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಐ.ಜಿ.ಪಿ ಚಂದ್ರಶೇಖರ್ ಅವರು ಭೇಟಿ
ಸ್ತಳಕ್ಕೆ ಕೇಂದ್ರ ವಲಯ ಐ.ಜಿ.ಪಿ ಚಂದ್ರಶೇಖರ್ ಅವರು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಆರೋಪಿಗಳ ಸಣ್ಣ ಸುಳಿವು ಸಿಕ್ಕಿದೆ. 4 ತನಿಖಾ ತಂಡ ರಚಿಸಿದ್ದು, ಶೀಘ್ರದಲ್ಲೆ ಆರೋಪಿಗಳನ್ನ ಬಂದಿಸುವುದಾಗಿ ತಿಳಿಸಿದರು.
ಅಂತಿಮ ದರ್ಶನದಲ್ಲಿ ಸಾವಿರಾರು ಜನರು ಭಾಗಿ
ಮೃತ ಜಗನ್ ಮೋಹನ್ ರೆಡ್ಡಿ ಅಂತಿಮ ದರ್ಶನದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಪತ್ನಿ, ಮಗಳು, ಮಗನ ಆಕ್ರಂದನ ಮುಗಿಲು ಮುಟ್ಟಿತ್ತು, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಶಾಸಕ ನಾಗೇಶ್, ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ಮಾಜಿ ಶಾಸಕ ಮಂಜುನಾಥ್ ಗೌಡ ಮೃತರ ಅಂತಿಮ ದರ್ಶನ ಪಡೆದರು, ಮುಳಬಾಗಿಲು ತಾಲೂಕಿನ ಕಾಂತರಾಜ ಸರ್ಕಲ್ ಬಳಿಯ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕುಟುಂಬಸ್ತರು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ