ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹೆಂಡತಿಯನ್ನು ಅಟ್ಟಾಡಿಸಿ ಕೊಚ್ಚಿ ಕೊಂದ ಗಂಡ

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹೇಮಾ ಚನ್ನರಾಯಪಟ್ಟಣ ನಿವಾಸಿಯಾಗಿದ್ದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು

news18-kannada
Updated:July 1, 2020, 8:27 AM IST
ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹೆಂಡತಿಯನ್ನು ಅಟ್ಟಾಡಿಸಿ ಕೊಚ್ಚಿ ಕೊಂದ ಗಂಡ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು.1): ಗಂಡನ ಕಿರುಕುಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದ ಪತ್ನಿಯನ್ನ ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ನಗರದ ರಾಜಗೋಪಾಲನಗರ ನಿವಾಸಿ ಹೇಮಾ (32) ಕೊಲೆಯಾದ ದುರ್ದೈವಿ. ಆರೋಪಿ ಪತಿ ಮಂಜುನಾಥ್ ನಾಪತ್ತೆಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ.

ಕಳೆದ ರಾತ್ರಿ ಗಂಡ ಹೆಂಡತಿ ನಡುವೆ ಜಗಳವಾಗಿದ್ದು ಹೇಮಾ ಗಂಡ ಮಂಜುನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಳು. ಪತ್ನಿ ತನ್ನ ವಿರುದ್ಧ ಪೊಲೀಸ್ ಠಾಣೆಗೆ ಹೋಗುವ ವಿಷಯ ತಿಳಿದ ಮಂಜುನಾಥ್ ಪತ್ನಿ ಮೇಲೆ ಜೋರು ಗಲಾಟೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪತಿಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರ ಓಡಿ ಹೋಗುವಾಗ ಪತ್ನಿಯನ್ನ ಹಿಂಬಾಲಿಸಿದ ಗಂಡ ಮಂಜುನಾಥ್ ಲವಕುಶನಗರದ ನಡು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಪತ್ನಿ ಹೇಮಾ ತಲೆಯನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಹೇಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹೇಮಾ ಚನ್ನರಾಯಪಟ್ಟಣ ನಿವಾಸಿಯಾಗಿದ್ದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಗಂಡ ಮಂಜುನಾಥ್ ಕುಣಿಗಲ್ ಮೂಲದ ವ್ಯಕ್ತಿಯಾಗಿದ್ದು ನಗರದಲ್ಲಿ ಕ್ಯಾಬ್ ಓಡಸುತ್ತಿದ್ದ. ಹಿರಿಯರ ನಿಶ್ಚಯದಂತೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಜುಲೈ 31ರವರೆಗೆ ಅನ್​ಲಾಕ್ 2: ಏನಿದೆ ಮಾರ್ಗಸೂಚಿ? ಯಾವ್ಯಾವುದಕ್ಕಿಲ್ಲ ಅವಕಾಶ?

ಕಳೆದ ಕೆಲ ತಿಂಗಳುಗಳಿಂದ ಸಂಸಾರದಲ್ಲಿ ಪದೇ ಪದೇ ಕಲಹವಾಗಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇದೇ ವಿಚಾರದಲ್ಲಿ ನಿನ್ನೆ ಸಂಜೆ ಮನೆಯಲ್ಲಿ ಜೋರು ಗಲಾಟೆಯಾಗಿ ಪತ್ನಿ ಹೇಮಾ ಮೇಲೆ ಮಂಜುನಾಥ್ ಚಾಕುವಿನಿಂದ ಹಲ್ಲೆಗೆ ಮಾಡಿದ್ದ. ಗಂಡನಿಂದ ತಪ್ಪಿಸಿಕೊಂಡು ಹೋಗುವ ವೇಳೆ ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಪತ್ನಿಯನ್ನ ಕೊಲೆಗೈದ ಬಳಿಕ ಆರೋಪಿ ಪತಿ ಮಂಜುನಾಥ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಹುಡುಕಾಟ ನಡೆಸಿದ್ದಾರೆ.
First published: July 1, 2020, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading