ಪತ್ನಿ ವಾಪಸ್ ಬೇಕೆಂದು ಅರ್ಜಿ ಹಾಕಿ, ಕೋರ್ಟ್ ಆವರಣದಲ್ಲೇ ಆಕೆಯನ್ನ ಕೊಂದ ಪತಿ


Updated:April 24, 2018, 3:28 PM IST
ಪತ್ನಿ ವಾಪಸ್ ಬೇಕೆಂದು ಅರ್ಜಿ ಹಾಕಿ, ಕೋರ್ಟ್ ಆವರಣದಲ್ಲೇ ಆಕೆಯನ್ನ ಕೊಂದ ಪತಿ
ಪ್ರಾತಿನಿಧಿಕ ಚಿತ್ರ

Updated: April 24, 2018, 3:28 PM IST
- ನ್ಯೂಸ್​​18 ಕನ್ನಡ

ಸಾಂಬಲ್ಪುರ(ಏ. 24): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಇರಿದುಕೊಂದ ಘಟನೆ ಒಡಿಶಾದ ಫ್ಯಾಮಿಲಿ ಕೋರ್ಟ್​ನ ಆವರಣದಲ್ಲಿಯೇ ಸಂಭವಿಸಿದೆ. ರಮೇಶ್ ಕುಂಭರ್ ಎಂಬಾತ ತನ್ನ 18 ವರ್ಷದ ಪತ್ನಿ ಸಂಜಿತಾ ಚೌಧರಿ ಮೇಲೆ ಹಲ್ಲೆ ನಡೆಸಿ, ಕತ್ತಿಯಿಂದ ಇರಿದು ಕೊಂದಿದಾನೆ. ಇದೇ ವೇಳೆ ಸಂಜಿತಾ ತಾಯಿ ಲಲಿತಾ ಚೌಧರಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಸಂಜಿತಾ ಸ್ಥಳದಲ್ಲೇ ಮೃತಪಟ್ಟರೆ, ಒಂದು ಮಗು ಸೇರಿ ಇಬ್ಬರಿಗೆ ಗಾಯಗಳಾಗಿವೆ ಅಂತ ಪೊಲೀಸರು ಹೇಳಿದ್ರು.

ಒಂದು ವರ್ಷದ ಹಿಂದೆ ರಮೇಶ್​ ಮತ್ತು ಸಂಜಿತಾ ಓಡಿ ಹೋಗಿ ಮದುವೆಯಾಗಿರುತ್ತಾರೆ. ಬಳಿಕ ಹಲವಾರು ತಿಂಗಳುಗಳ ಕಾಲ ಒಟ್ಟಿಗೆ ಸಾಂಸಾರಿಕ ಜೀವ ನಡೆಸುತ್ತಿರುತ್ತಾರೆ. ಪತಿಯ ಕಿರುಕುಳದಿಂದ ಸಂಜಿತಾ ತವರು ಮನೆಗೆ ಹಿಂತಿರುಗಿರುತ್ತಾರೆ. ಪೋಷಕರು ಆಕೆಗೆ ಬೇರೊಂದು ಮದುವೆ ಮಾಡಿಸಿರುತ್ತಾರೆ. ತನಗೆ ಪತ್ನಿ ಬೇಕು ಅಂತ ನ್ಯಾಯಾಲಯದಲ್ಲಿ ರಮೇಶ್ ಅರ್ಜಿ ಸಲ್ಲಿಸುತ್ತಾನೆ.

ಕೇಸ್ ​ವೇಳೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಪ್ರೀ-ಪ್ಲಾನ್ ಪ್ರಕಾರ ರಮೇಶ್​ ದಾಳಿ ನಡೆಸುತ್ತಾನೆ. ನ್ಯಾಯಾಲಯದ ಆವರಣಲ್ಲಿಯೇ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದು, ಆಕೆಯ ಕುಟುಂಬ ಸದಸ್ಯರ ಮೇಲೆಯೂ ಹಲ್ಲೆ ಮಾಡಿದ್ದಾನೆ..

ರಮೇಶ್​ ಸಂಜಿತಾ ಮತ್ತು ಕುಟುಂಬ ಸದಸ್ಯರನ್ನು ಬೆನ್ನತ್ತಿ ಹಿಂಬಾಲಿಸಿ ಅಮಾನವೀಯವಾಗಿ ಹೊಡೆದಿದ್ದಾನೆ. ಈ ವೇಳೆ ಹಿರಿಜೀವ ಸಂಜಿತಾ ತಂದೆ ಸುದನ್ ಚೌಧರಿ ಹಲ್ಲೆಯಿಂದ ತಪ್ಪಿಸಿಕೊಂಡು ಸಂಬಲ್ಪುರದ ಸಾದರ್ ತಹ್ಸಿಲ್ ಅಧಿಕಾರಿ​ ​ಕಚೇರಿಗೆ ಓಡಲು ಯತ್ನಿಸಿದ್ದಾರೆ. ಆರೋಪಿ ಅಲ್ಲಿಯೂ ಹೋಗಿ ಹಲ್ಲೆ ಮಾಡಲ ಯತ್ನಿಸುತ್ತಾರೆ. ಈ ವೇಳೆ ಸ್ಥಳೀಯರು ರಮೇಶ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಕೂಡಲೇ ರಮೇಶ್​ನನ್ನು ಪೊಲೀಸರಿಗೆ ಒಪ್ಪಿಸಿದ್ರು.. ಇಲ್ಲದೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬುರ್ಲಾದ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದೀಗ ಸಂಬಲ್ಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಮಿಹಿರ್ ಪಾಂಡ ರಮೇಶ್ ಅವರನ್ನು ಬಂಧಿಸಿ, ಆರೋಪಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಂಬಲ್ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡಿದ್ದೇವೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
First published:April 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ