ತನಗಿಂತ 18 ವರ್ಷ ದೊಡ್ಡವಳ ಹಿಂದೆ ಬಿದ್ದಿದ್ದ ಭೂಪ; ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೊಂದೇ ಬಿಟ್ಟ..!

ತನಗಿಂತ 18 ವರ್ಷ ದೊಡ್ಡವಳಿದ್ದ ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ ಆತ ತನ್ನನ್ನು ಮದುವೆಯಾಗಲು ನಿರಾಕರಿಸಿದಳೆಂದು ಸಾಯಿಸಿದ್ದಾನೆ. ಬಿಹಾರದ ನಿವಾಸಿ ಶ್ಯಾಮ್​ ಯಾದವ್​ ಕೊಲೆ ಮಾಡಿದ ಆರೋಪಿ. ಈತ 45 ವರ್ಷದ ಮಾಧುರಿ ಎಂಬ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ,(ಫೆ.8): ಮದುವೆಯಾಗಲು ನಿರಾಕರಿಸಿದ ವಿವಾಹಿತ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

  ತನಗಿಂತ 18 ವರ್ಷ ದೊಡ್ಡವಳಿದ್ದ ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ ಆತ ತನ್ನನ್ನು ಮದುವೆಯಾಗಲು ನಿರಾಕರಿಸಿದಳೆಂದು ಸಾಯಿಸಿದ್ದಾನೆ. ಬಿಹಾರದ ನಿವಾಸಿ ಶ್ಯಾಮ್​ ಯಾದವ್​ ಕೊಲೆ ಮಾಡಿದ ಆರೋಪಿ. ಈತ 45 ವರ್ಷದ ಮಾಧುರಿ ಎಂಬ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

  ಇಬ್ಬರೂ ಸಹ ಒಂದೇ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಸಹ ಆತ ಮಹಿಳೆಯ ಹಿಂದೆ ಬಿದ್ದಿದ್ದ. ಆದರೆ ಮಹಿಳೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.

  ಆಂಧ್ರದ ಐಎಎಸ್​ ಅಧಿಕಾರಿ ಮಗನ ಮದುವೆಗೆ ಖರ್ಚಾದ ಮೊತ್ತ ಕೇಳಿದರೆ ಶಾಕ್​ ಆಗ್ತೀರ!

  ಆರೋಪಿಯ ಕಿರುಕುಳ ಹೆಚ್ಚಾದಂತೆ ಮಹಿಳೆ ಕೆಲಸವನ್ನು ಸಹ ಬಿಟ್ಟಿದ್ದಳು. ಆದರೂ ಸಹ ಬೆಂಬಿಡದ ಆತ ಮಹಿಳೆಯನ್ನು ಹಿಂಬಾಲಿಸಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ವಿಷಯ ತಿಳಿದ ತಕ್ಷಣ ನಂಗೋಲಿ ಪೊಲೀಸ್​ ಠಾಣೆಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  ಆರೋಪಿ ಶ್ಯಾಮ್​ ನನ್ನ ಮುಂದೆಯೇ ನನ್ನ ತಾಯಿಯನ್ನು ಕೊಲೆ ಮಾಡಿದ ಎಂದು ಮೃತ ಮಹಿಳೆಯ ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯು ಕೊಲೆ ಮಾಡಿದ ನಂತರ ದೆಹಲಿಯನ್ನು ಬಿಟ್ಟು ಹೋಗಲು ಪ್ಲಾನ್​ ಮಾಡಿದ್ದ ಎನ್ನಲಾಗಿದೆ.

  First published: