Mandya: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ; ಸ್ನೇಹಿತನ ಅತ್ತೆ ಮೇಲೆ ಕಣ್ಣು ಹಾಕಿದ ಗೆಳೆಯನ ಕಥೆ ಫಿನಿಶ್

ಶೋಭಾ ಜೊತೆ ಜಗಳ ಮಾಡಿಕೊಂಡು ಹೊರಟ ರವಿ ನೇರವಾಗಿ ಬಾರ್ ಗೆ ಬಂದಿದ್ದಾನೆ . ಹೇಗಿದ್ರೂ ರವಿ ಬಾರ್ ನಲ್ಲಿ ಇರ್ತಾನೆ ಅನ್ನೋ ವಿಚಾರ ತಿಳಿದಿದ್ದ ಶರತ್ ಮಾರಕಾಸ್ತ್ರಗಳನ್ನ ಹಿಡಿದು ಬಾರ್ ಬಳಿ ಬಂದಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಅಕ್ರಮ ಸಂಬಂಧ (Illicit Relationship) ಅನ್ನೋದೆ ಹಾಗೆ. ಯಾವತ್ತಿದ್ದರೂ ಸಾವನ್ನ ಬೆನ್ನಿಗೆ ಕಟ್ಕೊಂಡ ರೀತಿ. ಇದೇ ರೀತಿ ಮಂಡ್ಯದ ಬೆಳಗೊಳ (Belagola, Mandya) ಗ್ರಾಮದಲ್ಲೊಬ್ಬ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಬಲಿಯಾಗಿದ್ದಾನೆ. ಆದ್ರೆ ಆತ ಅಕ್ರಮ ಸಂಬಂಧ ಇಟ್ಕೊಂಡಿದ್ದು ಯಾರ ಜೊತೆ, ಆತ ಸತ್ತಿದ್ದಾದ್ರು ಹೇಗೆ ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಹೌದು ಈ ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Sriranagapatna) ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ. ರಾತ್ರಿ ಸುಮಾರು 9 ಗಂಟೆ ಸಂದರ್ಭದಲ್ಲಿ ಬೆಳಗೊಳ ಗ್ರಾಮದ ಸವಿತಾ ಬಾರ್ ಮುಂದೆ ಗ್ರಾಮದ 32 ವರ್ಷದ ರವಿ ಎಂಬಾತನನ್ನು ಹತ್ಯೆ (Murder) ಮಾಡಲಾಗಿದೆ. ಬಾರ್ ಮುಂದೆ ರವಿಯನ್ನ ಆತನ ಸ್ನೇಹಿತ ಶರತ್ ಅಲಿಯಾಸ್ ಅಪ್ಪಿ ರಾತ್ರಿ ಸುಮಾರು 9 ಗಂಟೆ ಸಂದರ್ಭದಲ್ಲಿ ಕುತ್ತಿಗೆಯನ್ನ ಸೀಳಿ ನಂತರ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ಬಳಿಕ ಸ್ಥಳದಲ್ಲೇ ಇದ್ದ ಜನರು ಶರತನನ್ನು ಹಿಡಿಯಲು ಪ್ರಯತ್ನಿಸಿದಾಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಇನ್ನು ಇಷ್ಟಕ್ಕೂ ಶರತ್ ಯಾಕೆ ರವಿಯನ್ನ ಕೊಲೆ ಮಾಡಿದ? ಆತನಿಗೂ ರವಿಗೂ ಏನು ಸಂಬಂಧ ಅಂತ ನಿಮಗನಿಸಿರಬಹುದು. ರವಿ ಮತ್ತು ಶರತ್ ಗೆ ಸ್ನೇಹದ ಸಂಬಂಧವಿತ್ತು. ಅಂದ್ರೆ ಅವ್ರಿಬ್ರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.

ಇಬ್ಬರು ಕುಚುಕು ಗೆಳೆಯರು

ಅದು ಎಷ್ಟರ ಮಟ್ಟಿಗೆ ಅಂದ್ರೆ ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು ಅಂತಾರಲ್ಲಾ ಅಷ್ಟರ ಮಟ್ಟಿಗೆ. ಹೀಗಾಗಿ ರವಿ ಬೆಳಗೊಳ ಗ್ರಾಮದ ಮಂಜುನಾಥ ನಗರದಲ್ಲಿರುವ ತನ್ನ ಮನೆಯ ಪಕ್ಕದ ಮನೆಯನ್ನ ಶರತ್ ಗೆ ಕೊಟ್ಟು, ಅದೆಷ್ಟು ಬಾಡಿಗೆ ಕೊಡ್ತಿಯ ಕೊಡು ಇಲ್ಲೆ ಇದ್ದುಬಿಡು ಎಂದಿದ್ದ.

ಇದನ್ನೂ ಓದಿ:  Belagavi: ಒಂದು ಫೋಟೋ, 19 ಲಕ್ಷ; ಸೋಶಿಯಲ್ ಮೀಡಿಯಾ ಬಳಸೋ ಯುವತಿಯರೇ ಎಚ್ಚರ ಇಂಥಹವರು ಇರ್ತಾರೆ

ಶರತ್ 10 ತಿಂಗಳ ಹಿಂದೆ ರವಿ ಮನೆಗೆ ಬಾಡಿಗೆಗೆ ಬಂದಿದ್ದ. ಇನ್ನು ಶರತ್ ಗೆ ಅಪ್ಪ ಅಮ್ಮ ಇಲ್ಲದ ಕಾರಣ ತನ್ನ ಸೋದರ ಮಾವ ಮತ್ತು ಆತನ ಪತ್ನಿ ಶೋಭಾ ಜೊತೆಯಲ್ಲೆ ವಾಸವಾಗಿದ್ದನು.

Man kills friend over illicit relationship with relative sgmtv mrq
ಸಾಂದರ್ಭಿಕ ಚಿತ್ರ


ಶರತ್ ಅತ್ತೆ ಜೊತೆ ರವಿಗೆ ಪ್ರೇಮಾಂಕುರ

ಇನ್ನು ಹೀಗೆ ಪಕ್ಕದ ಮನೆಗೆ ಶರತ್ ಕುಟುಂಬ ಬರ್ತಿದ್ದಂತೆ ಶರತ್ ಅತ್ತೆ ಮೇಲೆ‌ ಕಣ್ಣು ಹಾಕಿದ್ದ. ಬಳಿಕ ಆಕೆಯನ್ನ ತನ್ನ ಪ್ರೇಮ ಪಾಶದಲ್ಲಿ ಬೀಳಿಸಿಕೊಂಡ ರವಿ ಪ್ರತಿ ನಿತ್ಯ ಆಕೆಯ ಜೊತೆ ಪ್ರೇಮ ಪಲ್ಲಂಗದಾಟವಾಡ್ತಿದ್ನಂತೆ. ಇದನ್ನ ಕಂಡರು ಪ್ರಶ್ನಿಸಲಾಗದೆ ರವಿ ಅಜ್ಜಿ ಸುಮ್ಮನಾಗಿದ್ದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

Man kills friend over illicit relationship with relative sgmtv mrq
ರವಿ


ಈ ವಿಚಾರ ಶರತ್ ಗೆ ಗೊತ್ತಾಗ್ತಿದ್ದಂತೆ ರವಿ ವಿರುದ್ಧ ಕೆಂಡಾಮಂಡಲನಾಗಿದ್ದ. ಬುಧವಾರ ಸಂಜೆ ಶೋಭಾ ಮತ್ತು ರವಿ ನಡುವೆ ಅವರ ಮನೆಯಲ್ಲಿ ಜೋರು ಜಗಳ ನಡೆದಿದೆ. ಬಳಿಕ ಶೋಭಾ ಮನೆಯಿಂದ ಹೊರಟ ರವಿ ಸವಿತಾ ಬಾರ್ ಕಡೆ ಬಂದಿದ್ದ. ಇತ್ತ ಶರತ್ ಕೂಡ ನಮ್ಮ ಅತ್ತೆಯ ಮೇಲೆ ರವಿ ಕಣ್ಣು ಹಾಕಿದ್ನಲ್ಲ ಅಂತ ರವಿ ವಿರುದ್ದ ಆಕ್ರೋಶಗೊಂಡಿದ್ದನು.

ಜಗಳ ಮಾಡ್ಕೊಂಡು ಬಾರ್ ಗೆ ಬಂದಿದ್ದ

ರವಿ ಬೆಳಗೊಳ ಗ್ರಾಮದ ಸವಿತಾ ಬಾರ್ ನಲ್ಲಿ ಪ್ರತಿದಿನ ಸಂಜೆ ಪಾರ್ಟ್ ಟೈಮ್‌ ಕೆಲಸ ಮಾಡ್ತಿದ್ದ. ಬಾರ್ ಗೆ ಬರೋ ಕಸ್ಟಮರ್ ಗಳಿಗೆ ಸಪ್ಲೈ ಕೆಲಸ ಮಾಡ್ತಿದ್ದ. ಶೋಭಾ ಜೊತೆ ಜಗಳ ಮಾಡಿಕೊಂಡು ಹೊರಟ ರವಿ ನೇರವಾಗಿ ಬಾರ್ ಗೆ ಬಂದಿದ್ದಾನೆ .
ಹೇಗಿದ್ರೂ ರವಿ ಬಾರ್ ನಲ್ಲಿ ಇರ್ತಾನೆ ಅನ್ನೋ ವಿಚಾರ ತಿಳಿದಿದ್ದ ಶರತ್ ಮಾರಕಾಸ್ತ್ರಗಳನ್ನ ಹಿಡಿದು ಬಾರ್ ಬಳಿ ಬಂದಿದ್ದ.

Man kills friend over illicit relationship with relative sgmtv mrq
ಸಾಂದರ್ಭಿಕ ಚಿತ್ರ


ಮೊದಲೇ ನಿರ್ಧರಿಸಿದ್ದಂತೆ ರವಿಯ‌ನ್ನ ಬಾರ್ ಹೊರಗೆ ಕರೆದು ಆತನ ಹಿಂದಿನಿಂದ ಬಂದು ಕುತ್ತಿಗೆಯನ್ನು ಕುಯ್ದು ಶರತ್ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿಯನ್ನ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರವಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ:  Praveen Nettaru: ರಾಜೀನಾಮೆ ನೀಡುವ ಬಿಜೆಪಿ ಪದಾಧಿಕಾರಿಗಳಿಗೆ ಅಭಿನಂದನೆ; ಬಿಜೆಪಿ ವಿರುದ್ಧ ಮುತಾಲಿಕ್ ಕಿಡಿ

ಆರೋಪಿಯ ಬಂಧನಕ್ಕೆ ಬಲೆ

ಇನ್ನು ವಿಚಾರ ತಿಳಿದ ಕೆಆರ್‌ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಮಂಡ್ಯ SP ಯತೀಶ್, ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನ ಆದಷ್ಟು ಬೇಗ ಬಂಧಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಅಕ್ರಮ ಸಂಬಂಧ ಯಾವತ್ತಿದ್ರು ಕೊಲೆಯಲ್ಲಿ ಅಂತ್ಯವಾಗತ್ತೆ ಅನ್ನೋ ಮಾತು ಮತ್ತೊಮ್ಮೆ ಸಾಬೀತಾಗಿದೆ.
Published by:Mahmadrafik K
First published: