Crime News: ಇಬ್ಬರು ಹೆಂಡ್ತಿಯ ಮುದ್ದಿನ ಗಂಡನ ಬರ್ಬರ ಹತ್ಯೆ! 20 ವರ್ಷ ಬಿಟ್ಟು ಬಂದ ತಂದೆಯನ್ನು ಕೊಂದ ಮಗ

ರಡು ತಿಂಗಳು ಕಳೆದ್ರೆ ನಿವೃತ್ತಿ ಕೂಡ ಆಗ್ತಾಯಿದ್ದ. ನಿವೃತ್ತಿ ಅಂಚಿನಲ್ಲಿದ್ದ ಉಪನ್ಯಾಸಕ ಮಟ ಮಟ ಮಧ್ನಾಹ್ನದಲ್ಲೇ ಬರ್ಬರ್ ವಾಗಿ ಕೊಲೆಯಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾದಗಿರಿ(ಜೂ.02): ಆತ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ (PU College) ಉಪನ್ಯಾಸಕನಾಗಿ (Lecturer) ಕೆಲಸ ಮಾಡ್ತಾಯಿದ್ದ. ಇನ್ನೇನು ಎರಡು ತಿಂಗಳು ಕಳೆದ್ರೆ ನಿವೃತ್ತಿ (Retirement) ಕೂಡ ಆಗ್ತಾಯಿದ್ದ. ನಿವೃತ್ತಿ ಅಂಚಿನಲ್ಲಿದ್ದ ಉಪನ್ಯಾಸಕ ಮಟ ಮಟ ಮಧ್ನಾಹ್ನದಲ್ಲೇ ಬರ್ಬರ್ ವಾಗಿ ಕೊಲೆಯಾಗಿದ್ದಾನೆ. ಕೊಲೆ ನಡೆದ 19 ದಿನಗಳ ಬಳಿಕ ಪೊಲೀಸರು (Police) ಕೊಲೆಗಡುಕರನ್ನ ಹೆಡೆಮುರಿ ಕಟ್ಟಿದ್ದಾರೆ. ಕಳೆದ 19 ದಿನಗಳ ಹಿಂದೆ ಅಂದ್ರೆ ಇದೇ ಮೇ 12 ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ ಬಿ ಸಮೀಪ ಒಂದು ಕೊಲೆ ಘಟನೆ ನಡೆದಿತ್ತು. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಗೋಪಾಳಪುರ ಗ್ರಾಮದ 59 ವರ್ಷದ ಮಾನಪ್ಪನನ್ನ ಪಾಪಿಗಳು ಬರ್ಬರವಾಗಿ ಕೊಲೆ ಮಾಡಿದ್ರು.

ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡ್ತಾಯಿದ್ದ ಮಾನಪ್ಪ ಇನ್ನೇನು ಎರಡು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದ. ನಿವೃತ್ತಿಗಿಂತ ಮೊದ್ಲು ಪ್ರಾಂಶುಪಾಲನಾಗಿ ಬಡ್ತಿ ಪಡೆಯುವ ಹಂತದಲ್ಲಿದ್ದ. ಆದ್ರೆ ಈ ಮಾನಪ್ಪ ಎರಡೆರಡು ಮದುವೆಗಳನ್ನ ಮಾಡಿಕೊಂಡಿದ್ದ. ಕಳೆದ 28 ವರ್ಷಗಳ ಹಿಂದೆ ಮಲ್ಲಮ್ಮ ಎಂಬಾಕೆ ಜೊತೆ ಮದುವೆ ಮಾಡಿಕೊಂಡಿದ್ದ ಮಾನಪ್ಪನಿಗೆ ಮೊದಲ ಪತ್ನಿಯಿಂದ ಮೂವರು ಮಕ್ಕಳಿದ್ದಾರೆ.

ಆದ್ರೆ ಏಳು ವರ್ಷಗಳ ಬಳಿಕ ಮೊದಲ ಪತ್ನಿಯಿಂದ ದೂರವಿದ್ದ ಮಾನಪ್ಪ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೈಯ್ಯಾಳ ಬಿ ಗ್ರಾಮದ ತಾಯಮ್ಮಳ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಎರಡನೇ ಪತ್ನಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಆದ್ರೆ ಮೊದಲ ಪತ್ನಿಯ ಹಾಗೂ ಮಕ್ಕಳಿಗೆ ನಯಾ ಪೈಸೆ ಹಣ ಕೊಡದೆ ಎರಡನೇ ಎರಡನೇ ಪತ್ನಿಯ ಮನೆಯಲ್ಲಿಯೇ ಇರ್ತಾಯಿದ್ದ.

ಕಳೆದ ಇಪ್ಪತ್ತು ವರ್ಷದಿಂದ ಮೊದಲ ಹೆಂಡತಿ ಮಕ್ಕಳನ್ನು ದೂರವಿಟ್ಟಿದ್ದ ಮಾನಪ್ಪ

ಮಾನಪ್ಪ ವೃತ್ತಿಯಲ್ಲಿ ಉಪನ್ಯಾಸಕ ಮೊದಲ ಹೆಂಡತಿ ಮತ್ತು ಮಕ್ಕಳನ್ನು ಕಳೆದ 20 ವರ್ಷದಿಂದ ದೂರವಿಟ್ಟು, ಎರಡನೇ ಮದುವೆಯಾಗಿದ್ದನು. ಮಾನಪ್ಪನ ಹೆಸರಿಗಿರುವ ಐದು ಎಕರೆ ಆಸ್ತಿ ಕೂಡ ಎರಡನೇ ಪತ್ನಿ ತಾಯಮ್ಮಳ ಹೆಸರಿಗೆ ಮಾಡಿಕೊಟ್ಟಿದ್ದಾನೆ. ಇನ್ನು ನಿವೃತ್ತಿ ಬಳಿಕ ಬರುವ ಪಿಂಚಣಿ ಕೂಡ ಎರಡನೇ ಪತ್ನಿಗೆ ಬರುವ ಹಾಗೆ ಮಾಡಿದ್ದಾನೆ.

ಇತ್ತ ಮೊದಲ ಪತ್ನಿ ಹಾಗೂ ಮಕ್ಕಳು ಇದ್ದಿದೆಲ್ಲ ಎರಡನೇ ಪತ್ನಿಗೆ ಹೆಸರಿಗೆ ಮಾಡ್ತಾಯಿದ್ದಾನೆ ಅಂತ ಕೊತ ಕೊತ ಕುದಿಯುತ್ತಿದ್ರು. ಇನ್ನು ಕಳೆದ ಕೆಲ ವರ್ಷಗಳ ಹಿಂದೆ ನ್ಯಾಯಾಲಯ ಕೂಡ ಮೊದಲ ಪತ್ನಿ ಹಾಗೂ ಮಕ್ಕಳ ಜೀವನಾಂಶಕ್ಕಾಗಿ ಇಂತಿಷ್ಟು ಹಣವನ್ನ ನೀಡಬೇಕು ಅಂತ ಹೇಳಿತ್ತು. ಆದ್ರೆ ಮಾನಪ್ಪ ಮಾತ್ರ ನಯಾ ಪೈಸೆ ಕೊಡದೆ ಎಲ್ಲವೂ ಎರಡನೇ ಪತ್ನಿಗೆ ಕೊಡ್ತಾಯಿದ್ದ.

ತಾಯಿ ಮತ್ತು ಮಕ್ಕಳನ್ನ ಸರಿಯಾಗಿ ನೋಡಿಲ್ಲ ಅಂತ ತಂದೆಯನ್ನೇ ಕೊಂದ ಮಗ

ಇನ್ನು ನಮ್ಮ ತಂದೆ ಇದ್ದಿದ್ದೆಲ್ಲ ಆಸ್ತಿ ಎರಡನೇ ಪತ್ನಿಯ ಹೆಸರಿಗೆ ಮಾಡಿ ನಮ್ಗೆ ಏನೋ ಕೊಡ್ತಾಯಿಲ್ಲ ಅಂತ ಮೊದಲ ಪತ್ನಿಯ ಮಕ್ಕಳಿಗೆ ಸಿಟ್ಟು ಇತ್ತು. ಇನ್ನು ಮೊದಲ ಪತ್ನಿಯ ಮಗಳ ಮದುವೆಗೂ ನಯಾ ಪೈಸೆಯನ್ನ ಮಾನಪ್ಪ ಕೊಟ್ಟಿಲ್ಲ ಜೊತೆಗೆ ಕರೆದ್ರೆ ಮದುವೆಗೂ ಸಹ ಹೋಗಿಲ್ವಂತೆ. ಮಕ್ಕಳ ಶಿಕ್ಷಣಕ್ಕೂ ಸಹ ಒಂದೇ ಒಂದು ರೂಪಾಯಿ ಇಲ್ಲಿಯವರೆಗೆ ಕೊಟ್ಟಿಲ್ವಂತೆ. ಇದೇ ಕಾರಣಕ್ಕೆ ಹೇಗಾದ್ರು ಮಾಡಿ ತಂದೆಯನ್ನ ಮುಗಿಸಿ ಬಿಡಬೇಕು ಅಂತ ಮೊದಲ ಪತ್ನಿಯ ಮಗ ಬಸಲಿಂಗಪ್ಪ ಪ್ಲಾನ್ ಹಾಕಿ ತಂದೆಯ ಕಥೆಯನ್ನೆ ಮುಗಿಸಿದ್ದಾನೆ.

ಇದನ್ನೂ ಓದಿ: BBMP Election : ಕೋರ್ಟ್​​ ಸೂಚನೆ ಬೆನ್ನಲ್ಲೇ ಡಿ ಲಿಮಿಟೇಷನ್ ಕರುಡು ಸರ್ಕಾರಕ್ಕೆ ಸಲ್ಲಿಸಿದ ಪಾಲಿಕೆ !

ಸುಪಾರಿ ಕಿಲ್ಲರ್ಸ್ ಜೊತೆ ಸೇರಿ ತಂದೆಯನ್ನು ಕೊಂದ ಮಗ

ತಂದೆಯನ್ನು ಕೊಲ್ಲಲು ಮಗ ಬಸಲಿಂಗಪ್ಪ ಸುಫಾರಿ ಕಿಲ್ಲರ್ಸ್ ಗಳನ್ನು ರೆಡಿ ಮಾಡದ್ದಾನೆ. ಕಲಬುರ್ಗಿಯ ಇಬ್ಬರು ಸುಪಾರಿ ಕಿಲ್ಲರ್ಸ್ ಗಳಾದ ಸುರೇಶ್ ಮತ್ತು ಮಾದೇಶ್  ನನ್ನ ಸಂಪರ್ಕ ಮಾಡಿದ್ದಾನೆ. ಇನ್ನು ಒಂದು ಕೊಲೆ ಮಾಡೋದಿದೆ ಇಬ್ಬರಿಗೂ ತಲಾ ಒಂದೊಂದು ಲಕ್ಷ ರೂ. ಕೊಡುವುದಾಗಿ ಹೇಳಿ ಅಡ್ವಾನ್ಸ್ ಆಗಿ ಇಬ್ಬರಿಗೆ ತಲಾ ಹತ್ತು ಸಾವಿರ ಹಣವನ್ನ ನೀಡಿದ್ದಾನೆ. ಇನ್ನು ಸುಪಾರಿ ಕಿಲ್ಲರ್ಸ್ ಜೊತೆ ಮಾನಪ್ಪನ ಮಗ ಬಸಲಿಂಗಪ್ಪ ಕೊಲೆ ಮಾಡುವುದ್ದಕ್ಕಿಂದ ನಾಲ್ಕು ದಿನ ಮೊದಲೇ ಮಾನಪ್ಪ ನಿತ್ಯ ಬೈಕ್ ಮೇಲೆ ಓಡಾಡುವ ಸ್ಥಳಕ್ಕೆ ಬಂದಿದ್ದಾನೆ.

ನಿತ್ಯ ಮಾನಪ್ಪ ಕಾಲೇಜು ಕೆಲಸ ಮುಗಿಸಿಕೊಂಡು ದೇವದುರ್ಗದಿಂದ ಹೈಯ್ಯಾಳ್ ಗ್ರಾಮಕ್ಕೆ ಹೋಗುತ್ತಿದ್ದ. ಇದೇ ಕಾರಣಕ್ಕೆ ಮಾರ್ಗ ಮದ್ಯ ಅಂದ್ರೆ ಕೊಳ್ಳರು ಬಳಿ ನಾಲ್ಕು ದಿನ ನಿತ್ಯ ಹೊಂಚು ಹಾಕಿ ಕೊಲೆ ಮಾಡಲು ಕುಳಿತುಕೊಂಡಿದ್ದಾರೆ. ಆದ್ರೆ ಮಾನಪ್ಪ ನಾಲ್ಕು ದಿನಗಳ ಕಾಲ ಒಂಬೊಂಟ್ಟಿಯಾಗಿ ಬಂದಿಲ್ಲ. ಇನ್ನು ಆದ್ರೆ ಮೇ 12 ರಂದು ದೇವದುರ್ಗದಿಂದ ಬೈಕ್ ಮೇಲೆ ಒಂಬೊಂಟ್ಟಿಯಾಗಿ ಬರೋದ್ದನ್ನ ಗಮನಿಸಿದ ಗ್ಯಾಂಗ್ ಅಟ್ಯಾಕ್ ಮಾಡಿದೆ. ಕಲ್ಲಿನಿಂದ ತಲೆಗೆ ಹೊಡೆದು ಬೈಕ್ ಮೇಲಿಂದ ಕೆಳಗೆ ಬಿಳಿಸಿದ್ದಾರೆ.

ಇದನ್ನೂ ಓದಿ: Masjid v/s Mandir: ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್; ಜೂನ್ 4ಕ್ಕೆ ಮಸೀದಿ ಪ್ರವೇಶಿಸ್ತಾರಂತೆ ಹನುಮ ಭಕ್ತರು!

ಬಳಿಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆದ್ರೆ ಕೊಲೆ ಮಾಡುವುದ್ದಕ್ಕೂ ಮೊದ್ಲೆ ಪ್ಲಾನ್ ಮಾಡಿ ಶಹಾಪುರ ನಗರದಲ್ಲೇ ಫೋನ್ ಬಂದ್ ಮಾಡಿ ಸ್ಥಳಕ್ಕೆ ಬಂದು ಪೊಲೀಸರಿಗೆ ದಾರಿ ತಪ್ಪಿಸಲು ಪ್ಲಾನ್ ಮಾಡಿದ್ರು.. ಆದ್ರೆ ಕೊಲೆ ನಡೆದ ಕೂಡ್ಲೆ ಸ್ಥಳಕ್ಕೆ ಬಂದಿದ್ದ ಶಹಾಪುರ ಪೊಲೀಸರು ಸ್ಥಳವನ್ನ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ್ರು. ಆದ್ರೆ ಕೊನೆಗೆ ಮೂವರು ಆರೋಪಿಗಳು 19 ದಿನಗಳ ಬಳಿಕ ಕಲಬುರ್ಗಿ ನಗರದಲ್ಲಿ ಅರೆಸ್ಟ್ ಆಗಿದ್ದಾರೆ.

ಮೊದಲ ಪತ್ನಿ ಜೊತೆ 7 ವರ್ಷ ಸಂಸಾರ, ಎರಡನೇ ಪತ್ನಿ ಜೊತೆ ಲೈಫ್ ಸೆಟ್ಲು

ಉಪನ್ಯಾಸಕ ಮಾನಪ್ಪ ಮೊದಲ ಪತ್ನಿ ಜೊತೆ ಏಳು ವರ್ಷಗಳ ಕಾಲ ಸಂಸಾರ ಮಾಡಿದ್ದ, ಮಾನಪ್ಪ ಎರಡನೇ ಪತ್ನಿ ಜೊತೆ ಸೆಟ್ಲ್ ಆಗಿದ್ದ. ಆದ್ರೆ ಎರಡನೇ ಪತ್ನಿ ಜೊತೆಗೆ ಮೊದಲ ಪತ್ನಿ ಹಾಗೂ ಮಕ್ಕಳಿಗೆ ನೋಡಿಕೊಂಡಿದ್ರೆ ಇವತ್ತು ಮಾನಪ್ಪನ ಬಿದಿ ಹೆಣವಾಗುತ್ತಿರಲಿಲ್ಲ. ಕೊಲೆ ಮಾಡಿದ ಮಾನಪ್ಪನ ಮಗ ಬಸಲಿಂಗಪ್ಪ ಹಾಗೂ ಇಬ್ಬರು ಸುಪಾರಿ ಕಿಲ್ಲರ್ಸ್ ಗಳಾದ ಸುರೇಶ್, ಮಾದೇಶ್ ಎಂಬ ಆರೋಪಿಗಳನ್ನು ಪೊಲೀಸರು ಅಂದರ್ ಮಾಡಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.
Published by:Divya D
First published: