• Home
  • »
  • News
  • »
  • state
  • »
  • Bengaluru Crime News: ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ; ಪತ್ನಿ ಪೊಲೀಸರ ವಶಕ್ಕೆ

Bengaluru Crime News: ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ; ಪತ್ನಿ ಪೊಲೀಸರ ವಶಕ್ಕೆ

ಕೊಲೆಯಾದ ಚಂದ್ರಶೇಖರ್

ಕೊಲೆಯಾದ ಚಂದ್ರಶೇಖರ್

ಚಂದ್ರಶೇಖರ್ ಪತ್ನಿಯೇ ಗೆಳೆಯನ ಜೊತೆ ಸೇರಿ ಕೊಲೆ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ. ಹಿನ್ನೆಲೆ ಪೊಲೀಸರು ಪತ್ನಿ ಶ್ವೇತಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

  • Share this:

ಮರ್ಮಾಂಗ ಕತ್ತರಿಸಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ (Bengluru Murder) ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಚಂದ್ರಶೇಖರ್ ಕೊಲೆಯಾದ ವ್ಯಕ್ತಿ. ಮೃತ ಚಂದ್ರಶೇಖರ್ ಯಲಹಂಕದ (Yelahanka) ಕೊಂಡಪ್ಪ ಲೇಔಟ್​ನಲ್ಲಿ ವಾಸವಾಗಿದ್ದರು. ಚಂದ್ರಶೇಖರ್ ಮನೆಯ ಟೆರೇಸ್​ ಮೇಲೆ ಕೊಲೆ ನಡೆಸಿದ್ದು, ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಿ ಹತ್ಯೆಗೈಯ್ಯಲಾಗಿದೆ. ಆಂಧ್ರ ಪ್ರದೇಶ (Andhra Pradesh) ಮೂಲದವರಾದ ಚಂದ್ರಶೇಖರ್ ಕಳೆದಎಂಟು ವರ್ಷಗಳಿಂದ ಯಲಹಂಕದಲ್ಲಿ ವಾಸವಾಗಿದ್ದರು. ಚಂದ್ರಶೇಖರ್ ಪತ್ನಿಯೇ ಗೆಳೆಯನ ಜೊತೆ ಸೇರಿ ಕೊಲೆ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ. ಹಿನ್ನೆಲೆ ಪೊಲೀಸರು ಪತ್ನಿ ಶ್ವೇತಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.


ಸದ್ಯ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಚಂದ್ರಶೇಖರ್ ಕುಟುಂಬಸ್ಥರು ಮತ್ತು ನೆರೆಹೊರೆ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.


ಚಂದ್ರಶೇಖರ್ ಬಾಮೈದ ಭಾಸ್ಕರ್, ಸೋದರಿಯನ್ನು ಪ್ರೀತಿಸುತ್ತಿದ್ದ ಲೋಕೇಶ್ ಎಂಬವನು ಈ ಕೊಲೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


ಚಂದ್ರಶೇಖರ್ ಪತ್ನಿಯನ್ನು ಪ್ರೀತಿಸುತ್ತಿದ್ದ ಲೋಕೇಶ್


ಈ ಹಿಂದೆ ಲೊಕೇಶ್ ಎಂಬಾತ ಅಕ್ಕನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ಲೋಕೇಶ್ ಹಿಂದೂಪುರದ ನಿವಾಸಿಯಾಗಿದ್ದು, ಮದುವೆ ಆದ್ರೂ ಪ್ರೀತಿಸುವಂತೆ ಅಕ್ಕನ ಹಿಂದೆ ಬಿದ್ದಿದ್ದನು. ಪ್ರೀತಿ ನಿರಾಕರಣೆ ಮಾಡಿದ ಬಳಿಕ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದನು. ಈ ಹಿನ್ನೆಲೆ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು ಎಂದು ಭಾಸ್ಕರ್ ಹೇಳಿದ್ದಾರೆ.


man kills chops off his private part in bengaluru mrq
ಘಟನೆ ನಡೆದ ಸ್ಥಳ


ಲೋಕೇಶ್ ಮೇಲೆ ಭಾಸ್ಕರ್ ಅನುಮಾನ


ದೂರು ದಾಖಲಾದ ವೇಲೆ ಪೊಲೀಸ್ ಠಾಣೆ ಬಳಿಯೇ ಅಕ್ಕ ಚಪ್ಪಲಿಯಲ್ಲಿ ಲೋಕೇಶ್​ನಿಗೆ ಹೊಡೆದಿದ್ದರು. ಇದಾದ ಬಳಿಕ ಅಕ್ಕ ಮತ್ತು ಬಾವನನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಮೂರು ತಿಂಗಳ ಹಿಂದೆ ಯಲಹಂಕಗೆ ಬಂದಿದ್ದರು. ಹಿಂದೂಪುರದಿಂದ ಬೆಂಗಳೂರಿಗೆ ಬಂದು ಲೋಕೇಶ್​ ಈ ಕೊಲೆ ಮಾಡಿದ್ದಾನೆ ಎಂದು ಭಾಸ್ಕರ್ ಆರೋಪಿಸಿದ್ದಾರೆ.


ತಾಯಿಯ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಮಗಳು


ಅಕ್ರಮ ಸಂಬಂಧವೊಂದು ಕ್ರೈಂ ಸ್ಟೋರಿಯಾಗಿ ಬದಲಾಗಿದೆ. ತಾಯಿ ಪರ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದನ್ನು ಮಗಳು ವಿರೋಧಿಸಿದ್ದಾಳೆ. ಎಷ್ಟೇ ಹೇಳಿದರೂ ತಾಯಿ ಕೇಳದ ಕಾರಣ ಯಾರೂ ಊಹಿಸದ ನಿರ್ಧಾರಕ್ಕೆ ಮಗಳು ಬಂದು ಬಿಟ್ಟಿದ್ದಾಳೆ.


man kills chops off his private part in bengaluru mrq
ಘಟನೆ ನಡೆದ ಸ್ಥಳ


ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂ ಮೂಲದ ರಾಮಚಂದ್ರ ರೆಡ್ಡಿ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯಲ್ಲಿ ನೆಲೆಸಿದ್ದರು. ಈ ವೇಳೆ ಐತಾನಗರದ ಮಹಿಳೆಯ ಜತೆಗಿನ ಪರಿಚಯ ವಿವಾಹೇತರ ಸಂಬಂಧಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ:  Dharwad: ಫೋನ್ ಮಾಡಿ ಸಂಪರ್ಕಕ್ಕೆ ಬರುವಂತೆ ಒತ್ತಡ; ಸಲಿಂಗಕಾಮಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ


ಮಲಗಿದ್ದ ವೇಳೆ ಮರ್ಮಾಂಗ ಕಟ್


ರಾತ್ರಿ ಮಹಿಳೆ ಹಾಗೂ ಆಕೆಯ ಗೆಳೆಯ ನಿದ್ದೆಗೆ ಜಾರಿದ್ದಾರೆ. ಅದೇ ವೇಳೆಗೆ ಮನೆಗೆ ಬಂದ ಮಹಿಳೆಯ ಮಗಳು ಬ್ಲೇಡ್ ನಿಂದ ರಾಮಚಂದ್ರ ರೆಡ್ಡಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ.

ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ


ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಎಂದು ಹೇಳಿ ಜೋಡಿಯನ್ನು ಕೊಲೆ (Couple Murder) ಮಾಡಿರುವ ಘಟನೆ ಬಾಗಲಕೋಟೆಯಲ್ಲಿ (Bagalkot) ಬೆಳಕಿಗೆ ಬಂದಿದೆ. ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು.


man kills chops off his private part in bengaluru mrq
ಯಲಹಂಕ ಆಸ್ಪತ್ರೆ


ಯುವಕನ ತಾಯಿ ಮಗ ಕಾಣಿಸುತ್ತಿಲ್ಲ (Son Missing) ಎಂದು ದೂರು ದಾಖಲಿಸಿದ್ದರು. ಇತ್ತ ಮಗಳನ್ನು ಅಪಹರಿಸಲಾಗಿದೆ (Kidnap Case) ಎಂದು ಅಪ್ರಾಪ್ತೆಯ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರು ತನಿಖೆ (Police Investigation) ವೇಳೆ ಅಪ್ರಾಪ್ತೆಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ (Honour Killing) ಬೆಳಕಿಗೆ ಬಂದಿದೆ.


ಇದನ್ನೂ ಓದಿ:  Belagavi Crime News: ಕ್ರಿಮಿನಾಶಕ ಸೇವಿಸಿದ ಗಂಡ ಸಾವು, ಒಂದೂವರೆ ವರ್ಷದ ಕಂದಮ್ಮನ ಕೊಂದು ನೇಣಿಗೆ ಶರಣಾದ ಪತ್ನಿ

 ಕಾಣೆಯಾಗಿದ್ದಾರೆ ಎಂದು ಹೇಳಲಾಗಿದ್ದ ಜೋಡಿಯ ಕೊಲೆ ನಡೆದಿರುವ ವಿಷಯ ಕೇಳಿ ಬಾಗಲಕೋಟೆಯ ಜನರು ಬೆಚ್ಚಿ ಬಿದ್ದಿದ್ದಾರೆ.

Published by:Mahmadrafik K
First published: